ಮಹಾನಟಿ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಟಿ ಕೀರ್ತಿ ಸುರೇಶ್ಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕೇರಳದಲ್ಲಿ ಜನಿಸಿದ ಕೀರ್ತಿ, ಕಾಲಿವುಡ್, ಟಾಲಿವುಡ್ನಲ್ಲಿ ಮಿಂಚಿದ್ದಾರೆ. ಇದೀಗ ಮಹಾ ನಟಿ ಮದುವೆಗೆ ರೆಡಿಯಾಗಿದ್ದಾರೆ.
2/ 8
30 ವರ್ಷ ವಯಸ್ಸಾಗಿದ್ದು ಕೀರ್ತಿ ಸುರೇಶ್ ಇನ್ನೂ ಮದುವೆಯಾಗಿಲ್ಲ. ಕಳೆದ ಕೆಲವು ವರ್ಷಗಳಿಂದ ಕೀರ್ತಿ ಸುರೇಶ್ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಸುದ್ದಿಗಳು ಹರಿದಾಡುತ್ತಿವೆ. ಕೀರ್ತಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯನ್ನು ಇಂಡಿಯಾ ಗ್ಲಿಟ್ಜ್ ವರದಿ ಮಾಡಿತ್ತು.
3/ 8
ಕೀರ್ತಿ ಸುರೇಶ್ ಮದುವೆಯ ಬಗ್ಗೆ ಅನೇಕ ಗಾಸಿಪ್ ಕೇಳಿ ಬಂದಿತ್ತು. 30 ವರ್ಷದ ನಟಿ ತಮಿಳಿನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಅನಿರುದ್ಧ್ ಜೊತೆಗಿನ ತನ್ನ ಮದುವೆಯ ನಟಿ ಕೀರ್ತಿ ತಳ್ಳಿ ಹಾಕಿದ್ದರು.
4/ 8
ಆದ್ರೆ ಇದೀಗ ಹೊಸ ಸುದ್ದಿ ಹೊರಬಿದ್ದಿದೆ. ನಟಿ ಕೀರ್ತಿ ಕಳೆದ 13 ವರ್ಷಗಳಿಂದ ರೆಸಾರ್ಟ್ ಮಾಲೀಕನನ್ನು ಪ್ರೀತಿಸುತ್ತಿದ್ದರಂತೆ. ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದು, ಅಂದಿನಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
5/ 8
ಇಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರಂತೆ. 4 ವರ್ಷಗಳ ನಂತರ ಮದುವೆ ಆಗಬಹುದು ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
6/ 8
ಮದುವೆ ಬಗ್ಗೆ ಸ್ವತಃ ಕೀರ್ತಿ ಅವರೇ ಸ್ಪಷ್ಟನೆ ನೀಡಿಲ್ಲ. ಮಹಾನಟಿ ಏನ್ ಹೇಳ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ.
7/ 8
2018ರಲ್ಲಿ ಬಂದ ಮಹಾನಟಿ ಸಿನಿಮಾ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ಯಶಸ್ಸು ಸಿಕ್ಕಿಲ್ಲವಾದರೂ ಅವರ ಕಾಲ್ಶೀಟ್ಗಾಗಿ ನಿರ್ಮಾಪಕರು ಮುಗಿ ಬೀಳುತ್ತಿದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.
8/ 8
ಭೋಲಾ ಶಂಕರ್ ಚಿತ್ರದಲ್ಲಿ ಕೀರ್ತಿ ಸುರೇಶ್ ಚಿರಂಜೀವಿ ಅವರ ತಂಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ವೇದಲಂ ಚಿತ್ರದ ತೆಲುಗು ರಿಮೇಕ್ ಆಗಿ ಈ ಚಿತ್ರ ಬರುತ್ತಿದೆ. ಮೆಹರ್ ರಮೇಶ್ ನಿರ್ದೇಶನ ಮಾಡುತ್ತಿದ್ದಾರೆ.