Actress Amulya: ಹೆರಿಗೆ ನಂತರ ಸೂಪರ್ ಫೋಟೋ ಶೇರ್ ಮಾಡಿದ ಅಮೂಲ್ಯ, ಐಶೂ ಫಿಟ್ ಆ್ಯಂಡ್ ಫೈನ್ ಅಂದ್ರು ಫ್ಯಾನ್ಸ್
Sandalwood: ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಹೆರಿಗೆಯ ನಂತರ ಸ್ವಲ್ಪ ಬ್ಯುಸಿ ಇದ್ದರು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಒಂದು ಹೊಸ ಫೋಟೋ ಅಪ್ಲೊಡ್ ಮಾಡಿದ್ದು, ಅಭಿಮಾನಿಗಳು ಎಷ್ಟು ಫಿಟ್ ಆಗಿ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ನ ಗೋಲ್ಡನ್ ಕ್ವೀನ್ ಅಮೂಲ್ಯಾ ಮುದ್ದಾದ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಹೆರಿಗೆಯ ನಂತರ ಹೊರಗೆ ಎಲ್ಲೂ ಕಾಣಿಸಿಕೊಳ್ಳದ ಅಮೂಲ್ಯ, ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.
2/ 8
ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ಅಮೂಲ್ಯ, ಮಕ್ಕಳಾದ ನಂತರ ಸ್ವಲ್ಪ ದೂರವಿದ್ದರು, ಇದೀಗ ಮತ್ತೆ ಆಕ್ಟೀವ್ ಆಗಿದ್ದು, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
3/ 8
ತಾವು ಗರ್ಭಿಣಿ ಎನ್ನುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದ ಅಮೂಲ್ಯ, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಸುದ್ದಿಯಾಗಿದ್ದರು.
4/ 8
ಇದೀಗ ನಟಿ ಮತ್ತೊಂದು ಫೋಟೋ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಅಮೂಲ್ಯ ಫಿಟ್ ಆಗಿ ಕಾಣಿಸಿದ್ದು, ಹೆರಿಯ ನಂತರ ಅಮೂಲ್ಯ ತೂಕ ಇಳಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
5/ 8
ಹಸಿರು ಬಣ್ಣದ ಗೌನ್ ಧರಿಸಿರುವ ಅಮೂಲ್ಯ ಫೋಟೋಗಳು ವೈರಲ್ ಆಗುತ್ತಿದ್ದು, ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
6/ 8
ಇನ್ನು ಮೊನ್ನೆಯಷ್ಟೇ ಅಮೂಲ್ಯ ಮಕ್ಕಳ ಪಾದವನ್ನು ಮುದ್ದು ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಆಗ ನೆಟ್ಟಿಗರು ಮಕ್ಕಳ ಮುಖ ತೋರಿಸಿ ಎಂದು ಕಾಮೆಂಟ್ ಮಾಡಿದ್ದರು.
7/ 8
ಚಲುವಿನ ಚಿತ್ತಾರದ ಮೂಲಕ ಕನ್ನಡಗಿರ ಮನೆ ಮನದಲ್ಲಿ ಐಶು ಆಗಿ ಪ್ರಸಿದ್ದರಾಗಿರುವ ನಟಿ ಅಮೂಲ್ಯ. ತಮ್ಮ ಮುಗ್ಧ ಹಾಗೂ ಸಹಜ ನಟನೆಯ ಕಾರಣದಿಂದ ಗೋಲ್ಡನ್ ಕ್ವೀನ್ ಎಂದೇ ಹೆಸರು ಪಡೆದವರು.
8/ 8
2017ರಲ್ಲಿ ಜಗದೀಶ್ ಅವರನ್ನು ಮದುವೆಯಾದ ಅಮೂಲ್ಯ, ಚಿತ್ರರಂಗದಿಂದ ದೂರವಿದ್ದರು. ಕಳೆದ ಮಾರ್ಚ್ನಲ್ಲಿ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದು, ಅಭಿಮಾನಿಗಳು ಮಕ್ಕಳ ಮುಖವನ್ನು ಯಾವಾಗ ತೋರಿಸುತ್ತೀರಾ ಎಂದು ಕೇಳುತ್ತಿದ್ದಾರೆ.