ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ಸದ್ಯ ಸಿನಿಮಾ, ನಿರೂಪಣೆಯಲ್ಲಿ ಬ್ಯುಸಿ ಆಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಸೂಪರ್ ಕ್ವೀನ್ ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ.
2/ 7
ಶ್ವೇತಾ ಚಂಗಪ್ಪ ಅವರಿಗೆ ಪ್ರವಾಸ ಮಾಡುವುದು ಎಂದ್ರೆ ತುಂಬಾ ಇಷ್ಟ ಅಂತೆ. ಆಗಾಗ ಸಮಯ ಸಿಕ್ಕಾಗ ಪ್ರವಾಸಕ್ಕೆ ಹೋಗ್ತಾರೆ. ಸದ್ಯ ರಾಜಸ್ಥಾನದ ಪ್ರವಾಸ ಕೈಗೊಂಡಿದ್ದಾರೆ.
3/ 7
ಜೈಪುರದ ಅಂಬರ್ ಕೋಟೆ ನೋಡಿ ಖುಷಿ ಪಟ್ಟಿದ್ದಾರೆ. ಅದರ ಮುಂದೆ ಕೂತು ಫೋಟೋಗೆ ಪೋಸ್ ನೀಡಿದ್ದಾರೆ. ರಾಜಸ್ಥಾನ ನೋಡಲು ತುಂಬಾ ಚೆನ್ನಾಗಿದೆ ಎಂದು ಬರೆದುಕೊಂಡಿದ್ದಾರೆ.
4/ 7
ರಾಜಸ್ಥಾನ್ ಬೇರೆ ಬೇರೆ ಸ್ಥಳಗಳು, ಅಲ್ಲಿನ ಊಟದ ಶೈಲಿ, ಶಾಪಿಂಗ್ ಎಲ್ಲ ಮಾಡಿ ಖುಷಿ ಪಟ್ಟಿದ್ದಾರೆ. ದೇಶ ಒಂದೇ ಸಂಸ್ಕøತಿ ಬೇರೆ, ಬೇರೆ ಎಂದು ಅಲ್ಲಿಯ ವಾತಾವರಣವನ್ನು ಎಂಜಾಯ್ ಮಾಡಿದ್ದಾರೆ.
5/ 7
ಶ್ವೇತಾ ಚಂಗಪ್ಪ ಅವರು ಫೋಟೋಗಳನ್ನು ಬಹಳಷ್ಟು ಮಂದಿ ಇಷ್ಟ ಪಟ್ಟಿದ್ದಾರೆ. ಸೂಪರ್ ಎಂದು ಹೇಳಿದ್ದಾರೆ. ಇನ್ನಷ್ಟು ಪ್ರವಾಸ ಮಾಡುವ ಆಸೆ ಹೊಂದಿದ್ದಾರೆ ಶ್ವೇತಾ ಅವರು.
6/ 7
ಕಾದಂಬರಿ ಧಾರಾವಾಹಿ ಮೂಲಕ ಶ್ವೇತಾ ಚೆಂಗಪ್ಪ ಜನಪ್ರಿಯ ಆಗಿದ್ದರು. ಮಜಾ ಟಾಕೀಸ್ನಲ್ಲಿ ರಾಣಿಯಾಗಿ ಹೆಸರು ಮಾಡಿದ್ರು. ಸದ್ಯ ನಿರೂಪಕಿಯಾಗಿ ಎಲ್ಲೆಡೆ ಮಿಂಚ್ತಾ ಇದ್ದಾರೆ.
7/ 7
ಶಿವಣ್ಣ ಅವರ 125ನೇ ಸಿನಿಮಾ ವೇದಾದಲ್ಲಿ ಪಾರಿ ಆಗಿ ಅಭಿನಯಿಸಿದ್ದಾರೆ. ತಮ್ಮ ಅದ್ಭುತವಾದ ನಟನೆ ಮೂಲಕ ಕರುನಾಡ ಜನರಿಗೆ ಮತ್ತೊಮ್ಮೆ ಇಷ್ಟ ಆಗಿದ್ದಾರೆ.