ಟಿಕ್ ಟಾಕ್ ಸ್ಟಾರ್, ನಟಿ, ಬಿಗ್ ಬಾಸ್ ಸ್ಪರ್ಧಿ ಧನುಶ್ರೀ ಅವರು ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿತ್ತಂತೆ. ನಾನು ಸಾಯ್ತೀನಿ ಅಂತ ಅವರೇ ಅಂದುಕೊಂಡಿದ್ರಂತೆ. ಅಸಲಿಗೆ ಅವರಿಗೆ ಏನಾಗಿತ್ತು?
ತಮ್ಮ ರೀಲ್ಸ್ ಮೂಲಕ ಹೆಸರು ವಾಸಿಯಾಗಿದ್ದ ಧನುಶ್ರೀ, ಬಿಗ್ ಬಾಸ್ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಬಂದಿದ್ದರು. ಆದ್ರೆ ಎರಡೇ ವಾರಕ್ಕೆ ಔಟ್ ಆಗಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಹಲವು ಅವಕಾಶಗಳು ಸಿಕ್ಕಿದ್ವಂತೆ.
2/ 8
ಟಿಕ್ ಟಾಕ್ ಸ್ಟಾರ್, ನಟಿ, ಬಿಗ್ ಬಾಸ್ ಸ್ಪರ್ಧಿ ಧನುಶ್ರೀ ಅವರು ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿತ್ತಂತೆ. ನಾನು ಸಾಯ್ತೀನಿ ಅಂತ ಅವರೇ ಅಂದುಕೊಂಡಿದ್ರಂತೆ.
3/ 8
ಧನುಶ್ರೀ ಅವರು 1 ತಿಂಗಳ ಕಾಲ ಅನಾರೋಗ್ಯದಿಂದ ಬಳಲಿದ್ದಾರಂತೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ರಂತೆ. ಯಾಕೋ ಬದುಕುವ ಭರವಸೆಯನ್ನು ಕಳೆದುಕೊಂಡಿದ್ರಂತೆ.
4/ 8
ಅನಾರೋಗ್ಯದಿಂದ ಹಲವು ಡಾಕ್ಟರ್ ಗಳ ಬಳಿ ಸುತ್ತಿದ್ದೇನೆ. ಎಷ್ಟೋ ಔಷಧಿ, ಮಾತ್ರೆಗಳನ್ನು ಪಡೆದಿದ್ದೇನೆ. ಆದ್ರೂ ಪ್ರಯೋಜನ ಆಗಲಿಲ್ಲ ಎನ್ನಿಸುತ್ತಿತ್ತು. ಬದುಕಲ್ಲ ಅನ್ನಿಸಿ ಬಿಟ್ಟಿತ್ತು ಎಂದು ಧನುಶ್ರೀ ಅವರೇ ಹೇಳಿಕೊಂಡಿದ್ದಾರೆ.
5/ 8
ಏನೇ ಚಿಕಿತ್ಸೆ ಪಡೆದ್ರೂ ಆರೋಗ್ಯ ಸುಧಾರಿಸಿರಲಿಲ್ಲ. ಅದಕ್ಕೆ ನಾನು ಸಾಯ್ತೀನಿ ಎಂದು ಕೊಂಡಿದ್ದೆ. ಬದುಕುವ ಭರವಸೆಯೇ ಹೋಗಿತ್ತು. ಜಿಗುಪ್ಸೆ ಮೂಡಿತ್ತು ಎಂದಿದ್ದಾರೆ ಧನುಶ್ರೀ.
6/ 8
ಧನುಶ್ರೀ ಅವರಿಗೆ ಏನು ತಿನ್ನಲು ಆಗುತ್ತಿರಲಿಲ್ವಂತೆ. ಅದಕ್ಕೆ ಪ್ರಯತ್ನವನ್ನೇ ಕೈ ಬಿಟ್ಟಿದ್ದರಂತೆ. ನನ್ನ ಜೊತೆ ಸದಾ ಅಮ್ಮ ಇದ್ದಳು. ಅವಳು ನನಗೆ ಧೈರ್ಯ ತುಂಬಿದ್ಲು ಎಂದು ಧನುಶ್ರೀ ಹೇಳಿದ್ದಾರೆ.
7/ 8
ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯ ಕೆಟ್ಟಿತ್ತು. ಅವು ತುಂಬಾ ಕೆಟ್ಟ ದಿನಗಳು. ಮತ್ತೆ ಆ ದಿನಗಳು ನನ್ನ ಜೀವನದಲ್ಲಿ ಬರುವುದು ಬೇಡ ಎಂದು ಧನುಶ್ರೀ ಹೇಳಿದ್ದಾರೆ.
8/ 8
ಧನುಶ್ರೀ ಅವರು ಇದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಯಾರು ಜೀವನದಲ್ಲಿ ಕುಗ್ಗಬಾರದು ಎಂದು ಇದನ್ನು ಶೇರ್ ಮಾಡಿದ್ದೇನೆ ಎಂದು ಹೇಳಿದ್ದಾರೆ.