Divya Shridhar: ಮುದ್ದಾದ ಮಗಳ ಫೋಟೋ ಹಂಚಿಕೊಂಡ ನಟಿ ದಿವ್ಯಾ ಶ್ರೀಧರ್

ಕಿರುತೆರೆ ನಟಿ ದಿವ್ಯಾ ಶ್ರೀಧರ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಫೋಟೋಗಳನ್ನು ನಟಿ ದಿವ್ಯಾ ಶ್ರೀಧರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗಂಡನ ಕಿರುಕುಳದ ವಿರುದ್ಧ ಧ್ವನಿ ಎತ್ತಿ ನಟಿ ದಿವ್ಯಾ ಭಾರೀ ಸುದ್ದಿಯಾಗಿದ್ರು.

First published:

 • 18

  Divya Shridhar: ಮುದ್ದಾದ ಮಗಳ ಫೋಟೋ ಹಂಚಿಕೊಂಡ ನಟಿ ದಿವ್ಯಾ ಶ್ರೀಧರ್

  ಕನ್ನಡ ‘ಆಕಾಶದೀಪ’ ಸೀರಿಯಲ್ ಮೂಲಕ ನಟಿ ದಿವ್ಯಾ ಶ್ರೀಧರ್ (Divya Shridhar) ಫೇಮಸ್ ಆಗಿದ್ರು. ಇದೀಗ ತಮಿಳಿನ ಸೇವಂತಿ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ನಟಿಗೆ ಭಾರೀ ಜನಪ್ರಿಯತೆ ತಂದು ಕೊಟ್ಟಿದೆ.

  MORE
  GALLERIES

 • 28

  Divya Shridhar: ಮುದ್ದಾದ ಮಗಳ ಫೋಟೋ ಹಂಚಿಕೊಂಡ ನಟಿ ದಿವ್ಯಾ ಶ್ರೀಧರ್

  ಗರ್ಭಿಣಿಯಾದ ಬಳಿಕವೂ ಅನೇಕ ದಿನಗಳ ಕಾಲ ನಟಿ ದಿವ್ಯಾ ಶ್ರೀಧರ್ ಸೀರಿಯಲ್​ನಲ್ಲಿ ನಟಿಸಿದ್ದರು. ಅರ್ಥಿಕ ಸಮಸ್ಯೆ ಇರುವುದರಿಂದ ನಾನು ಕೆಲಸ ಮಾಡುವುದು ಅನಿವಾರ್ಯ ಎಂದು ನಟಿ ದಿವ್ಯಾ ಶ್ರೀಧರ್ ಹೇಳಿಕೊಂಡಿದ್ರು.

  MORE
  GALLERIES

 • 38

  Divya Shridhar: ಮುದ್ದಾದ ಮಗಳ ಫೋಟೋ ಹಂಚಿಕೊಂಡ ನಟಿ ದಿವ್ಯಾ ಶ್ರೀಧರ್

  ನಟಿ ದಿವ್ಯಾ ಶ್ರೀಧರ್ ಕೆಲ ದಿನಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಮುದ್ದಾದ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ದಿವ್ಯಾ ಹಾಗೂ ಮಗುವಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

  MORE
  GALLERIES

 • 48

  Divya Shridhar: ಮುದ್ದಾದ ಮಗಳ ಫೋಟೋ ಹಂಚಿಕೊಂಡ ನಟಿ ದಿವ್ಯಾ ಶ್ರೀಧರ್

  ಕೆಲ ತಿಂಗಳ ಹಿಂದೆ ಪತಿ ಅರ್ನವ್ ಕಿರುಕುಳ ವಿರುದ್ಧ ನಟಿ ದಿವ್ಯಾ ಶ್ರೀಧರ್ ತಿರುಗಿ ಬಿದ್ದಿದ್ದರು. ಗಂಡನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಅರ್ನವ್​ನನ್ನು ಬಂಧಿಸಿದ್ದರು.

  MORE
  GALLERIES

 • 58

  Divya Shridhar: ಮುದ್ದಾದ ಮಗಳ ಫೋಟೋ ಹಂಚಿಕೊಂಡ ನಟಿ ದಿವ್ಯಾ ಶ್ರೀಧರ್

  ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ದಿವ್ಯಾ ಗಂಡನ ವಿರುದ್ಧ ಅನೇಕ ಆರೋಪ ಮಾಡಿದ್ರು. ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. 

  MORE
  GALLERIES

 • 68

  Divya Shridhar: ಮುದ್ದಾದ ಮಗಳ ಫೋಟೋ ಹಂಚಿಕೊಂಡ ನಟಿ ದಿವ್ಯಾ ಶ್ರೀಧರ್

  ಈ ದೂರಿನ ಹಿನ್ನಲೆಯಲ್ಲಿ ಕಿರುತೆರೆ ನಟ ಅರ್ನವ್ ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ನಟಿ ದಿವ್ಯಾ ಸಂಸಾರದ ಗಲಾಟೆ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿತ್ತು. ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಇದೀಗ ದಿವ್ಯಾ ಮಗಳ ಆಗಮನದ ಖುಷಿಯಲ್ಲಿದ್ದಾರೆ.

  MORE
  GALLERIES

 • 78

  Divya Shridhar: ಮುದ್ದಾದ ಮಗಳ ಫೋಟೋ ಹಂಚಿಕೊಂಡ ನಟಿ ದಿವ್ಯಾ ಶ್ರೀಧರ್

  ನನ್ನ ಮುದ್ದು ಕಂದ ಲವ್ ಯೂ ಡಾರ್ಲಿಂಗ್ ಎಂದು ಮಗಳ ಆಗಮನದ ಬಗ್ಗೆ ನಟಿ ಹೇಳಿಕೊಂಡಿದ್ದರು. ಈ ಬೆನ್ನಲ್ಲೇ ಮುದ್ದಾದ ಮಗಳ ಮುಖವನ್ನ ರಿವೀಲ್ ಮಾಡಿದ್ದಾರೆ. ಪುಟ್ಟ ದೇವತೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

  MORE
  GALLERIES

 • 88

  Divya Shridhar: ಮುದ್ದಾದ ಮಗಳ ಫೋಟೋ ಹಂಚಿಕೊಂಡ ನಟಿ ದಿವ್ಯಾ ಶ್ರೀಧರ್

  ಆಕಾಶದೀಪ, ಕಣ್ಮಣಿ ಸೀರಿಯಲ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೇವಂತಿ ಧಾರಾವಾಹಿ ಮೂಲಕ ತಮಿಳು ಕಿರುತೆರೆಗೆ ದಿವ್ಯಾ ಶ್ರೀಧರ್ ಕಾಲಿಟ್ಟಿದ್ದಾರೆ.

  MORE
  GALLERIES