Krithi Shetty: ಪ್ಯಾರಿಸ್ನಲ್ಲಿ ಸುಂದರಿ ಕೃತಿ ಶೆಟ್ಟಿ ಪೋಸ್, ಐಫೆಲ್ ಟವರ್ ಮುಂದೆ ಮಿರಿಮಿರಿ ಮಿಂಚಿದ ಕನ್ನಡತಿ!
Krithi Shetty: ಕನ್ನಡದ ಸುಂದರಿ ಟಾಲಿವುಡ್ ನಟಿ ಕೃತಿ ಶೆಟ್ಟಿ ಸದ್ಯ ಪ್ಯಾರಿಸ್ನಲ್ಲಿದ್ದು, ಫುಲ್ ಮಸ್ತಿ ಮೋಡ್ನಲ್ಲಿದ್ದಾರೆ. ಅವರ ಒಂದು ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ಕೃತಿ ಶೆಟ್ಟಿ(Kriti Shetty).. ಕನ್ನಡದ ಮುದ್ದು ಮುಖದ ಹುಡುಗಿ, ನ್ಯಾಷನಲ್ ಕ್ರಶ್(National Crush) ರಶ್ಮಿಕಾ ಮಂದಣ್ಣ(Rashmika Mandanna) ಅವರನ್ನು ಬಿಟ್ಟರೆ ಟಾಲಿವುಡ್(Tollywood)ನಲ್ಲಿ ಶೈನ್ ಆಗುತ್ತಿರುವ ನಟಿ ಅಂದರೆ ಕೃತಿ ಶೆಟ್ಟಿ
2/ 9
ಟಾಲಿವುಡ್ ಪರದೆಯ ಮೇಲೆ ಮಿಂಚುತ್ತಿರುವ ಈ ಮಂಗಳೂರು ಮೂಲದ ನಟಿ, ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಅಷ್ಟೇ ಏಕೆ ಸಾಮಾಜಿಕ ಜಾಲತಾಣ ಸೇರಿ ಎಲ್ಲಿ ನೋಡಿದರಲ್ಲಿ ಆಕೆಯ ಫೋಟೋ, ವಿಡಿಯೋ ಹರಿದಾಡುತ್ತಿದೆ.
3/ 9
ಇದೀಗ ಪ್ಯಾರಿಸ್ನಲ್ಲಿರುವ ಅವರ ಫೋಟೋ ಫುಲ್ ವೈರಲ್ ಆಗಿದ್ದು, ಹಾಲಿಡೇ ಎಂಜಾಯ್ ಮಾಡ್ತಿರುವ ನಟಿ ನೋಡಿ ಅಭಿಮಾನಿಗಳು ಸೂಪರ್ ಎಂದಿದ್ದಾರೆ.
4/ 9
ಸೋಶಿಯಲ್ ಮೀಡಿಯಾದಲ್ಲಿ ಕೃತಿ ಫೋಟೋಗಳು ವೈರಲ್ ಆಗಿದ್ದು, ಶೂಟಿಂಗ್ ಬ್ಯುಸಿ ನಡುವೆ ಸ್ವಲ್ಪ ರಿಲ್ಯಾಕ್ಸ್ ಮಾಡ್ತಿದ್ದಾರೆ ಈ ಸುಂದರಿ.
5/ 9
ಇನ್ನು ಐಫೆಲ್ ಟವರ್ ಮುಂದೆ ನಿಂತು ಕೃತಿ ಪೋಸ್ ಕೊಟ್ಟಿದ್ದು, ಬೆಳಕಿನಿಂದ ಜಗಮಗಿಸುತ್ತಿರುವ ಟವರ್ ಮುಂದೆ ಈ ಸುಂದರಿ ಇನ್ನೂ ಚೆಂದ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ಗಳ ಮಳೆ ಸುರಿಸಿದ್ದಾರೆ.
6/ 9
ಬಾಲಿವುಡ್ನಲ್ಲಿ 2019ರಲ್ಲಿ ತೆರೆಕಂಡ ‘ಸೂಪರ್ 30’ ಸಿನಿಮಾದ ಮೂಲಕ ಕೃತಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಹೃತಿಕ್ ರೋಷನ್ ಅಭಿನಯದ ಈ ಸಿನಿಮಾದಲ್ಲಿ ಕಾಣಿಸಿಕೊಂಡರು.
7/ 9
ಆ ಬಳಿಕ ಟಾಲಿವುಡ್ ಕರೆಗೆ ಕಿವಿಗೊಟ್ಟ ಕೃತಿ ‘ಉಪ್ಪೆನಾ ’ಎಂಬ ಸಿನಿಮಾದಲ್ಲಿ ಮೊದಲು ನಟಿಸಿದರು. ಕಳೆದ ಫೆ .12ಕ್ಕೆ ಈ ಸಿನಿಮಾ ತೆರೆಕಂಡು 75 ಕೋಟಿ ರೂ ಕಲೆಕ್ಷನ್ ಮಾಡಿತು. ಈ ಸಿನಿಮಾದಲ್ಲಿನ ಕೃತಿ ನಟನೆ ಆಕೆಯ ನಸೀಬನ್ನೇ ಬದಲಾಯಿತು ಎಂದರೆ ತಪ್ಪಾಗಲಾರದು.
8/ 9
ಅಷ್ಟೇ ಏಕೆ ತೆಲುಗು ಸಿನಿ ಪ್ರಿಯರ ಮನಗೆದ್ದಿತು. ಆ ಬಳಿಕ ಮತ್ತಷ್ಟು ಆಫರ್ಗಳನ್ನು ಕೃತಿ ತನ್ನದಾಗಿಸಿಕೊಂಡಿದ್ದಾರೆ. ಸದ್ಯ ನಟ ನಾಣಿ ಜೊತೆಗೆ ‘ಶ್ಯಾಮ್ ಸಿಂಗ ರಾಯ್ ’ಸಿನಿಮಾಗೆ ನಾಯಕಿಯಾಗಿದ್ದಾರೆ. ‘ಅಮ್ಮಾಯಿ ಗುರುಂಚಿ ಮೀಕು ಚಪ್ಪಾಲಿ’ಸಿನಿಮಾದಲ್ಲೂ ನಟಿಸುತ್ತಿದ್ದಾರಂತೆ.
9/ 9
ಸದ್ಯಕ್ಕೆ ಟಾಲಿವುಡ್ನಲ್ಲಿ ಈಕೆಗೆ ಒಳ್ಳೆ ಬೇಡಿಕೆ(Demand) ಇದೆ.ಕೃತಿ ಶೆಟ್ಟಿಗೆ ಅದಾಗಲೇ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