Actress Abhinaya: ಅಭಿನಯಾ ಸಿನಿ ಕರಿಯರ್ಗೆ ಬೀಳುತ್ತಾ ಫುಲ್ ಸ್ಟಾಪ್? 2 ವರ್ಷದ ಶಿಕ್ಷೆಯಿಂದಾಗಿ ಧಾರಾವಾಹಿಯಿಂದ ನಟಿ ಔಟ್!
ಹಿಟ್ಲರ್ ಕಲ್ಯಾಣ, ಕಥೆಯೊಂದು ಶುರುವಾಗಿದೆ ಧಾರಾವಾಹಿಯಲ್ಲಿ ತಾಯಿ ಪಾತ್ರ ನಿರ್ವಹಿಸುತ್ತಿದ್ದ ನಟಿ ಅಭಿನಯ ಅವರು ಸೀರಿಯಲ್ಗಳಿಂದ ಔಟ್ ಆಗಿದ್ದಾರೆ. ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ್ದ ಕಾರಣಕ್ಕೆ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ!
ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಹಿಟ್ಲರ್ ಕಲ್ಯಾಣ ಧಾರಾವಾಹಿ ಪ್ರಸಾರವಾಗ್ತಿದೆ. ವಿಭಿನ್ನವಾದ ಕಥೆ ಮೂಲಕ ಜನರಿಗೆ ಹತ್ತಿರವಾಗಿದೆ.
2/ 8
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿ ಲೀಲಾ ಮಲತಾಯಿ ಆಗಿ ಅಭಿನಯಾ ಅವರು ಕೌಸಲ್ಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಸ್ಪಲ್ಪ ನೆಗೆಟಿವ್ ಶೇಡ್ ಆದ್ರೂ ಕಾಮಿಡಿ ರೀತಿ ಪಾತ್ರ ಇತ್ತು.
3/ 8
ಲೀಲಾಳಿಗೆ ಸದಾ ಕಾಟ ಕೊಡುತ್ತಾ, ದುಡ್ಡು, ದುಡ್ಡು ಎಂದು ಬಾಯಿ ಬಡಿದುಕೊಳ್ಳುವ ಪಾತ್ರ. ಅದನ್ನು ಅಭಿನಯಾ ಅವರು ಚೆನ್ನಾಗಿ ಮಾಡ್ತಾ ಇದ್ರು. ಈಗ ಪಾತ್ರದಿಂದ ಅಭಿನಯಾ ಔಟ್ ಆಗಿದ್ದರು.
4/ 8
ತಮ್ಮ ಸಹೋದರನ ಪತ್ನಿಗೆ ವರದಕ್ಷಿಣೆ ಕಿರುಕುಳ ಕೊಟ್ಟಿದ್ರಂತೆ ಅದಕ್ಕೆ, ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಅಭಿನಯಾಗೆ ಶಿಕ್ಷೆ ಪ್ರಕಟವಾಗಿತ್ತು. ಅದಕ್ಕೆ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.
5/ 8
1998ರಲ್ಲಿ ಅಭಿನಯಾ ಅವರ ಸಹೋದರ ಶ್ರೀನಿವಾಸ್ ಅವರಿಗೆ ಲಕ್ಷ್ಮೀದೇವಿ ಎಂಬುವರ ಜೊತೆ ಮದುವೆ ಆಗಿತ್ತು. ಮದುವೆ ಸಮಯದಲ್ಲಿ ಅಭಿನಯಾ ಕುಟುಂಬಸ್ಥರು ವರದಕ್ಷಿಣೆ ಪಡೆದಿದ್ದರು. ಮದುವೆಯ ನಂತರವೂ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರಂತೆ.
6/ 8
ವರದಕ್ಷಿಣೆ ಕಿರುಕುಳ ವಿರೋಧಿಸಿ ಲಕ್ಷ್ಮೀದೇವಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿತ್ತು. ಅಭಿನಯಾಗೆ 2 ಎರಡು ವರ್ಷ ಜೈಲುಶಿಕ್ಷೆ, ಅಭಿನಯಾ ತಾಯಿಗೆ 5 ವರ್ಷ ಜೈಲುಶಿಕ್ಷೆ ನೀಡಿ ಕೋರ್ಟ್ ನೀಡಿತ್ತು.
7/ 8
ಅದಕ್ಕೆ ಅಭಿನಯಾ ಅವರು ಧಾರಾವಾಹಿಗಳಿಂದ ಔಟ್ ಆಗಿದ್ದಾರೆ. ಹಿಟ್ಲರ್ ಕಲ್ಯಾಣ ಧಾರಾವಾಹಿಯ ಕೌಸಲ್ಯ ಪಾತ್ರಕ್ಕೆ ವಾಣಿಶ್ರೀ ಅವರು ಬಂದಿದ್ದಾರೆ.
8/ 8
ಇನ್ನು ಅಭಿನಯ ಅವರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರುವ ಕಥೆಯೊಂದು ಶುರುವಾಗಿದೆ ಸೀರಿಯಲ್ ನಲ್ಲೂ ಅಭಿನಯಿಸಿದ್ದರು. ಹೀರೋ ತಾಯಿ ಪಾತ್ರ ಮಾಡ್ತಿದ್ದರು. ಅಲ್ಲಿಂದಲೂ ಔಟ್ ಆಗಿದ್ದಾರೆ.