Surya-Jyothika: ಮುಂಬೈನಲ್ಲಿ 70 ಕೋಟಿ ಮನೆ ಖರೀದಿಸಿದ ಸೂರ್ಯ; ಮಕ್ಕಳ ಜೊತೆ ಜ್ಯೋತಿಕಾ ಮುಂಬೈಗೆ ಶಿಫ್ಟ್ ಆಗಿದ್ಯಾಕೆ?

ಸೌತ್ ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ನಟಿ ಜ್ಯೋತಿಕಾ ಬಹಳ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದರು. ನಟ ಸೂರ್ಯ ಜೊತೆ ಮದುವೆಯಾದ ನಂತರ ಮನೆ, ಮಕ್ಕಳು ಅಂತ ನಟಿ ಬ್ಯುಸಿ ಆಗಿದ್ದರು. ಸುಮಾರು 25 ವರ್ಷಗಳಿಂದ ಹಿಂದಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇದೀಗ ನಟಿ ಮುಂಬೈಗೆ ಶಿಫ್ಟ್ ಆಗಿದ್ದಾರೆ.

First published:

  • 17

    Surya-Jyothika: ಮುಂಬೈನಲ್ಲಿ 70 ಕೋಟಿ ಮನೆ ಖರೀದಿಸಿದ ಸೂರ್ಯ; ಮಕ್ಕಳ ಜೊತೆ ಜ್ಯೋತಿಕಾ ಮುಂಬೈಗೆ ಶಿಫ್ಟ್ ಆಗಿದ್ಯಾಕೆ?

    ನಟಿ ಜ್ಯೋತಿಕಾ 'ಶ್ರೀ' ಎನ್ನುವ ಹಿಂದಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ ಎಂಬ ಸುದ್ದಿ ಹೊರ ಬಂದಿದೆ. ಇದೇ ವೇಳೆ ನಟ ಸೂರ್ಯ ಅವರು ಶಿವ ನಿರ್ದೇಶನದ 42ನೇ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಇದು ಬಿಗ್ ಬಜೆಟ್ ಸಿನಿಮಾ ಆಗಿದ್ದು, ಭಾರೀ ನಿರೀಕ್ಷೆಗಳೊಂದಿಗೆ ನಿರ್ಮಿಸಲಾಗ್ತಿದೆ.

    MORE
    GALLERIES

  • 27

    Surya-Jyothika: ಮುಂಬೈನಲ್ಲಿ 70 ಕೋಟಿ ಮನೆ ಖರೀದಿಸಿದ ಸೂರ್ಯ; ಮಕ್ಕಳ ಜೊತೆ ಜ್ಯೋತಿಕಾ ಮುಂಬೈಗೆ ಶಿಫ್ಟ್ ಆಗಿದ್ಯಾಕೆ?

    ಈ ಚಿತ್ರದಲ್ಲಿ ಸೂರ್ಯ ಜೊತೆಗೆ ಬಾಲಿವುಡ್ ನಟಿ ದಿಶಾ ಪಟಾನಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಸೂರ್ಯ ಕೂಡ ಪತ್ನಿ ಜ್ಯೋತಿಕಾ ಅವರೊಂದಿಗೆ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗ್ತಿದೆ. ಅವರ ಮಗಳು ದಿಯಾ ಮತ್ತು ಮಗ ದೇವ್ ಕೂಡ ಒಟ್ಟಿಗೆ ಶಿಫ್ಟ್ ಆಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲ ಫೋಟೋಗಳು ಕೂಡ ವೈರಲ್ ಆಗಿದೆ.

    MORE
    GALLERIES

  • 37

    Surya-Jyothika: ಮುಂಬೈನಲ್ಲಿ 70 ಕೋಟಿ ಮನೆ ಖರೀದಿಸಿದ ಸೂರ್ಯ; ಮಕ್ಕಳ ಜೊತೆ ಜ್ಯೋತಿಕಾ ಮುಂಬೈಗೆ ಶಿಫ್ಟ್ ಆಗಿದ್ಯಾಕೆ?

    ತಮ್ಮ ಮಕ್ಕಳ ಫೋಟೋಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ ಎಂದು ನಟಿ ಜ್ಯೋತಿಕಾ ಮಾಧ್ಯಮಗಳಿಗೆ ವಿನಂತಿಸಿದ್ದಾರೆ. ಮುಂಬೈನಲ್ಲಿ 70 ಕೋಟಿ ಮೌಲ್ಯದ ಹೊಸ ಅಪಾರ್ಟ್ಮೆಂಟ್ ಕೂಡ ಖರೀದಿಸಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ.

