Archana Jois: ಮುಂಗಾರುಮಳೆ 2 ನಿರ್ಮಾಪಕರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಕಿಬಾಯ್ ಅಮ್ಮ!
ಕೆಜಿಎಫ್ ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಮನೆಮಾತಾಗಿದ್ದ ಅರ್ಚನಾ ಜೋಯಿಸ್, ಈಗ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಸದ್ದಿಲ್ಲದೆ ತಯಾರಿ ನಡೆಸಿದ್ದಾರೆ. ಇ.ಕೆ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಜಿ.ಗಂಗಾಧರ್ ಅವರ ನಿರ್ಮಾಣದ ಹೊಸ ಚಿತ್ರ '#ಮ್ಯೂಟ್ ನಲ್ಲಿ ಅರ್ಚನಾ ಜೋಯಿಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ
ಪ್ಯಾನ್ ಇಂಡಿಯಾ ಸಿನಿಮಾ #ಮ್ಯೂಟ್ ನಲ್ಲಿ ಅರ್ಚನಾ ಜೋಯಿಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ
2/ 8
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಪಾತ್ರಗಳ ಬಗ್ಗೆ ಸಿನಿಮಾ ತಂಡ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
3/ 8
ಮುಂಗಾರುಮಳೆ 2 ಚಿತ್ರದಲ್ಲಿ ನಿರ್ದೇಶಕ ಶಶಾಂಕ್ ಅವರೊಂದಿಗೆ ಕೆಲಸ ಮಾಡಿದ್ದ ಪ್ರಶಾಂತ್ ಚಂದ್ರ ಅವರ ನಿರ್ದೇಶನದಲ್ಲಿ ಈ ಸಿನಿಮಾ ಸದ್ದಿಲ್ಲದೆ ಶೂಟಿಂಗ್ ಕೂಡ ಪೂರ್ಣಗೊಳಿಸಿದೆ.
4/ 8
ಇನ್ನೇನು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಈ ಸಿನಿಮಾದ ಶೀರ್ಷಿಕೆಯನ್ನು ನಟ ರಿಷಿ ಬುಧವಾರ ಬಿಡುಗಡೆಗೊಳಿಸಿದರು.
5/ 8
ನಿರ್ದೇಶಕನಾಗಿ ಇದು ನನಗೆ ಚೊಚ್ಚಲ ಚಿತ್ರ. ಸಿನಿಮಾದ ಕಥೆ ವಿಭಿನ್ನವಾಗಿದೆ. ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಸಾಕಷ್ಟು ತಿರುವುಗಳು ನೋಡಲು ಸಿಗಲಿವೆ. ಚಿತ್ರದ ಒಂದೊಂದು ದೃಶ್ಯವನ್ನೂ ಬಹಳ ಕಾಳಜಿ ಹಾಗೂ ಸಂಯಮದಿಂದ ಚಿತ್ರೀಕರಿಸಲಾಗಿದೆ
6/ 8
ನಿರ್ದೇಶಕನಾಗಿ ಇದು ನನಗೆ ಚೊಚ್ಚಲ ಚಿತ್ರ. ಸಿನಿಮಾದ ಕಥೆ ವಿಭಿನ್ನವಾಗಿದೆ. ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಸಾಕಷ್ಟು ತಿರುವುಗಳು ನೋಡಲು ಸಿಗಲಿವೆ ಎನ್ನುತ್ತಾರೆ ಪ್ರಶಾಂತ್ ಚಂದ್ರ
7/ 8
ಥ್ರಿಲ್ಲರ್ ಚಿತ್ರಗಳ ಸಾಲಿನಲ್ಲಿ ನಮ್ಮ ಸಿನಿಮಾ ಉದಾಹರಣೆಯಾಗಿ ನಿಲ್ಲುವ ನಂಬಿಕೆ ನಮ್ಮ ತಂಡಕ್ಕಿದೆ' ಎಂದು ನಿರ್ದೇಶಕ ಪ್ರಶಾಂತ್ ಚಂದ್ರ ಹೇಳುತ್ತಾರೆ.
8/ 8
#ಮ್ಯೂಟ್' ಶೀರ್ಷಿಕೆಯ ಪೋಸ್ಟರ್ ಬಿಡುಗಡೆ ಮಾಡಲು ಖುಷಿಯಾಗುತ್ತಿದೆ. ಇದರಲ್ಲಿ ಅದ್ಬುತ ನಟರು ಅಭಿನಯಿಸಿದ್ದಾರೆ. ಪ್ರತಿಭಾವಂತ ಪ್ರಶಾಂತ್ ಚಂದ್ರ ಅವರ ನಿರ್ದೇಶನದ ಈ ಸಿನಿಮಾಗೆ ಯಶಸ್ಸು ಸಿಗಲಿ' ಎಂದು ನಟ ರಿಷಿ ತಂಡಕ್ಕೆ ಹಾರೈಸಿದರು