ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ನಟಿ ಅಥಿಯಾ ಶೆಟ್ಟಿ ಮತ್ತು ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಇಬ್ಬರು ಪ್ರೀತಿ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತು. ಈಗ ಅವರ ಮದುವೆ ದಿನಾಂಕ ನಿಗದಿಯಾಗಿದೆ.
2/ 8
ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ 2023 ರ ಜನವರಿ ಕೊನೆಯ ವಾರದಲ್ಲಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ತಿಳಿದು ಬಂದಿದೆ.
3/ 8
ಜನವರಿ 21 ರಿಂದ 23 ರವರೆಗೆ ಈ ಜೋಡಿಯ ಮದುವೆ ಕಾರ್ಯಕ್ರಮ ನಡೆಯಲಿದೆ. ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಪಾಲ್ಗೊಳ್ಳಲಿದ್ದಾರಂತೆ.
4/ 8
ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಮದುವೆ ಕಾರ್ಯಕ್ರಮ ತುಂಬಾ ಗ್ರ್ಯಾಂಡ್ ಆಗಿ ನಡೆಯಲಿದೆ ಎಂದು ತಿಳಿದು ಬಂದಿದೆ. ಹಳದಿ ಶಾಸ್ತ್ರ, ಮೆಹೆಂದಿ, ಸಂಗೀತ ಕಾರ್ಯಕ್ರಮ ನಡೆಯಲಿವೆ.
5/ 8
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕಳೆದ ಹಲವು ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿರುತ್ತಾರೆ.
6/ 8
ಅಥಿಯಾ ಶೆಟ್ಟಿ ಮತ್ತು ರಾಹುಲ್ ಕಳೆದ ವರ್ಷ ತಮ್ಮ ಪ್ರೀತಿ ಬಗೆಗಿನ ಗುಟ್ಟನ್ನು ಬಹಿರಂಗಮಾಡಿದ್ದರು. ಇವರಿಬ್ಬರು ಸುಮಾರು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದು, ಸಿನಿಮಾ ಕುರಿತಾದ ಕಾರ್ಯಕ್ರಮ, ಪಾರ್ಟಿ, ಟ್ರಿಪ್ ಹೀಗೆ ಹಲವಾರು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ
7/ 8
ಇನ್ನು, ಕೆಲ ದಿನಗಳ ಹಿಂದೆ ನಟಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಇವರಿಬ್ಬರ ಮದುವೆಯ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿತ್ತು. ಆ ವೇಳೆ ಈ ಜೋಡಿಯ ವಿವಾಹದ ಕುರಿತು ನಟ ಸುನೀಲ್ ಶೆಟ್ಟಿ ಸ್ವತಃ ಪ್ರತಿಕ್ರಿಯಿಸಿದ್ದರು.
8/ 8
ಅಥಿಯಾ ಶೆಟ್ಟಿ ತಂದೆ ಮತ್ತು ನಟ ಸುನೀಲ್ ಶೆಟ್ಟಿ ಈ ಜೋಡಿಯ ವಿವಾಹದ ಕುರಿತು ಮಾತನಾಡಿ, ಮಕ್ಕಳ ನಿರ್ಧಾರ ಮಾಡಿದ ತಕ್ಷಣ ತಯಾರಿ ಶುರುವಾಗುತ್ತದೆ. ಯಾಕೆಂದರೆ ರಾಹುಲ್ ಶೆಡ್ಯೂಲ್ ತುಂಬಾ ಬ್ಯುಸಿ ಇದೆ. ಬಿಡುವು ಸಿಕ್ಕಾಗ ಮದುವೆ ಬಗ್ಗೆ ಆಲೋಚನೆ ಮಾಡುವುದಾಗಿ ಹೇಳಿದ್ದರು.