ಅಭಿನಯದ ಜೊತೆಗೆ ಹೊಸ ಉದ್ಯಮ ಆರಂಭಿಸಿದ ನಟಿ Krishi Thapanda
ಸಿನಿಮಾಗಳಲ್ಲಿ ನಟಿಸುತ್ತಲೇ ತಮ್ಮದೇ ಆದ ಉದ್ಯಮವನ್ನು ಆರಂಭಿಸುವ ಸೆಲೆಬ್ರಿಟಿಗಳನ್ನು ನೋಡಿದ್ದೇವೆ. ಬಾಲಿವುಡ್, ಟಾಲಿವುಡ್ ಸೇರಿದಂತೆ ಸ್ಯಾಂಡಲ್ವುಡ್ನಲ್ಲೂ ಇಂತಹ ನಟಿ-ನಟಿಯರನ್ನು ಕಾಣಬಹುದಾಗಿದೆ. ನಟಿ ಕೃಷಿ ತಾಪಂಡ (Krishi Thapanda) ಈಗ ಇಂತಹ ಸೆಲೆಬ್ರಿಟಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. (ಚಿತ್ರಗಳು ಕೃಪೆ: ಕೃಷಿ ತಾಪಂಡ ಇನ್ಸ್ಟಾಗ್ರಾಂ ಖಾತೆ)
ಸಿನಿ ತಾರೆಯರು ಮಲ್ಟಿಪ್ಲೆಕ್ಸ್ ಬ್ಯುಸಿನೆಸ್, ರಿಯಲ್ ಎಸ್ಟೇಟ್, ಜಿಮ್, ಪ್ರೊಡಕ್ಷನ್ ಹೌಸ್, ಹೋಟೆಲ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಹಣ ಹೂಡುವ ಮೂಲಕ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಇಂತಹ ನಟ-ನಟಿಯರ ಸಾಲಿಗೆ ನಟಿ ಕೃಷಿ ತಾಪಂಡ ಸಹ ಸೇರಿಕೊಂಡಿದ್ದಾರೆ.
2/ 7
ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಕೃಷಿ ತಾಪಂಡ ಅವರು ತಮ್ಮದೇ ಆದ ಉದ್ಯಮವನ್ನು ಆರಂಭಿಸಿದ್ದಾರೆ. ಫ್ಯಾಷನ್ ಬ್ರ್ಯಾಂಡ್ ಒಂದನ್ನು ಆರಂಭಿಸಿದ್ದು, ಅದರ ಲೊಗೋವನ್ನು ಇತ್ತೀಚೆಗಷ್ಟೆ ಲಾಂಚ್ ಮಾಡಿದ್ದರು.
3/ 7
ಕೃಷಿ ಅವರು ಬಟ್ಟೆಯ ಬ್ರ್ಯಾಂಡ್ ಅನ್ನು ಪರಿಚಯಿಸಿದ್ದು, ಅದಕ್ಕೆ ಬೀರು () ಎಂದು ಹೆಸರಿಟ್ಟಿದ್ದಾರೆ. ಆಡು ಭಾಷೆಯಲ್ಲಿ ಬೀರು (Beeru) ಎಂದರೆ ಬಟ್ಟೆ, ಹ ಹಾಗೂ ಆಭರಣಗಳನ್ನು ಸಂಗ್ರಹಿಸಿಡುವ ಕಪಾಟು ಎಂದರ್ಥ.
4/ 7
ನವರಾತ್ರಿ ಹಬ್ಬದ ಶುಭ ಸಮಯದಲ್ಲಿ ತಮ್ಮ ಫ್ಯಾಷನ್ ಬ್ರ್ಯಾಂಡ್ನ ವಿನ್ಯಾಸಿತ ಉಡುಪುಗಳನ್ನು ಮಾರುಕಟ್ಟೆಗೆ ರಿಲೀಸ್ ಮಾಡಿದ್ದಾರೆ. ಇನ್ನು ಇವರ ತಂಡದಲ್ಲಿ 12 ಮಂದಿ ಇದ್ದಾರಂತೆ.
5/ 7
ಈ ಉದ್ಯಮದಲ್ಲಿ ಕೃಚಿ ತಾಪಂಡ ಅವರಿಗೆ ಫ್ಯಾಷನ್ ಡಿಸೈನರ್ ನಿಖತಾ ಭರಣ ಅವರು ಜೊತೆಯಾಗಿದ್ದಾರೆ. ಕಡಿಮೆ ಹಣಕ್ಕೆ ಗುಣಮಟ್ಟದ ಉಡುಪುಗಳನ್ನು ಕೊಡುವುದೇ ತಮ್ಮ ಉದ್ದೇಶ ಎಂದಿದ್ದಾರೆ ಕೃಷಿ ತಾಪಂಡ.
6/ 7
ತಮಿಳು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕೃಷಿ ತಾಂಪಡ ಅವರ ಮೊದಲ ಕನ್ನಡ ಸಿನಿಮಾ 2016ರಲ್ಲಿ ತೆರೆ ಕಂಡ ಅಕೀರ ಚಿತ್ರ. ಇತ್ತೀಚೆಗಷ್ಟೆ ಕೃಷಿ ನಟಿಸಿರುವ 'ಲಂಕೆ' ಸಿನಿಮಾ ರಿಲೀಸ್ ಆಗಿದೆ. ಇದರಲ್ಲಿ ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ್ದಾರೆ.
7/ 7
'ಕಹಿ', 'ಎರಡು ಕನಸು', 'ಇರಾ', 'ಕನ್ನಡಕ್ಕಾಗಿ ಒಂದನ್ನು ಒತ್ತಿ', 'ಭರಾಟೆ' ಸಿನಿಮಾಗಳಲ್ಲಿ ಕೃಷಿ ತಾಪಂಡ ನಟಿಸಿದ್ದಾರೆ.