Actress Lavanya: ಹಸೆಮಣೆ ಏರಿದ ನಟಿ ಲಾವಣ್ಯಾ, ನಟ ಶಶಿ ಹೆಗ್ಡೆ ಜೊತೆ ಮದುವೆ
Serial Actress Wedding: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಒಂದು ಅದ್ಭುತ ಪ್ರಯತ್ನ. ಈ ಧಾರಾವಾಹಿಯಲ್ಲಿ ಪದ್ಮಾ ಪಾತ್ರದಲ್ಲಿ ನಟಿಸುವ ಲಾವಣ್ಯ ಎಲ್ಲರಿಗೂ ಚಿರಪರಿಚಿತ. ಇದೀಗ ನಟಿ ತಮ್ಮ ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿದಿದದ್ದು, ಮದುವೆಯ ಫೋಟೋಗಳು ಇಲ್ಲಿದೆ.
ಕಿರುತೆರೆಯಲ್ಲಿ ಒಬ್ಬರಾದ ಮೇಲೆ ಒಬ್ಬರು ವಿವಾಹವಾಗುತ್ತಿದ್ದು, ಸದ್ದಿಲ್ಲದೇ ಹಸೆಮಣೆ ಏರುತ್ತಿದ್ದಾರೆ. ಅಗ್ನಿ ಸಾಕ್ಷಿಯ ಐಶ್ವರ್ಯ ಸಾಲಿಮಠ್, ಲಕ್ಮಿ ಬಾರಮ್ಮದ ಚಿನ್ನು ಪಾತ್ರಧಾರಿ ಹೀಗೆ ಎಲ್ಲರೂ ವಿವಾಹ ಬಂದಕ್ಕೆ ಒಳಗಾಗುತ್ತಿದ್ದಾರೆ.
2/ 8
ಇದೀಗ ದಾಸ ಪುರಂದರ ಧಾರವಾಹಿಯ ಪದ್ಮಾ ಖ್ಯಾತಿಯ ನಟಿ ಲಾವಣ್ಯ ಸರದಿ. ತಾವು ಪ್ರೀತಿಸುತ್ತಿದ್ದ ಕಿರುತೆರೆ ನಟ ಶಶಿ ಹಗ್ಡೆ ಜೊತೆ ನಟಿ ಸಪ್ತಪದಿ ತುಳಿದಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.
3/ 8
ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಮುದೆಯಲ್ಲಿ ಕಿರುತೆರೆಯ ಗೆಳೆಯ ಗೆಳತಿಯರೂ ಸಹ ಭಾಗವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
4/ 8
ಇನ್ನು ಲಾವಣ್ಯ ಮದುವೆಯ ಫೋಟೋವನ್ನು ಹಂಚಿಕೊಂಡು ಖುಷಿಯನ್ನು ನಿಜಕ್ಕೂ ವರ್ಣನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
5/ 8
hಆಗೆಯೇ ನಟ ಶಶಿ ಹೆಗ್ಡೆ ಕೂಡ ವರ್ಷಗಳಿಂದ ಕಂಡ ಕನಸು ನನಸಾಗಿ ಎರಡು ದಿನಗಳಾಯಿತು.. ಸಿಕ್ಕಳು ನಮ್ಮ ಮನೆಯ ಅರಸಿ, ನೀವೆಲ್ಲರು ನಮಗೆ ಹರಸಿ ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
6/ 8
ರಾಜ ರಾಣಿ ಧಾರಾವಾಹಿ ಶೋ ಮೂಲಕ ಪರಿಚಯವಾದ ಈ ಜೋಡಿಯ ಸ್ನೇಹ ಪ್ರೇಮಕ್ಕೆ ತಿರುಗಿದ್ದು, 4 ವರ್ಷಗಳ ಕಾಲ ಪ್ರೀತಿಸಿ ಇದೀಗ ಸತಿ ಪತಿಗಳಾಗಿದ್ದಾರೆ.
7/ 8
ಈಗ ಇಬ್ಬರ ಮದುವೆಯ ಫೋಟೋಗಳ ಜೊತೆ ಪ್ರೀ ವೆಡ್ಡಿಂಗ್ ವಿಡಿಯೋ ಸಹ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.
8/ 8
ದಾಸ ಪುರಂದರ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಲಾವಣ್ಯ ಕಿರುತೆರೆಯಲ್ಲಿ ಇನ್ನೂ ಹೆಚ್ಚಿನ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.