ಮಗಳ ಮೊದಲ ಫೋಟೋಶೂಟ್​ನ ಚಿತ್ರಗಳನ್ನು ಶೇರ್​ ಮಾಡಿದ ನಟಿ Chaithra Rai

ಕನ್ನಡ ಹಾಗೂ ತೆಲುಗು ಕಿರುತೆರೆಯ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ಕರಾವಳಿ ಬೆಡಗಿ ಚೈತ್ರಾ ರೈ (Chaithra Rai) ಅವರು ಈ ಹಿಂದೆಯೇ ತಮ್ಮ ಮಗಳನ್ನು ನೆಟ್ಟಿಗರಿಗೆ ಪರಿಚಯಿಸಿದ್ದರು. ಈಗ ಮಗಳು ನಿಷ್ಕಾ ಶೆಟ್ಟಿಯ ಮೊದಲ ಫೋಟೋಶೂಟ್​ನ ಚಿತ್ರಗಳನ್ನು ಶೇರ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published:

  • 17

    ಮಗಳ ಮೊದಲ ಫೋಟೋಶೂಟ್​ನ ಚಿತ್ರಗಳನ್ನು ಶೇರ್​ ಮಾಡಿದ ನಟಿ Chaithra Rai

    ಜನಪ್ರಿಯ ಧಾರಾವಾಹಿ ರಾಧಾ ಕಲ್ಯಾಣದಲ್ಲಿ (Kannada Serial Radha Kalyana ) ವಿಶಾಖಾ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತರಾಗಿದ್ದ ನಟಿ ಚೈತ್ರಾ ರೈ (Chaithra Rai). ಕಿರುತೆರೆಯಲ್ಲಿ ನೆಗೆಟಿವ್​ ಶೇಡ್​ನ ಪಾತ್ರದ ಮೂಲಕವೇ ಪರಿಚಯವಾದ ನಟಿ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

    MORE
    GALLERIES

  • 27

    ಮಗಳ ಮೊದಲ ಫೋಟೋಶೂಟ್​ನ ಚಿತ್ರಗಳನ್ನು ಶೇರ್​ ಮಾಡಿದ ನಟಿ Chaithra Rai

    ಮಗು ಮಾಡಿಕೊಳ್ಳುವ ಕಾರಣದಿಂದ ಬಣ್ಣದ ಲೋಕದಿಂದ ಕೊಂಚ ದೂರ ಉಳಿದಿದ್ದ ಚೈತ್ರಾ ಅವರಿಗೆ ಹೆಣ್ಣು ಮಗುವಾದ ವಿಷಯ ಗೊತ್ತೇ ಇದೆ. ಮಗಳ ನಾಮಕರಣ ಚಿತ್ರಗಳನ್ನು ಹಂಚಿಕೊಳ್ಳುವುದರ ಜೊತೆ ಮಗುವಿನ ಹೆಸರನ್ನೂ ರಿವೀಲ್​ ಮಾಡಿದ್ದರು.

    MORE
    GALLERIES

  • 37

    ಮಗಳ ಮೊದಲ ಫೋಟೋಶೂಟ್​ನ ಚಿತ್ರಗಳನ್ನು ಶೇರ್​ ಮಾಡಿದ ನಟಿ Chaithra Rai

    ಕುಸುಮಾಂಜಲಿ, ಬೊಂಬೆಯಾಟವಯ್ಯ, ಬಣ್ಣದ ಬುಗುರಿ, ಪೌರ್ಣಮಿ, ನಾಗಮಣಿ ಹಾಗೂ ಯುಗಾದಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಚೈತ್ರಾ ರೈ.

    MORE
    GALLERIES

  • 47

    ಮಗಳ ಮೊದಲ ಫೋಟೋಶೂಟ್​ನ ಚಿತ್ರಗಳನ್ನು ಶೇರ್​ ಮಾಡಿದ ನಟಿ Chaithra Rai

    ಮುದ್ದಿನ ಮಗಳಿಗೆ ನಿಷ್ಕಾ ಶೆಟ್ಟಿ ಎಂದು ನಾಮಕರಣ ಮಾಡಿರುವ ಚೈತ್ರಾ ರೈ ಅವರು ಮಗುವಿನ ಮೊದಲ ಫೋಟೋಶೂಟ್​ ಮಾಡಿಸಿದ್ದಾರೆ. 

    MORE
    GALLERIES

  • 57

    ಮಗಳ ಮೊದಲ ಫೋಟೋಶೂಟ್​ನ ಚಿತ್ರಗಳನ್ನು ಶೇರ್​ ಮಾಡಿದ ನಟಿ Chaithra Rai

    ಮಗಳ ಮುದ್ದಾದ ಚಿತ್ರಗಳನ್ನು ಈಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, ಮಗಳಿಗಾಗಿ ಒಂದು ಇನ್​ಸ್ಟಾಗ್ರಾಂ ಖಾತೆಯನ್ನೂ ತೆರೆದಿದ್ದಾರೆ. ಆ ಖಾತೆಯಲ್ಲಿ ಮಗಳ ಫೋಟೋಶೂಟ್​ನ ಚಿತ್ರಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 67

    ಮಗಳ ಮೊದಲ ಫೋಟೋಶೂಟ್​ನ ಚಿತ್ರಗಳನ್ನು ಶೇರ್​ ಮಾಡಿದ ನಟಿ Chaithra Rai

    @nishkashetty_official ಎಂಬ ಹೆಸರಿನಲ್ಲಿ ತೆರೆದಿರುವ ಖಾತೆಯಲ್ಲಿ ಇನ್ನು ಮುಂದೆ ಈ ಸ್ಟಾರ್​ ಕಿಡ್​ನ ಕುರಿತಾದ ಅಪ್ಡೇಟ್​ಗಳು ಸಿಗಲಿವೆಯಂತೆ.

    MORE
    GALLERIES

  • 77

    ಮಗಳ ಮೊದಲ ಫೋಟೋಶೂಟ್​ನ ಚಿತ್ರಗಳನ್ನು ಶೇರ್​ ಮಾಡಿದ ನಟಿ Chaithra Rai

    ಈ ಹಿಂದೆ ನಟಿ ಮಯೂರಿ ಸಹ ತಮ್ಮ ಮಗನ ಹೆಸರಿನಲ್ಲಿ ಇನ್​ಸ್ಟಾಗ್ರಾಂ ಖಾತೆ ತೆರೆದು ಸುದ್ದಿಯಾಗಿದ್ದರು. ಈಗ  ನಟಿ ಚೈತ್ರಾ ಸಹ ಇದೇ ದಾರಿಯನ್ನೇ ಅನುಸರಿಸಿದ್ದಾರೆ ಎನ್ನಬಹುದು.

    MORE
    GALLERIES