ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಆಶಿಕಾ ಸ್ಯಾಂಡಲ್ವುಡ್, ಟಾಲಿವುಡ್ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಸಖತ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್, ಇದೀಗ ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಆಶಿಕಾ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗ್ತಿದ್ದು, ನಟಿ ಮಣಿಗೆ ಡಿಮ್ಯಾಂಡ್ ಹೆಚ್ಚಿದೆ.
2/ 8
ಫೆಬ್ರವರಿ 10 ರಂದು ತೆಲುಗಿನ ಅಮಿಗೋಸ್ ಸಿನಿಮಾ ರಿಲೀಸ್ ಆಗಿದೆ. ಅಮಿಗೋಸ್ ಚಿತ್ರದಲ್ಲಿ ನಂದಮುರಿ ಕಲ್ಯಾಣರಾಮ್ಗೆ ಕನ್ನಡತಿ ಆಶಿಕಾ ರಂಗನಾಥ್ ಜೋಡಿ ಆಗಿದ್ದಾರೆ. ಆಮಿಗೋಸ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅಭಿಮಾನಿಗಳಿಗೆ ನಟಿ ಧನ್ಯವಾದ ಹೇಳಿದ್ರು.
3/ 8
ಇಶಿಕಾ ಆಗಿ ನಾನು ನಿಮಗೆ ಇಷ್ಟ ಆಗಿದ್ದೇನೆ ಎಂದುಕೊಂಡಿದ್ದೇನೆ. ಚಿತ್ರಕ್ಕ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಥ್ಯಾಂಕ್ಸ್ ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿರುವ ಆಶಿಕಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
4/ 8
ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ, 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು `ಕ್ರೇಜಿ ಬಾಯ್ 'ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡಕ್ಕೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
5/ 8
1996, ಅಗಸ್ಟ್ 5 ರಂದು ಹಾಸನದಲ್ಲಿ ಜನಿಸಿದರು. ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದು, ತಾಯಿ ಸುಧಾ ಗೃಹಿಣಿಯಾಗಿದ್ದಾರೆ. ಇವರ ಹಿರಿಯ ಸಹೋದರಿ ಅನುಷಾ ಕಿರುತೆರೆಯ ನಟಿಯಾಗಿದ್ದಾರೆ. ತುಮಕೂರಿನಲ್ಲಿ ಬೆಳೆದ ಇವರು ಪಿಯುಸಿ ಶಿಕ್ಷಣಕ್ಕೆ ಬೆಂಗಳೂರಿನಲ್ಲಿ ವಾಸವಾಗಿದ್ರು
6/ 8
ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪಿಯು ಮುಗಿಸಿ MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಆಶಿಕಾ ಬಾಲ್ಯದಿಂದಲೂ ಹಲವು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗೆದ್ದಿರುವ ಪ್ರತಿಭಾನ್ವಿತ ನಟಿಯಾಗಿದ್ದಾರೆ.
7/ 8
2014 ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಅಗಿದ್ದರು. ನಿರ್ದೇಶಕ ಮಹೇಶ್ ಬಾಬು ಅವರ `ಕ್ರೇಜಿ ಬಾಯ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಆಶಿಕಾ ರಂಗನಾಥ್ ಎಂಟ್ರಿ ಕೊಟ್ಟಿದ್ದಾರೆ.
8/ 8
ನಂತರ `ಮಾಸ್ ಲೀಡರ್',`ಮುಗಳು ನಗೆ',`ರಾಜು ಕನ್ನಡ ಮೀಡಿಯಂ', ಮುಂತಾದ ಚಿತ್ರಗಳಲ್ಲಿ ನಟಿಸಿ ಆಶಿಕಾ ಜನಪ್ರಿಯತೆ ಪಡೆದಿದ್ದಾರೆ. 2018 ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಶನ್ಲ್ಲಿ ಬಂದ Raambo 2 ' ಚಿತ್ರ ಸೂಪರ್ ಹಿಟ್ ಆಗಿ ಆಶಿಕಾಗೆ ಒಳ್ಳೆಯ ಹೆಸರು ತಂದು ಕೊಟ್ಟಿದೆ.