Aishwarya Baspure: ಮತ್ತೆ ಬಂದಳು ಮೋಹಿನಿಯ 'ಮಾಯಾ'! ಖಳನಾಯಕಿಯಾಗಿ ಐಶ್ವರ್ಯ ರೀ-ಎಂಟ್ರಿ
ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ವಿಲನ್ ಆಗಿ ಮಿಂಚಿದ್ದ ಐಶ್ವರ್ಯ ಬಸ್ಪುರೆ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯೂ ಮತ್ತೆ ವಿಲನ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಯಾವ ಧಾರಾವಾಹಿ? ಯಾವ ಪಾತ್ರ?
ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ವಿಲನ್ ಆಗಿ ಮಿಂಚಿದ್ದ ಐಶ್ವರ್ಯ ಬಸ್ಪುರೆ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯೂ ಮತ್ತೆ ವಿಲನ್ ಆಗಿಯೇ ಕಾಣಿಸಿಕೊಂಡಿದ್ದಾರೆ.
2/ 8
ಐಶ್ವರ್ಯ ಬಸ್ಪುರೆ ಉದಯ ಟಿವಿ ಮೂಲಕ ಕಿರುತೆರೆ ಪಯಣ ಶುರು ಮಾಡಿದ್ದರು. 'ಮಹಾಸತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಆರತಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಆದ್ರೆ ಆ ಪಾತ್ರ ಅಷ್ಟು ಅವರಿಗೆ ಅಷ್ಟು ಯಶಸ್ಸು ತಂದು ಕೊಡಲಿಲ್ಲ.
3/ 8
ಆದ್ರೆ 'ಯಾರೇ ನೀ ಮೋಹಿನಿ'ಯಲ್ಲಿ 'ಮಾಯಾ' ಪಾತ್ರವನ್ನು ಜನ ಇಷ್ಟ ಪಟ್ಟಿದ್ದರು. ತನ್ನ ಮಾವನನ್ನು ಪಡೆಯಲು ಏನೂ ಬೇಕಾದ್ರೂ ಮಾಡುವ ಹಠ ಜನರನ್ನು ಸೆಳೆದಿತ್ತು.
4/ 8
ಈಗಲೂ ಕಿರುತೆರೆಯಲ್ಲಿ ಮಾಯಾ ಅಂದ್ರೆ ನೆನಪಾಗೋದು ಐಶ್ವರ್ಯ ಬಸ್ಪುರೆ. ಯಾಕಂದ್ರೆ ತಮ್ಮ ಅದ್ಭುತ ನಟನೆಯ ಮೂಲಕ ವಿಲನ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.
5/ 8
ಕೊರೋನಾ ವೇಳೆ ಬ್ರೇಕ್ ತೆಗೆದುಕೊಂಡಿದ್ದ ಐಶ್ವರ್ಯ ಬಸ್ಪುರೆ ,ಈಗ ಮತ್ತೆ 'ಸತ್ಯ' ಮತ್ತು 'ಒಲವಿನ ನಿಲ್ದಾಣ' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ವೀಕ್ಷಕರು ಈಗಾಗಗಲೇ ಅವರ ಪಾತ್ರಗಳನ್ನು ಮೆಚ್ಚಿಕೊಂಡಿದ್ದಾರೆ.
6/ 8
ಸತ್ಯ ಧಾರಾವಾಹಿಯಲ್ಲಿ ಮಾಳವಿಕಾ ಆಗಿ ವಿಲನ್ ರೋಲ್ ಮಾಡ್ತಿದ್ದಾರೆ. ಧಾರಾವಾಹಿಗೆ ಎಂಟ್ರಿ ಆಗುತ್ತಿದ್ದಂತೆ ತಮ್ಮ ಆಟ ಶುರು ಮಾಡಿದ್ದಾರೆ. ನಟ ಕಾರ್ತಿಕ್ ಮೇಲೆ ಸುಳ್ಳು ಆರೋಪ ಮಾಡಿ ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾರೆ.
7/ 8
ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ದೇವಿಕಾ ಪಾತ್ರವನ್ನು ಮಾಡುತ್ತಿದ್ದಾರೆ. ನಾಯಕಿ ತಾರಿಣಿ ಮನಸ್ಸಿನಲ್ಲಿ ಇಲ್ಲ ಸಲ್ಲದ್ದನ್ನು ತುಂಬುವ ಪಾತ್ರ. ಸಿದ್ಧಾಂತ್ ನಿಂದ ದೂರ ಮಾಡುವ ಪ್ರಯತ್ನ ನಡೀತಾ ಇದೆ.
8/ 8
ಸತ್ಯ ಮತ್ತು ಒಲವಿನ ನಿಲ್ದಾಣದಲ್ಲಿ ಐಶ್ವರ್ಯ ಬಸ್ಪುರೆ ಚೆನ್ನಾಗಿ ನಟಿಸುತ್ತಿದ್ದಾರೆ. ಆದ್ರೆ ಎರಡರಲ್ಲೂ ಗೆಸ್ಟ್ ರೋಲ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಪೂರ್ತಿ ಧಾರಾವಾಹಿಗಳಲ್ಲಿ ಮುಂದುವರೆಯುತ್ತಾರಾ ಅನ್ನೋದನ್ನ ಕಾದು ನೋಡಬೇಕು.