ಕಾಂತಾರ ಸುಂದರಿ ಸಪ್ತಮಿ ಗೌಡ ಅವರ ಮೂಗುತಿ ಸ್ಟೈಲ್ ಈಗ ಟ್ರೆಂಡ್ ಆಗಿದೆ. ರಿಷಬ್ ಶೆಟ್ಟಿ ಸಿನಿಮಾ ಹೀರೋಯಿನ್ ಸಪ್ತಮಿ ಗೌಡ ಮೂಗುತಿ ಸುಂದರಿಯಾಗಿ ಹೈಲೈಟ್ ಆಗಿದ್ದಾರೆ.
2/ 8
ಈಗ ಅವರನ್ನು ನೋಡಿ ಈ ಮೂಗುತಿ ಸ್ಟೈಲ್ ಫಾಲೋ ಮಾಡುತ್ತಿದ್ದಾರೆ ಕಿರುತೆರೆ ನಟಿಯರು. ಗಟ್ಟಿ ಮೇಳ ಧಾರವಾಹಿ ಖ್ಯಾತಿಯ ಅಶ್ವಿನಿ ಅವರು ಎರಡೂ ಕಡೆ ಮೂಗು ಚುಚ್ಚಿಸಿದ್ದಾರೆ.
3/ 8
ಸಪ್ತಮಿ ಗೌಡ ಅವರಿಗೆ ಮೂಗು ಚುಚ್ಚಿಸಿದ್ದು ಕಾಂತಾರ ಡೈರೆಕ್ಟರ್ ರಿಷಬ್ ಶೆಟ್ಟಿ ಎನ್ನುವುದು ಎಲ್ಲರಿಗೂ ಗೊತ್ತು. ಈಗ ಗಟ್ಟಿಮೇಳ ನಟಿ ಈ ಲುಕ್ನಲ್ಲಿ ಕಾಣಿಸಕೊಂಡಿದ್ದಾರೆ.
4/ 8
ಗಟ್ಟಿಮೇಳ ಧಾರವಾಹಿಯಲ್ಲಿ ಆರತಿಯಾಗಿ ಕಾಣಿಸಿಕೊಂಡಿದ್ದ ಅಶ್ವಿನಿ ಅವರು ಈಗ ಸಿಂಗಾರ ಸಿರಿಯೇ ಹಾಡಿಗೆ ವಿಡಿಯೋ ಮಾಡಿದ್ದು ಅದರಲ್ಲಿ ಅವರು ಎರಡೂ ಕಡೆ ಮೂಗು ಚುಚ್ಚಿಸಿಕೊಂಡಿರುವುದನ್ನು ನಾವು ಕಾಣಬಹುದು.
5/ 8
ಎರಡೂ ಕಡೆ ಮೂಗುತಿ ಧರಿಸಿ ನಟಿ ಪೋಸ್ಟ್ ಕೊಟ್ಟಿದ್ದು ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಸಪ್ತಮಿ ಅವರ ಲುಕ್ ಇವರಿಗೂ ಸೂಟ್ ಆಗಿದೆ.
6/ 8
ಗಟ್ಟಿಮೇಳದಲ್ಲಿ ಮಿಂಚಿದ ಈ ನಟಿ ಈಗ ತೆಲುಗಿನಲ್ಲಿಯೂ ನಟಿಸುತ್ತಿದ್ದಾರೆ. ಆಫರ್ ಬಂದ ಕಾರಣ ನಟಿ ಗಟ್ಟಿಮೇಳ ಧಾರವಾಹಿ ಬಿಟ್ಟು ಹೋಗಿದ್ದರು.
7/ 8
ಅಶ್ವಿನಿ ಅವರ ಈ ಲುಕ್ ನೆಟ್ಟಿಗರಿಗೂ ಇಷ್ಟವಾಗಿದೆ. ಕಾಂತಾರ ಹವಾ ಎಲ್ಲಾ ಕಡೆ ಇರುವುದರಿಂದ ಅಶ್ವಿನಿ ಅವರ ಲುಕ್ ಟ್ರೆಂಡ್ ಆಗಿದೆ. ಕ್ಯೂಟ್ ಕಾಣುತ್ತಿದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
8/ 8
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ವಿಡಿಯೋ ಮಾಡಿ ಹಾಕಿದ್ದು ಇದು ನೆಚ್ಚಿಗರಿಂದ ಮೆಚ್ಚುಗೆ ಪಡೆದಿದೆ.