ದೀಪಿಕಾ ದಾಸ್ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ. ಅದರಲ್ಲಿ ಅಮೃತಾ ಪಾತ್ರದ ಮೂಲಕ ಮನೆಮಾತಾಗಿದ್ದರು. ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ವಿದೇಶಿ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ದೀಪಿಕಾ ದಾಸ್ ತಮ್ಮ ಸ್ಟೈಲಿಶ್ ಲುಕ್ ನ ಫೋಟೋಗಳಲ್ಲಿ ಮಿಂಚಿದ್ದಾರೆ. ಕ್ಯೂಟ್ ಆಗಿ ಕಾಣ್ತಾ ಇದ್ದಾರೆ. ಹಡಗಿನಲ್ಲಿ ನಿಂತು, ರಾತ್ರಿ ವೀವ್ ಕಣ್ತುಂಬಿಕೊಂಡಿದ್ದಾರೆ. ದೀಪಿಕಾ ಅವರು ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ ಎಂದು ಕಾಮೆಂಟ್ ಹಾಕಿದ್ದಾರೆ. ದೀಪಿಕಾ ದಾಸ್ ತುಂಬಾ ಪ್ರವಾಸಗಳನ್ನು ಮಾಡ್ತಾ ಇರ್ತಾರೆ. ಕಳೆದ ತಿಂಗಳಷ್ಟೇ ಟ್ರಿಪ್ ಹೋಗಿದ್ದರು. ಈಗ ಮತ್ತೆ ಪ್ರವಾಸ ಕೈಗೊಂಡಿದ್ದಾರೆ. ನಾಗಿಣಿ ಧಾರಾವಾಹಿ ಮೂಲಕ ದೀಪಿಕಾ ದಾಸ್ ಅವರಿಗೆ ಬಿಗ್ ಬಾಸ್‍ಗೆ ಹೋಗೋ ಆಫರ್ ದೊರಕಿತ್ತು. ಬಿಗ್ 7ರಲ್ಲಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಮಿಂಚಿದ್ರು. ಟಾಪ್ 5 ನಲ್ಲಿ ಇದ್ರು. ಅಲ್ಲದೇ ನಟಿ ದೀಪಿಕಾ ದಾಸ್ ಅವರಿಗೆ ಬಿಗ್ ಬಾಸ್ 09ರಲ್ಲಿ ಪ್ರವೀಣರಾಗಿ ಎಂಟ್ರಿ ಕೊಡಲು ಅವಕಾಶ ಸಿಕ್ಕಿತ್ತು. ಈ ಬಾರಿ ಅವರು ಟಾಪ್ 3ನಲ್ಲಿ ಇದ್ರು. ದೀಪಿಕಾ ದಾಸ್ ಅವರು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ದೊಡ್ಡ ಪರದೆಯ ಮೇಲೆ ನೋಡಬಹುದು. ಅಭಿಮಾನಿಗಳು ಸಹ ಕಾಯ್ತಾ ಇದ್ದಾರೆ.