Actress Jayashree: ಬಿಗ್ ಬಾಸ್ ಜಯಶ್ರೀ ಕನಸಿನ ಮನೆ ಹೇಗಿದೆ ಗೊತ್ತಾ? ಗೃಹಪ್ರವೇಶದ ಫೋಟೋ ನೀವೂ ಕಣ್ತುಂಬಿಕೊಳ್ಳಿ
ಜೀವನದಲ್ಲಿ ಸಾಕಷ್ಟು ನೊಂದ ನಂತರ ಹೊಸ ಹೆಜ್ಜೆ ಇಡುತ್ತಿದ್ದಾರೆ ಬಿಗ್ ಬಾಸ್ ಬೆಡಗಿ! ಅವರೀಗ ಕನಸಿನ ಮನೆ ಕಟ್ಟಿಸಿದ್ದಾರೆ. ಟಿ ಜಯಶ್ರೀಗೆ ಒಳ್ಳೆಯದಾಗಲಿ, ಅವರ ಜೀವನ ಸುಖವಾಗಿರಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಓಟಿಟಿ 1 ಕಾರ್ಯಕ್ರಮದಲ್ಲಿ ಜಗಳಗಂಟಿ ಅಂತಲೇ ಹೆಸರುವಾಸಿಯಾಗಿದ್ದ ಜಯಶ್ರೀ ಆರಾಧ್ಯ ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ.
2/ 8
ಮಾರಿಮುತ್ತು ಮೊಮ್ಮಗಳು ಜಯಶ್ರೀ ಹೊಸ ಮನೆಗೆ ಕುಟುಂಬ ಸಮೇತ ಪಾದಾರ್ಪಣೆ ಮಾಡಿದ್ದಾರೆ. ಬೆಂಗಳೂರಿನ ನಾಯಂಡಳ್ಳಿಯಲ್ಲಿ ಮನೆ ಖರೀದಿಸಿದ್ದಾರೆ. ನೂತನ ನಿವಾಸದ ಗೃಹಪ್ರವೇಶ ನಡೆದಿದೆ.
3/ 8
ಜಯಶ್ರೀ ಮತ್ತು ಭಾವಿಪತಿ ಸ್ಟೀವನ್ ಕನಸಿನ ಮನೆಯ ಗೃಹಪ್ರವೇಶ ಸಮಾರಂಭ ಸಂಭ್ರಮದಿಂದ ಜರುಗಿದೆ. ಅದ್ಧೂರಿಯಾಗಿ ಗೃಹ ಪ್ರವೇಶ ನಡೆದಿದ್ದು, ನಟಿ ತುಂಬಾ ಖುಷಿಯಲ್ಲಿದ್ದಾರೆ.
4/ 8
ನಟಿ ಜಯಶ್ರೀ ಆರಾಧ್ಯ ಮನೆ ಗೃಹ ಪ್ರವೇಶ ಸಮಾರಂಭದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಭಾಗಿಯಾಗಿದ್ದರು. ಲೋಕೇಶ್, ಸ್ಪೂರ್ತಿ, ಸೋನು ಗೌಡ, ಉದಯ್ ಸೂರ್ಯ, ಚೈತ್ರಾ ಬಂದಿದ್ದರು.
5/ 8
ಬಿಗ್ ಬಾಸ್ ಒಟಿಟಿಯಲ್ಲಿ 5 ವಾರಗಳ ಕಾಲ ಸತತವಾಗಿ ನಾಮಿನೇಟ್ ಆಗಿದ್ದ ಜಯಶ್ರೀ ಆರಾಧ್ಯ, 6 ನೇ ವಾರ ಬಿಗ್ ಬಾಸ್ ಕನ್ನಡ 9 ರೇಸ್ನಿಂದ ಹೊರಗೆ ಬಿದ್ದರು.
6/ 8
ಸಿನಿಮಾಗೆ ಬರಬೇಕು ಅಂತ ತಲೆಯಲ್ಲಿ ಇರಲಿಲ್ಲ. ಸೆಕೆಂಡ್ ಪಿಯು ಫೇಲ್ ಆದ್ಮೇಲೆ, ಮದುವೆಯಾಗು ಅಂದ್ರಂತೆ. ಇಲ್ಲಾಂದ್ರೆ ಕೆಲಸಕ್ಕೆ ಹೋಗು ಅಂತ ಅಪ್ಪ ಅಂದರು. ದುಡಿಯುವ ಸಲುವಾಗಿ ಚಿತ್ರರಂಗಕ್ಕೆ ಬಂದೆ ಎಂದು ಜಯಶ್ರೀ ಹೇಳಿದ್ದಾರೆ.
7/ 8
ಜಯಶ್ರೀ ಅವರು ಮೊದಲ ಮೂವಿ ಪುಟ್ಟರಾಜು ಲವ್ವರ್ ಆಫ್ ಶಶಿಕಲಾ ಅಂತ. ಅದರಲ್ಲೂ ಶಾಲೆ ಹುಡುಗಿಯಾಗಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೇ ಕನ್ನಡಿಗ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಗೀತಾ ಧಾರಾವಾಹಿಯಲ್ಲಿ ನೆಗೆಟಿವ್ ಕ್ಯಾರೆಕ್ಟರ್ ಮಾಡಿದ್ದರು.
8/ 8
ಜೀವನದಲ್ಲಿ ಸಾಕಷ್ಟು ನೊಂದ ನಂತರ ಹೊಸ ಹೆಜ್ಜೆ ಇಡುತ್ತಿದ್ದಾರೆ. ನಟಿ ಜಯಶ್ರೀಗೆ ಒಳ್ಳೆಯದಾಗಲಿ. ಅವರ ಜೀವನ ಸುಖವಾಗಿರಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.