    MORE
    GALLERIES

  • 47

    Surya-Jyothika: ಮುಂಬೈನಲ್ಲಿ 70 ಕೋಟಿ ಮನೆ ಖರೀದಿಸಿದ ಸೂರ್ಯ; ಮಕ್ಕಳ ಜೊತೆ ಜ್ಯೋತಿಕಾ ಮುಂಬೈಗೆ ಶಿಫ್ಟ್ ಆಗಿದ್ಯಾಕೆ?

    ನಟ ಸೂರ್ಯ ಅಕ್ಷಯ್ ಕುಮಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇದನ್ನು ಸುಧಾ ಕೊಂಗ್ರಾ ನಿರ್ದೇಶಿಸುತ್ತಿದ್ದಾರೆ. ಹಿಂದಿ ರಿಮೇಕ್​ನಲ್ಲಿ ನಟ ಸೂರ್ಯ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸೂರ್ಯ ತಮಿಳಿನ ಸ್ಟಾರ್ ನಟರಾಗಿದ್ದಾರೆ.

    MORE
    GALLERIES

  • 57

    Surya-Jyothika: ಮುಂಬೈನಲ್ಲಿ 70 ಕೋಟಿ ಮನೆ ಖರೀದಿಸಿದ ಸೂರ್ಯ; ಮಕ್ಕಳ ಜೊತೆ ಜ್ಯೋತಿಕಾ ಮುಂಬೈಗೆ ಶಿಫ್ಟ್ ಆಗಿದ್ಯಾಕೆ?

    ನಟಿ ಜ್ಯೋತಿಕಾ ಮತ್ತು ನಟ ಸೂರ್ಯ ಇಬ್ಬರೂ ತಮಿಳು ಮತ್ತು ಹಿಂದಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಬಯಸುತ್ತಾರೆ. ಇದೀಗ ಸೂರ್ಯ ಮುಂಬೈಗೆ ಶಿಫ್ಟ್ ಆಗಿದ್ದು, ಹಿಂದಿ ಸಿನಿಮಾದಲ್ಲಿ ನಟಿಗಳಲ್ಲಿ ಮತ್ತೆ ಜ್ಯೋತಿಕಾ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 67

    Surya-Jyothika: ಮುಂಬೈನಲ್ಲಿ 70 ಕೋಟಿ ಮನೆ ಖರೀದಿಸಿದ ಸೂರ್ಯ; ಮಕ್ಕಳ ಜೊತೆ ಜ್ಯೋತಿಕಾ ಮುಂಬೈಗೆ ಶಿಫ್ಟ್ ಆಗಿದ್ಯಾಕೆ?

    ‘ಶ್ರೀ’ ಚಿತ್ರದಲ್ಲಿ ಜ್ಯೋತಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ರಾಜ್​ಕುಮಾರ್ ರಾವ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಜ್ಯೋತಿಕಾ ಜೊತೆಗಿನ ಫೋಟೋವನ್ನು ಹಂಚಿಕೊಂಡ ರಾಜ್​ಕುಮಾರ್, ಚಿತ್ರದ ಸಿಬ್ಬಂದಿ ಸದಸ್ಯರಿಗೆ ಧನ್ಯವಾದವನ್ನೂ ಸಹ ತಿಳಿಸಿದ್ದಾರೆ.

    MORE
    GALLERIES

  • 77

    Surya-Jyothika: ಮುಂಬೈನಲ್ಲಿ 70 ಕೋಟಿ ಮನೆ ಖರೀದಿಸಿದ ಸೂರ್ಯ; ಮಕ್ಕಳ ಜೊತೆ ಜ್ಯೋತಿಕಾ ಮುಂಬೈಗೆ ಶಿಫ್ಟ್ ಆಗಿದ್ಯಾಕೆ?

    ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿ ಆಗಿರುವ ಸೂರ್ಯ, ಮಾಧ್ಯಮಗಳು ಮಕ್ಕಳ ಫೋಟೋ ತೆಗೆಯಲು ಹೋದ ವೇಳೆ ಕಿಡಿಕಾರಿದ್ರು. ನಿಮಗೆ ಮಕ್ಕಳಿಲ್ವಾ ಸರ್ ಎಂದು ಕೋಪದಲ್ಲೇ ಪ್ರಶ್ನೆ ಮಾಡಿದ್ರು.

    MORE
    GALLERIES