ಮಲಯಾಳಿ ಚೆಲುವೆ ಭಾಮಾ ಅವರು ವಿಚ್ಛೇದಿತರಾಗುತ್ತಿದ್ದಾರಾ? ಇಂಥದ್ದೊಂದು ಸುದ್ದಿ ಈಗ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ. ಮಲಯಾಳಂ ಜೊತೆ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿ ಸುದ್ದಿ ಮಾಡಿದ್ದ ನಟಿ ಭಾಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
2/ 8
ಗಣೇಶ್ ಜೊತೆ ನಟಿಸಿ ಶೈಲೂ ಪಾತ್ರದ ಮೂಲಕ ಹೈಲೈಟ್ ಆಗಿದ್ದ ಇವರು ಮದುವೆ ನಂತರ ಸಿನಿಮಾದಿಂದ ದೂರ ಉಳಿದಿರುವುದು ಎಲ್ಲರಿಗೂ ಗೊತ್ತು. ಪತಿ ಹಾಗೂ ಮಗುವಿನೊಂದಿಗೆ ಬ್ಯುಸಿಯಾಗಿದ್ದರು.
3/ 8
ಆದರೆ ಈಗ ನಟಿ ಪತಿಯಿಂದ ಬೇರೆಯಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು ಇದು ಎಲ್ಲೆಡೆ ವೈರಲ್ ಆಗಿದೆ. ಇದು ನಿಜವೇ? ಈ ನಟಿ ಪತಿಯಿಂದ ಬೇರ್ಪಡುತ್ತಿದ್ದಾರಾ?
4/ 8
2018ರಿಂದ ಶೈಲೂ ಎಂದೇ ಖ್ಯಾತಿ ಪಡೆದ ಭಾಮಾ ಸಿನಿರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಅವರ ವೈವಾಹಿಕ ಜೀವನದಲ್ಲಿ ಕೆಲವು ಏರುಪೇರುಗಳಾಗುತ್ತಿದೆ ಎನ್ನಲಾಗಿದೆ.
5/ 8
2020ರಲ್ಲಿ ಉದ್ಯಮಿ ಅರುಣ್ ಅವರನ್ನು ಭಾಮಾ ಮದುವೆಯಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ. ಸಿನಿಮಾದಿಂದ ದೂರ ಉಳಿದಿದ್ದ ನಟಿ ಫ್ಯಾಮಿಲಿ ಲೈಫ್ನಲ್ಲಿ ಬ್ಯುಸಿ ಇದ್ದರು.
6/ 8
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಆದರೆ ಈಗ ಪತಿಯ ಜೊತೆಗಿನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ.
7/ 8
ಮಗಳ ಫಸ್ಟ್ ಬರ್ತ್ಡೇ ಗ್ರ್ಯಾಂಡ್ ಆಗಿತ್ತು. ಎರಡನೇ ವರ್ಷದ ಬರ್ತ್ಡೇ ಫೋಟೋ ಆಗಲಿ ವಿಡಿಯೋ ಆಗಲಿ ಶೇರ್ ಮಾಡಿಲ್ಲ. ಇದರಿಂದ ಭಾಮಾ ಅವರು ಪತಿಯಿಂದ ಬೇರೆ ಆಗಿದ್ದಾರಾ ಎಂಬ ಚರ್ಚೆ ನಡೆಯುತ್ತಿದೆ.
8/ 8
ನಟಿ ಕನ್ನಡದಲ್ಲಿ ಶೈಲೂ, ಆಟೋರಾಜ, ರಾಗಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೂ ಈ ನಟಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.