Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್​ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್

ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರಿಗೆ 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್ ಆಗಿದ್ದಾರೆ ಈ ನಟಿ.

First published:

  • 18

    Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್​ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್

    ಕನ್ನಡ ಚಲನಚಿತ್ರರಂಗದ ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಕೊಡಗಿನ ಸೋಮವಾರ ಪೇಟೆಯಲ್ಲಿ 1987 ಫೆಬ್ರವರಿ 9 ರಂದು ಶ್ವೇತಾ ಜನಿಸಿದರು.

    MORE
    GALLERIES

  • 28

    Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್​ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್

    ಎಸ್. ನಾರಾಯಣ ನಿರ್ದೇಶನದ `ಸುಮತಿ' ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಶ್ವೇತಾ, 2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ `ಕಾದಂಬರಿ' ಸೀರಿಯಲ್ ಮೂಲಕ ಜನಪ್ರಿಯತೆ ಪಡೆದರು.

    MORE
    GALLERIES

  • 38

    Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್​ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್

    ನಟನೆ ಮಾತ್ರವಲ್ಲದೇ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ `ಯಾರಿಗುಂಟು ಯಾರಿಗಿಲ್ಲಾ', `ಕುಣಿಯೋಣ ಬಾರಾ', ಚಿಣ್ಣರ ನೃತ್ಯ ಶೋ, `ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್' ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಜೀ ಕನ್ನಡದಲ್ಲಿ ಸೂಪರ್ ಕ್ವೀನ್ ಕಾರ್ಯಕ್ರಮ ನಡೆಸಿಕೊಡ್ತಾ ಇದ್ದಾರೆ.

    MORE
    GALLERIES

  • 48

    Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್​ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್

    `ತಂಗಿಗಾಗಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಸಾಹಸಸಿಂಹ ವಿಷ್ಣುವರ್ಧನ ಅಭಿನಯದ `ವರ್ಷ' ಚಿತ್ರದಲ್ಲಿ ನಟಿಸಿದ್ದಾರೆ. `ಕೃಷ್ಣನ್ ಮ್ಯಾರೇಜ್ ಸ್ಟೋರಿ', `ಗನ್' ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿ ಕೂಡ ಮೆಚ್ಚುಗೆ ಗಳಿಸಿದ್ದಾರೆ.

    MORE
    GALLERIES

  • 58

    Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್​ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್

    ಶಿವಣ್ಣ ಅವರ 125ನೇ ಸಿನಿಮಾ ವೇದಾದಲ್ಲಿ ಪಾರಿ ಆಗಿ ಅಭಿನಯಿಸಿದ್ದಾರೆ. ತಮ್ಮ ಅದ್ಭುತವಾದ ನಟನೆ ಮೂಲಕ ಕರುನಾಡ ಜನರಿಗೆ ಮತ್ತೊಮ್ಮೆ ಇಷ್ಟ ಆಗಿದ್ದಾರೆ.

    MORE
    GALLERIES

  • 68

    Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್​ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್

    ಕನ್ನಡ ಬಿಗ್ ಬಾಸ್ 2 ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಶ್ವೇತಾ ಚಂಗಪ್ಪ ಭಾಗವಹಿಸಿದ್ದರು. ಇವರು ನಾಲ್ಕನೇ ಸ್ಥಾನಗಳಿಸಿದರು. ನಂತರ ಮಜಾ ಟಾಕೀಸ್ ರಾಣಿಯಾಗಿ ಎಲ್ಲರಿಗೂ ಇಷ್ಟವಾಗಿದ್ದರು.

    MORE
    GALLERIES

  • 78

    Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್​ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್

    ಎರಡು ಬಾರಿ ಜೀ ಕನ್ನಡದ ಬೆಸ್ಟ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ. `ಅರುಂಧತಿ' ಸೀರಿಯಲ್‍ನಲ್ಲಿನ ನಟನೆಗಾಗಿ ಕರ್ನಾಟಕ ಸರಕಾರ ನೀಡುವ ಮಧ್ಯಂಸನ್ಮಾನ ಪ್ರಶಸ್ತಿ ಕೂಡ ಪಡೆದಿದ್ದಾರೆ.

    MORE
    GALLERIES

  • 88

    Shwetha Changappa: ಕಾದಂಬರಿ ಖ್ಯಾತಿಯ ಶ್ವೇತಾ ಚಂಗಪ್ಪ ಬರ್ತ್​ಡೇ! 20 ವರ್ಷದಿಂದ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್

    ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ದೂರದರ್ಶನ ಮತ್ತು ಚಲನಚಿತ್ರೋದ್ಯಮದಲ್ಲಿ 20 ವರ್ಷ ಪೂರೈಸಿದ್ದಾರೆ. ಶ್ವೇತಾ ಅವರು ತಾವು ಪಾತ್ರ ನಿರ್ವಹಿಸಿದಂತಹ ಧಾರಾವಾಹಿ, ಸಿನಿಮಾಗಳನ್ನು ನೆನಪು ಮಾಡಿಕೊಂಡಿದ್ದರು.

    MORE
    GALLERIES