ಕನ್ನಡ ಬಿಗ್ ಬಾಸ್ 2 ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಶ್ವೇತಾ ಚಂಗಪ್ಪ ಭಾಗವಹಿಸಿದ್ದರು. ಇವರು ನಾಲ್ಕನೇ ಸ್ಥಾನಗಳಿಸಿದರು. ನಂತರ ಮಜಾ ಟಾಕೀಸ್ ರಾಣಿಯಾಗಿ ಎಲ್ಲರಿಗೂ ಇಷ್ಟವಾಗಿದ್ದರು.ಶ್ವೇತಾ ದೂರದರ್ಶನ ಮತ್ತು ಚಲನಚಿತ್ರೋದ್ಯಮದಲ್ಲಿ ಇತ್ತೀಚೆಗೆ 20 ವರ್ಷ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಶ್ವೇತಾ ಅವರು ತಾವು ಪಾತ್ರ ನಿರ್ವಹಿಸಿದಂತಹ ಧಾರಾವಾಹಿ, ಸಿನಿಮಾಗಳನ್ನು ನೆನಪು ಮಾಡಿಕೊಂಡಿದ್ದರು.