ಸ್ಯಾಂಡಲ್​ವುಡ್ ಎಂಟ್ರಿಗೂ ಮುನ್ನವೇ ಕನ್ನಡ ಸಿನಿಪ್ರಿಯರ ಕಣ್ಣು ಕುಕ್ಕುತ್ತಿರುವ ಇಶಾ..!

ಸ್ಯಾಂಡಲ್​ವುಡ್​ಗೆ ಪಾದರ್ಪಣೆ ಮಾಡುವ ಮುನ್ನವೇ ಟಾಲಿವುಡ್ ಮಿಂಚುಳ್ಳಿ ಇಶಾ ರೆಬ್ಬಾ ಬಳುಕುವ ದೇಹಸಿರಿಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 'ಅಂತಕು ಮುಂದು ಆ ತರವಾತ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಇಶಾ ಸದ್ಯ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ 'ಎಸ್​ಆರ್​ಕೆ' ಚಿತ್ರಕ್ಕಾಗಿ ರೆಡಿಯಾಗುತ್ತಿದ್ದಾರೆ. 'ಸತ್ಯ ಇನ್ ಲವ್' ನಿರ್ದೇಶಕ ಲಕ್ಕಿ ಗೋಪಾಲ್ ನಿರ್ದೇಶಿಸುತ್ತಿರುವ ಈ ಚಿತ್ರದ ಮೂಲಕ ಇಶಾ ಕನ್ನಡದಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ. ಈಗಾಗಲೇ ಟಾಲಿವುಡ್ ಹಾಗೂ ಕಾಲಿವುಡ್​ನಲ್ಲಿ 11ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಮುದ್ದು ಮುಖದ ಚೆಲುವೆಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಮಾತ್ರ ಜೂ.ಎನ್​ಟಿಆರ್ ನಟನೆಯ 'ಅರವಿಂದ ಸಮೇತ' ಚಿತ್ರದಲ್ಲಿನ ತಂಗಿಯ ಪಾತ್ರ. ಇದೀಗ ಕಾಲಿವುಡ್​-ಟಾಲಿವುಡ್​ನಲ್ಲಿ ಆಫರ್ ಗಿಟ್ಟಿಸಿಕೊಳ್ಳುತ್ತಿರುವ ತೆಲುಗು ಪಿಳ್ಳಾ 'ಎಸ್​ಆರ್​ಕೆ' ಮೂಲಕ ಕನ್ನಡದಲ್ಲೇ ನೆಲೆಯೂರಿದರೂ ಅಚ್ಚರಿ ಪಡಬೇಕಿಲ್ಲ.

First published: