Anita Hassanandani: ಬೇಬಿ ಬಂಪ್ ತೋರಿಸುತ್ತಾ ಬೋಲ್ಡ್ ಫೋಟೋಶೂಟ್ಗೆ ಪೋಸ್ ಕೊಟ್ಟ ನಟಿ ಅನಿತಾ ಹಸ್ಸನಂದನಿ..!
Anita Hassanandani: ಇತ್ತೀಚೆಗೆ ಸ್ಟಾರ್ ಹಾಗೂ ಸೆಲೆಬ್ರಿಟಿಗಳು ಗರ್ಭಿಣಿಯರಾಗುತ್ತಿದ್ದಂತೆಯೇ ತಮ್ಮ ಬೇಬಿ ಬಂಪ್ ತೋರಿಸುತ್ತಾ ಫೋಟೋಶೂಟ್ ಮಾಡಿಸೋದು ಟ್ರೆಂಡ್ ಆಗಿದೆ. ಇತ್ತೀಚೆಗಷ್ಟೆ ಅನುಷ್ಕಾ ಶರ್ಮಾ ಬೇಬಿ ಬಂಪ್ ತೋರಿಸುತ್ತಾ ಮಾಡಿಸಿದ್ದ ಬೋಲ್ಡ್ ಫೋಟೋಶೂಟ್ನಿಂದಾಗಿ ಟ್ರೋಲ್ ಆಗಿದ್ದರು. ಈಗ ಕನ್ನಡ ಸಿನಿಮಾದಲ್ಲಿ ಶಿವಣ್ಣ ಹಾಗೂ ಪುನೀತ್ ಜೊತೆ ಅಭಿನಯಿಸಿರುವ ಅನಿತಾ ಹಸ್ಸನಂದನಿ ಸಹ ಅನುಷ್ಕಾರ ದಾರಿಯನ್ನೇ ಹಿಡಿದಿದ್ದಾರೆ. ತುಂಬು ಗರ್ಭಿಣಿ ಅನಿತಾರ ಬೇಬಿ ಬಂಪ್ ತೋರಿಸುತ್ತಾ ತೆಗೆಸಿಕೊಂಡಿರುವ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. (ಚಿತ್ರಗಳು ಕೃಪೆ: Anita Hassanandani Instagram)