Hansika Motwani Wedding: ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನ್ಸಿಕಾ
Hansika Motwani Sohael Kathuriya Wedding Photos: ನಟಿ ಹನ್ಸಿಕಾ ಮೊಟ್ವಾನಿ ಅವರು ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿಯ ಮದುವೆಯ ಫೋಟೋಗಳು ಇಲ್ಲಿವೆ.
ಕಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ಅವರು ಬಹುಕಾಲದ ಗೆಳೆಯ ಉದ್ಯಮಿ ಸೋಹೈಲ್ ಕಥುರಿಯಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 7
ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಕೆಲವೊಂದು ಫೋಟೋಗಳು ಅಭಿಮಾನಿಗಳು ಶೇರ್ ಮಾಡಿದ್ದಾರೆ.
3/ 7
ಅವರ ವಿವಾಹ ಸಮಾರಂಭದ ಫೋಟೋ ಹಾಗೂ ವಿಡಿಯೋಗಳನ್ನು ಅವರಿನ್ನೂ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿಲ್ಲ.
4/ 7
ಆದರೆ ಫ್ಯಾನ್ ಪೇಜ್ಗಳು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತಿವೆ. ಮದುವೆಯಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.
5/ 7
ಹನ್ಸಿಕಾ ಸಾಂಪ್ರದಾಯಿಕ ರೆಡ್ ಲೆಹೆಂಗಾವನ್ನು ಧರಿಸಿದ್ದರು. ಸೊಹೈಲ್ ಚಂದದ ಶೆರ್ವಾನಿ ಧರಿಸಿ ವರನ ಲುಕ್ನಲ್ಲಿ ಮಿಂಚಿದ್ದಾರೆ.
6/ 7
ಹನ್ಸಿಕಾ ವಧುವಿನ ಉಡುಗೆಯಲ್ಲಿ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ನಟಿಯ ಬ್ರೈಡಲ್ ಎಂಟ್ರಿ ಕೂಡಾ ವಿಶೇಷವಾಗಿತ್ತು.
7/ 7
ವರಮಾಲಾ ಸಮಾರಂಭದಲ್ಲಿ ಫೈರ್ ವರ್ಕ್ಸ್ ಕೂಡಾ ಮಾಡಲಾಗಿತ್ತು. ವಿವಾಹ ಸಮಾರಂಭದ ನಂತರ ಪತಿ-ಪತ್ನಿಯಾಗಿ ಕೈ ಹಿಡಿದುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಿಂಧಿ ಸಂಪ್ರದಾಯದಂತೆ ಮದುವೆ ನಡೆದಿದೆ.