ಬಹುಭಾಷಾ ನಟಿ ಭಾನುಪ್ರಿಯಾ ಬಗ್ಗೆ ನಿಮಗೆಲ್ಲ ಗೊತ್ತಿರುತ್ತೆ. ಪರಭಾಷೆಯವರಾದರೂ ಕನ್ನಡಿಗರಿಗೆ ಆಪ್ತರಾದ ನಟಿಯರಲ್ಲಿ ಇವರೂ ಒಬ್ಬರು. ವಿಷ್ಣುವರ್ಧನ್, ರವಿಚಂದ್ರನ್‌ರಂತಹ ದಿಗ್ಗಜರ ಜೊತೆ ನಟಿಸಿ, ಕಲಾರಸಿಕರ ಮನಸೊರೆಗೊಂಡಿದ್ದ ಭಾನುಪ್ರಿಯಾ ಬಹುಭಾಷೆಯಲ್ಲಿ ಛಾಪು ಮೂಡಿಸಿದವರು. ರಸಿಕ, ಸಿಂಹಾದ್ರಿಯ ಸಿಂಹ, ಕದಂಬ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಭಾನುಪ್ರಿಯಾ ಅವರು ನೆನಪಿದ್ದಾರೆ ತಾನೇ. ಅವರನ್ನು ಹೇಗೆ ಮರೆಯಲು ಸಾಧ್ಯ ಹೇಳಿ? ಆದ್ರೆ ಅವರೇ ಎಲ್ಲವನ್ನೂ ಮರೆಯುತ್ತಿದ್ದಾರೆ ಎನ್ನುವುದೇ ಬೇಸರದ ಸಂಗತಿ.