ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಬಿಗ್ ಬಾಸ್ ಸೀಸನ್ 09ಕ್ಕೆ ಓಟಿಟಿಯಿಂದ ಎಂಟ್ರಿ ಆಗಿದ್ದರು. ಚೆನ್ನಾಗಿ ಆಟ ಆಡ್ತಾ ಇದ್ದರು. ಸದಾ ರೂಪೇಶ್ ಶೆಟ್ಟಿ ಜೊತೆ ಇರ್ತಾ ಇದ್ರು. ವಿನೋದ್ ಗೊಬ್ಬರಗಾಲಗೂ ಮುಂಚೆ ಬಿಗ್ ಬಾಸ್ ನಿಂದ ಔಟ್ ಆಗಿದ್ದಾರೆ.
2/ 8
ಸಾನ್ಯಾ ಐಯ್ಯರ್ ಮೇಲೆ ದೇವಿ ಬರ್ತಾಳೆ ಅಂತ ಸುದ್ದಿ ಆಗಿದೆ. ಸಾನ್ಯಾ ಐಯ್ಯರ್ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಭಾಗವಹಿಸಿದ್ದರು. ಆ ರಿಯಾಲಿಟಿ ಶೋನಲ್ಲಿ ದೇವಿ ಡ್ಯಾನ್ಸ್ ಮಾಡುವಾಗ ದೇವಿ ಬಂದಿದ್ದಳಂತೆ.
3/ 8
ಆ ಡ್ಯಾನ್ಸ್ ಮಾಡುವಾಗ ಸಾನ್ಯಾ ಮೇಲೆ ದೇವಿ ಆವಾಹನೆ ಆಗಿದ್ದಳಂತೆ. ಅದಕ್ಕಾಗಿ ಸಾನ್ಯಾ, ದೇವಿ ನೀನು ಬರಲೇಬೇಕು ಎಂದು ಕೇಳಿಕೊಂಡಿದ್ದಳಂತೆ. ದೇವರು ನಮಗೆ ಸ್ನೇಹಿತರ ರೀತಿ. ನಾನು ಅದಕ್ಕೆ ದೇವಿಯನ್ನು ಅವಳು ಎನ್ನುತ್ತೇನೆ ಎಂದು ಸಾನ್ಯಾ ಅವರೇ ಹೇಳಿದ್ದಾರೆ.
4/ 8
ದೇವಿ ಡ್ಯಾನ್ಸ್ ಮಾಡುವಾಗ, ನಾನು ನಿನ್ನ ಪಾತ್ರ ಮಾಡುತ್ತಿದ್ದೇನೆ. ನೀನು ಬರದೇ ಹೇಗೆ ಹೋಗ್ತೀಯಾ ಅಂತ ಕೇಳಿದ್ದೆ. ಅದಕ್ಕಾಗಿ ತುಂಬಾ ಜಪ ಮಾಡಿದ್ದೆ ನಾನು. ಅವತ್ತು ದುರ್ಗಾ ದೇವಿ ಮೈಮೇಲೆ ಬಂದಿದ್ದಳಂತೆ.
5/ 8
ಡ್ಯಾನ್ಸ್ ಮಾಡುವ ಮೊದಲು ನನ್ನ ಮನಸ್ಸಿನಲ್ಲಿ ಬದಲಾವಣೆ ಆಗೋಕೆ ಶುರುವಾಯ್ತು. ನಾನು ಅಳಲು ಶುರು ಮಾಡಿದೆ. ನನಗೆ ಡಬಲ್ ಎನರ್ಜಿ ಬಂತು. ನನ್ನ ಕಂಟ್ರೋಲ್ನಲ್ಲಿ ನಾನು ಇರಲಿಲ್ಲ ಎಂದು ಸಾನ್ಯಾ ಹೇಳಿಕೊಂಡಿದ್ದಾರೆ.
6/ 8
ಸಾನ್ಯಾ ಐಯ್ಯರ್ ಕುಟುಂಬ ಆಧ್ಮಾತ್ಮದ ಕಡೆ ಹೆಚ್ಚಾಗಿ ಒಲವು ಹೊಂದಿದ್ದಾರೆ. ಪೂಜೆ ಪುನಸ್ಕಾರ ಮಾಡ್ತಾರೆ. ದೇವರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ದೇವರು ಬರುತ್ತೆ ಎಂದು ಹೇಳುತ್ತಿದ್ದಾರೆ.
7/ 8
ಬಿಗ್ ಬಾಸ್ ಮನೆಯಿಂದ ಸಾನ್ಯಾ ಐಯ್ಯರ್ ಔಟ್ ಆದ ಮೇಲೆ, ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಜೊತೆಗೆ ಅಮ್ಮ ದೀಪಾ ಐಯ್ಯರ್ ಕೂಡ ಇದ್ದಾರೆ.
8/ 8
ಅಸ್ಸಾಂನಲ್ಲಿರುವ ಮಾ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದಾರೆ. ಇದೊಂದು ಪ್ರಸಿದ್ಧಿ ದೇವತೆಯಾಗಿದ್ದು, ನೀಲಾಚಲ ಬೆಟ್ಟದ ಹೃದಯಭಾಗದಲ್ಲಿ ನೆಲೆಸಿದೆ.