ತುಂಬಾ ದಿನ ಆದ್ಮೇಲೆ ನನ್ನ ಹಳೇ ಹಾರ್ಡ್ಡಿಸ್ಕ್ನಲ್ಲಿ ಬ್ಲಾಗ್ ಗೋಸ್ಕರ ಫೋಟೋಗಳು ಹುಡುಕುತ್ತಿದ್ದೆ. ಅದ್ರಲ್ಲಿ ಫ್ರೆಂಡ್ಸ್, ಫ್ಯಾಮಿಲಿ, ಪೆಟ್ಸ್, ಟ್ರಾವೆಲ್ ಅಂತೆಲ್ಲ ಪೋಲ್ಡರ್ಸ್ ಮಾಡಿದಿನಿ. ಫ್ರೆಂಡ್ಸ್ ಫೋಲ್ಡರ್ ನೋಡುವಾಗ, ಎ ಆರ್.ರೆಹಮಾನ್ ಕನ್ಸರ್ಟ್ಗೆ ಹೋಗಿದ್ದ ಫೋಟೋಸ್ ಸಿಕ್ಕಿದ್ವು. ನಮ್ ಬೆಂಗಳೂರು ಪ್ಯಾಲೇಸ್ ಗ್ರೌಂಡ್ನಲ್ಲಿ ನಡೆದಿತ್ತು. ನನ್ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಎಲ್ರೂ ಹೋಗಿದ್ವಿ, ನನ್ ಫ್ರೆಂಡ್, ಅವ್ರ ಫ್ರೆಂಡ್ ಜೊತೆ ಬಂದಿದ್ರು. ಯಾರ್ ಇದು ಇಷ್ಟೊಂದು ದಾಡಿ ಬಿಟ್ಟಿದ್ದಾರೆ ಅನ್ಕೊಂಡು ಕೇಳ್ದೆ.
ಆಮೇಲೆ ಒಂದಿನ ಇಂಡಸ್ಟ್ರಿ ಇವೆಂಟ್ನಲ್ಲಿ ಸಿಕ್ದಾಗ, ಗುರುತು ಹಿಡಿಯೋದು ಸ್ವಲ್ಪ ಕಷ್ಟ ಆಯ್ತು. ಯಾಕಂದ್ರೆ ಕ್ಲೀನ್ ಶೇವಲ್ಲಿದ್ರು (ಚೆನ್ನಾಗ್ ಕಾಣಿಸ್ತಿದ್ರು ಅನ್ನಿ). ನಾವು ಯಾವುದೇ ಫುಲ್ ಸಿನಿಮಾದಲ್ಲಿ ಒಟ್ಟಿಗೆ ಆ್ಯಕ್ಟ್ ಮಾಡಿಲ್ಲ ಆದ್ರೂ ‘ಲೈಫ್ ಜೊತೆ ಒಂದ್ ಸೆಲ್ಫಿ’ ಅನ್ನೋ ಸಿನಿಮಾದಲ್ಲಿ ಸ್ವಲ್ಪ ದಿನ ಒಟ್ಟಿಗೆ ಆ್ಯಕ್ಟ್ ಮಾಡಿದ್ವಿ. ಶೂಟ್ ನಡುವೆ ಮುಂದಿನ ಸಿನಿಮಾಗಳ ಬಗ್ಗೆ, ಊರಿನ ಬಗ್ಗೆ ಮಾತಾಡ್ತಿದ್ವಿ. ಮುಖ್ಯವಾಗಿ ಅವ್ರ ಊರು ಹಾಸನ, ಅರಸೀಕೆರೆ ಅಂತ ಹೇಳಿದಾಗ ಖುಷಿ ಆಯಿತು. ಯಾಕಂದ್ರೆ ನಂಗೆ ಕಾಡು, ಹಳ್ಳಿ, ಪರಿಸರ ಎಲ್ಲಾ ತುಂಬಾ ಖುಷಿ ಕೊಡೋ ವಿಷಯಗಳು.
ಸಿಟಿಗೆ ವಾಪಸ್ ಬಂದ್ಮೇಲೆ ಬರೀ ವರ್ಕೌಟು, ನಿದ್ರೆ ಮಾಡೋದು, ಸಿನಿಮಾ ನೋಡೋದೇ ಆಗಿದೆ ಅಂತೆ. “ಆದ್ರೆ.. ಮನೇಲಿ ನೋಡೋಕೂ ಥಿಯೇಟರ್ ಒಳಗೆ ಸಿನಿಮಾ ನೋಡೋಕೂ ತುಂಬಾ ವ್ಯತ್ಯಾಸ ಇದೆ. ಥಿಯೇಟರ್ ಗೆ ಹೋಗೋದು ಮಿಸ್ ಮಾಡ್ಕೋತಿದೀನಿ. ಥಿಯೇಟರ್ ಓಪನ್ ಆದ್ರೆ ಫಸ್ಟ್ ಹೋಗಿ ಸಿನಿಮಾ ನೋಡೋನು ನಾನೇ ಆಗಿರ್ತೀನಿ ಅಂದ್ರು”. ನಂಗೂ ಅದೇ ಫೀಲಿಂಗ್, ಆದ್ರೆ ಹುಷಾರು.. ನಾವಿನ್ನೂ ತುಂಬಾ ಸಿನಿಮಾ ಮಾಡ್ಬೇಕು, ಜೊತೇಲೂ ಸಿನಿಮಾ ಮಾಡ್ಬೇಕು, ಸೇಫ್ ಆಗಿರಿ ಅಂತ ಟಾಟಾ, ಬೈ, ಬೈ, ಹೇಳ್ಕೊಂಡ್ವಿ.
ಧನಂಜಯ್ ನಂಗೆ ಗೊತ್ತಿರೋ ಹಾಗೆ ಸ್ವಲ್ಪ ಶೈ ಪರ್ಸನ್. ಆದ್ರೆ ತೆರೆ ಮೇಲೆ ಗೊತ್ತಲ್ವಾ? ಹೀರೋ ಆದ್ರೂ, ವಿಲನ್ ಆದ್ರೂ, ಎಲ್ಲ ಪಾತ್ರಗಳಿಗೂ ನ್ಯಾಯ ಕೊಡ್ತಾರೆ. ಸಾಕಷ್ಟು ವಿಭಿನ್ನ ಪಾತ್ರಗಳನ್ನು ಮಾಡ್ತ, ಸ್ಟ್ರಾಂಗ್ ಫ್ಯಾನ್ಬೇಸ್ ಕ್ರಿಯೇಟ್ ಮಾಡ್ಕೊಂಡಿದಾರೆ. ಅವ್ರ ಪಾತ್ರಗಳ ಆಯ್ಕೆ ನೋಡ್ದಾಗ ನಂಗೂ ತುಂಬಾ ಖುಷಿ ಆಗುತ್ತೆ. ಮುಂದಿನ ದಿನಗಳಿಗೆ ಆಲ್ ದಿ ಬೆಸ್ಟ್, ಒಳ್ಳೇದಾಗ್ಲಿ ಧನು.