ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಅವರು ಸದ್ಯ ಸಿನಿಮಾ, ನಿರೂಪಣೆಯಲ್ಲಿ ಬ್ಯುಸಿ ಆಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಛೋಟಾ ಚಾಂಪಿಯನ್ ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ.
2/ 8
ಕೆಲಸದಿಂದ ಬ್ರೇಕ್ ತೆಗೆದುಕೊಂಡ ಶ್ವೇತಾ ಚೆಂಗಪ್ಪ ಫ್ಯಾಮಿಲಿ ಜೊತೆ ಮಾಲ್ಡೀವ್ಸ್ ಟ್ರಿಪ್ ಎಂಜಾಯ್ ಮಾಡಿದ್ದಾರೆ. ಬೀಚ್ ಬಳಿ ಫೋಟೋಗೆ ಪೋಸ್ ನೀಡಿದ್ದಾರೆ.
3/ 8
ಶ್ವೇತಾ ಚಂಗಪ್ಪ ಅವರು ಶೇರ್ ಮಾಡಿರುವ ಫೋಟೋಗಳಿಗೆ 17 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಕಡಲ ತೀರದ ಶ್ವೇತ ಸುಂದರಿ, ಸಂತೂರ್ ಮಮ್ಮಿ ಎಂದು ಅಭಿಮಾನಿಗಳು ಹೇಳಿದ್ದಾರೆ.
4/ 8
ಶ್ವೇತಾ ಚೆಂಗಪ್ಪ ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಮಾಲ್ಡೀವ್ಸ್ಗೆ ಹೋಗಿದ್ದರು. ಅಲ್ಲಿನ ಫೋಟೋಗಳನ್ನು ಕಳೆದ ವಾರವೂ ಶೇರ್ ಮಾಡಿದ್ದರು.
5/ 8
ಕಾದಂಬರಿ ಧಾರಾವಾಹಿ ಮೂಲಕ ಶ್ವೇತಾ ಚೆಂಗಪ್ಪ ಜನಪ್ರಿಯ ಆಗಿದ್ದರು. ಮಜಾ ಟಾಕೀಸ್ ನಲ್ಲಿ ರಾಣಿಯಾಗಿ ಹೆಸರು ಮಾಡಿದ್ರು. ಸದ್ಯ ನಿರೂಪಕಿಯಾಗಿ ಎಲ್ಲೆಡೆ ಮಿಂಚ್ತಾ ಇದ್ದಾರೆ.
6/ 8
ಶಿವಣ್ಣ ಅವರ 125ನೇ ಸಿನಿಮಾ ವೇದಾದಲ್ಲಿ ಪಾರಿ ಆಗಿ ಅಭಿನಯಿಸಿದ್ದಾರೆ. ತಮ್ಮ ಅದ್ಭುತವಾದ ನಟನೆ ಮೂಲಕ ಕರುನಾಡ ಜನರಿಗೆ ಮತ್ತೊಮ್ಮೆ ಇಷ್ಟ ಆಗಿದ್ದಾರೆ.
7/ 8
ಶ್ವೇತಾ ಚೆಂಗಪ್ಪ ಬಿಗ್ ಬಾಸ್ ಸೀಸನ್ 2, ಹಾಕು ಹೆಜ್ಜೆ ಹಾಕು, ಕುಣಿಯೋಣು ಬಾರಾ, ಡ್ಯಾನ್ಸಿಂಗ್ ಸ್ಟಾರ್, ಮಜಾ ಟಾಕೀಸ್ ನಲ್ಲಿ ಮಿಂಚಿದ್ದಾರೆ. ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸ್ ಜೂನಿಯರ್ಸ್, ಜೋಡಿ ನಂಬರ್ ಒನ್, ಸೂಪರ್ ಕ್ವೀನ್ ಕಾರ್ಯಕ್ರಮದ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
8/ 8
2006ರಲ್ಲಿ ತೆರೆಕಂಡ ತಂಗಿಗಾಗಿ ಸಿನಿಮಾದಲ್ಲಿ ಕೊನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದ ಶ್ವೇತಾ, ಇತ್ತೀಚೆಗೆ ಶಿವಣ್ಣ ಅಭಿನಯದ ವೇದ ಸಿನಿಮಾದಲ್ಲಿ ನಟಿಸಿದ್ದರು.
First published:
18
Shwetha Changappa: ಕಡಲ ಕಿನಾರೆಯಲ್ಲಿ ಬ್ಯೂಟಿ ಶ್ವೇತಾ ಚೆಂಗಪ್ಪ, ಮಾಲ್ಡೀವ್ಸ್ನಲ್ಲಿ ಮಸ್ತ್ ಎಂಜಾಯ್!