Harshika Poonacha: ಕಾಸಿನ ಸರದಲ್ಲಿ ಸೀಮಂತ ಸಂಭ್ರಮಿಸಿದ ನಟಿ ಹರ್ಷಿಕಾ!
ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಅವರ ಸೀಮಂತ ಫೋಟೋಸ್ ವೈರಲ್ ಆಗಿವೆ. ನಟಿ ಸುಂದರವಾದ ಹಸಿರು ಸೀರೆ ಉಟ್ಟು ಕಾಸಿನ ಸರ ಧರಿಸಿ ಸುಂದರವಾದ ನಗು ಚೆಲ್ಲಿದ್ದಾರೆ.
1/ 10
ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಅವರ ಸೀಮಂತ ಫೋಟೋಗಳು ವೈರಲ್ ಆಗಿವೆ. ಇದರಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ.
2/ 10
ಇದೇನಪ್ಪಾ ಮದುವೆಯಾಗದೇನೆ ಹರ್ಷಿಕಾ ಪೂಣಚ್ಚ ಸೀಮಂತ ಮಾಡಿಕೊಂಡಿದ್ದಾರಾ? ನಟಿ ಹಸಿರು ಸೀರೆ ಉಟ್ಟುಕೊಂಡು ಕೇಸರಿ ಬ್ಲೌಸ್ ಧರಿಸಿ ಕಾಣಿಸಿಕೊಂಡಿದ್ದಾರೆ.
3/ 10
ಸುಂದರವಾದ ಆಭರಣಗಳನ್ನು ಧರಿಸಿ ಹಸಿರು ಗಾಜಿನ ಬಳೆಗಳನ್ನು ಧರಿಸಿ ಕಾಣಿಸಿಕೊಂಡ ನಟಿ ಹಣೆಯಲ್ಲಿ ಕುಂಕುಮ ಇಟ್ಟುಕೊಂಡಿದ್ದರು. ಸುಂದರವಾದ ಬಿಂದಿಯನ್ನೂ ಇಟ್ಟಿದ್ದರು.
4/ 10
ನಟಿ ಮಹಿಳೆಯರ ಮಧ್ಯೆ ಸೀಮಂತ ಶಾಸ್ತ್ರಗಳನ್ನು ಮಾಡುವುದು ಕಂಡುಬಂದಿದೆ. ಅವರು ಕೊರಳಲ್ಲಿ ಹಾರ ಧರಿಸಿ ಮಲ್ಲಿಗೆ ಮುಡಿದಿದ್ದರು.
5/ 10
ನಟಿ ಚೋಕರ್ ಧರಿಸಿ ಉದ್ದನೆ ಹಾರಗಳನ್ನು ಕೂಡಾ ಧರಿಸಿದ್ದರು. ಇದರಲ್ಲಿ ನಟಿ ತುಂಬಾ ಖುಷಿ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ.
6/ 10
ಇದು ಹರ್ಚಿಕಾ ಪೂಣಚ್ಚಅವರ ಕಾಸಿನ ಸರ ಸಿನಿಮಾದ ಸೀಮಂತ ಹಾಡಿನ ಶೂಟಿಂಗ್ ಸೀನ್ಗಳು. ನಟಿ ತಮ್ಮ ಸಿನಿಮಾದ ಹಾಡಿನ ಶೂಟಿಂಗ್ ಚಿತ್ರಗಳನ್ನು ಶೇರ್ ಮಾಡಿದ್ದಾರೆ.
7/ 10
ಹರ್ಷಿಕಾ ಅವರಿಗೆ ಉಡಿ ತುಂಬುತ್ತಿರುವ ಶಾಸ್ತ್ರ ಕೂಡಾ ಕಂಡುಬಂದಿದೆ. ನಟಿ ಇದರಲ್ಲಿ ಮಗ್ನರಾಗಿ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದು ಕಂಡುಬಂತು.
8/ 10
ಹರ್ಷಿಕಾ ಶೇರ್ ಮಾಡಿದ ಫೋಟೋಗಳಿಗೆ 3700ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೀವಿಷ್ಟು ಬೇಗ ಮದುವೆ ಆದ್ರೆ ಹೆಂಗೆ ಡಾರ್ಲಿಂಗ್ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
9/ 10
ಇನ್ನು ಕೆಲವರು ಕಮೆಂಟ್ ಮಾಡಿ ಅಯ್ಯೋ ನಿಮ್ಮ ಮದುವೆ ಆಯಿತಾ? ಯಾವಾಗ ಮದುವೆಯಾದ್ರಿ? ಯಾರನ್ನ ಮದುವೆಯಾದ್ರಿ ಎಂದು ನೆಟ್ಟಿಗರು ಕೇಳಿದ್ದಾರೆ.
10/ 10
ಮುದ್ದಾದ ಹರ್ಷಿಕಾಳ "ಕಾಸಿನ ಸರ" ಸಿನಿಮಾದ ಸೀಮಂತ ಹಾಡಿನ ಕ್ಯೂಟ್ ಫೋಟೋಸ್ ಎಂದು ಪೋಸ್ಟ್ಗೆ ಕ್ಯಾಪ್ಶನ್ ನೀಡಿದ್ದು ಇದು ರಿಯಲ್ ಅಲ್ಲ ರೀಲ್ ಸೀಮಂತ ಎಂದು ರಿವೀಲ್ ಮಾಡಿದ್ದಾರೆ.
First published: