Anushka Shetty Marriage: ಟೀಂ ಇಂಡಿಯಾದ ಕ್ರಿಕೆಟರ್ ಜೊತೆ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ವೈರಲ್..!
Anushka Shetty Marriage: ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ 'ಬಾಹುಬಲಿ' ಪ್ರಭಾಸ್ ಅವರೊಂದಿಗೆ ಅನುಷ್ಕಾ ಮದುವೆ ನಡೆದೇ ಹೋಯಿತು ಅನ್ನೋ ಮಟ್ಟಕ್ಕೆ ಸುದ್ದಿಯಾಗಿತ್ತು. ಆದರೆ ಈಗ ಅನುಷ್ಕಾರ ವಿವಾಹ ಟೀಂ ಇಂಡಿಯಾದ ಕ್ರಿಕೆಟರ್ ಜೊತೆ ಆಗಲಿದೆಯಂತೆ. ವಿವರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಅನುಷ್ಕಾ ಶೆಟ್ಟಿ ಇನ್ಸ್ಟಾಗ್ರಾಂ ಖಾತೆ)
ನಟಿ ಅನುಷ್ಕಾ ಶೆಟ್ಟಿ ಮದುವೆ ವಿಷಯ ಮತ್ತೊಮ್ಮೆ ಸದ್ದು ಮಾಡುತ್ತಿದೆ.
2/ 9
ಹೌದು, ಈ ಹಿಂದೆ ಅನುಷ್ಕಾ ವಿವಾಹ ನಟ ಪ್ರಭಾಸ್ ಜತೆ ಅಂತ ಹೇಳಲಾಗುತ್ತಿತ್ತು.
3/ 9
ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದು, ಅವರ ವಿವಾಹ ನಡದೇ ನಡೆಯುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈ ಜೋಡಿ ತಮ್ಮ ಮಧ್ಯೆ ಅಂತದ್ದೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
4/ 9
ಅನುಷ್ಕಾ ಶೆಟ್ಟಿಗೆ ಈಗ 38 ವರ್ಷ. ಅವರಿಗೂ ಮದುವೆ ವಯಸ್ಸು ಮೀರುತ್ತಾ ಬರುತ್ತಿದೆ.
5/ 9
ಈ ಕಾರಣದಿಂದಲೇ ಅವರ ಮದುವೆ ಮಾತು ಮನೆಯಲ್ಲಿ ಜೋರಾಗಿ ಓಡಾಡುತ್ತಿದೆಯಂತೆ.
6/ 9
ಅವರ ಅಭಿನಯದ 'ನಿಶ್ಯಬ್ದಂ' ಸಿನಿಮಾದ ನಂತರ ಅನುಷ್ಕಾ ವಿವಾಹ ಆಗಲಿದೆಯಂತೆ.
7/ 9
ಅನುಷ್ಕಾ ಮದುವೆ ಟೀಂ ಟಿಂಡಿಯಾದ ಕ್ರಿಕೆಟರ್ ಜೊತೆ ನಿಶ್ಚಿಯಸಲಾಗುತ್ತಿದೆ ಅನ್ನೋ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
8/ 9
ಅನುಷ್ಕಾ ಮದುವೆಯಾಗಲಿರುವ ಆ ಕ್ರಿಕೆಟಿಗ ಯಾರು ಅನ್ನೋದು ಎಲ್ಲೂ ಬಹಿರಂಗವಾಗಿಲ್ಲ.
9/ 9
ತಮ್ಮ ಮದುವೆ ಕುರಿತಂತೆ ಅನುಷ್ಕಾ ಸಹ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಅಲ್ಲದೆ ಅನುಷ್ಕಾ ಪವನ್ ಕಲ್ಯಾಣ್ ಅಭಿನಯದ 'ಕ್ರಿಷ್' ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ನಟಿಸಲಿದ್ದಾರೆ ಅನ್ನೋ ಸುದ್ದಿ ಇದೆ.