Aarohi Narayan: ದೃಶ್ಯಂ ಸುಂದರಿ ಆರೋಹಿ ನಾರಾಯಣ್ ರಿಯಲ್ ಲೈಫ್ನಲ್ಲಿ ಎಷ್ಟು ಸ್ಟೈಲಿಶ್ ನೋಡಿ
Swaroopini: ಕನ್ನಡದ ದೃಶ್ಯ ಸಿನಿಮಾ ಮಲಯಾಳಂನ ರಿಮೇಕ್ ಆದರೂ ಸಹ ಜನರಿಗೆ ಇಷ್ಟವಾಗಿತ್ತು. ಅದರಲ್ಲಿ ರವಿಚಂದ್ರನ್ ಮಗಳ ಪಾತ್ರ ಮಾಡಿದ್ದ ನಟಿ ನೆನಪಿರಬಹುದು. ಬಹಳ ನಾಜೂಕಿನ ಸ್ವಭಾವದ ಪಾತ್ರ ಮಾಡಿದ್ದ ಈ ಸುಂದರಿ, ರಿಯಲ್ ಲೈಫ್ನಲ್ಲಿ ಬಹಳ ಸ್ಟೈಲಿಶ್, ಅವರ ಫೋಟೋಗಳು ಬಹಳ ವೈರಲ್ ಆಗುತ್ತದೆ. ಕೆಲ ಫೋಟೋಗಳು ಇಲ್ಲಿದೆ ನೋಡಿ.
ನಟಿ ಆರೋಹಿಯ ಮೊದಲ ಹೆಸರು ಸ್ವರೂಪಿಣಿ. ದೃಶ್ಯ 1 ಸಿನಿಮಾದಲ್ಲಿ ಅಭಿನಯಿಸಿದ ನಂತರ ಅವರು ಹೆಸರು ಬದಲಾಯಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿಯೇ ಅದ್ಭುತ ಅಭಿನಯದ ಮೂಲಕ ಎಲ್ಲರ ಮನ ಸೆಳೆದ ನಟಿ ಇವರು.
2/ 8
ದೃಶ್ಯ ಸಿನಿಮಾದಲ್ಲಿ ಆರೋಹಿ ರವಿಚಂದ್ರನ್ ಮಗಳು ಸಿಂಧೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಬಹುಮುಖ್ಯ ಪಾತ್ರ ಇವರದ್ದು, ಇವರೇ ಕಥೆಯ ಜೀವಾಳ.
3/ 8
ದೃಶ್ಯ ಸಿನಿಮಾದ ನಿರ್ದೇಶಕ ಪಿ ವಾಸು ಪ್ರಕಾರ ಆರೋಹಿ ಕನ್ನಡದ ನಯನತಾರಾ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವಂತೆ. ಅಂಥಹ ಅದ್ಬುತ ನಟಿ ಎಂಬುದು ಅವರ ಅಭಿಪ್ರಾಯ.
4/ 8
ಆರೋಹಿಯ ಮೊದಲ ಸಿನಿಮಾ ದೃಶ್ಯ 1 ನಂತರ ಶಿವಾಜಿ ಸೂರತ್ಕಲ್ ಹಾಗೂ ಭೀಮಸೇನ ನಳ ಮಹಾರಾಜ ಸಿನಿಮಾದಲ್ಲಿ ಸಹ ಅಭಿನಯಿಸಿದ್ದರು. ಅಲ್ಲದೇ, ದೃಶ್ಯ 2 ಸಿನಿಮಾದಲ್ಲಿ ಸಹ ಅಭಿನಯಿಸಿದ್ದಾರೆ.
5/ 8
ಅಭಿನಯಿಸಿದ್ದು ಕೆಲವೇ ಚಿತ್ರಗಳಾದರೂ ಆರೋಹಿ ಜನರ ಮನಸಿನಲ್ಲಿ ತಮ್ಮ ನಟನೆಯ ಛಾಪು ಮೂಡಿಸಿದ್ದಾರೆ. ಅವರಿಗೆ ಈಗಾಗಲೇ ಬಹಳಷ್ಟು ಅಭಿಮಾನಿಗಳಿದ್ದಾರೆ.
6/ 8
ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಇರುವ ಆರೋಹಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಹಾಕಿಕೊಂಡು ಅಭಿಮಾನಿಗಳಿಗೆ ಅಪ್ಡೆಟ್ ನೀಡುತ್ತಿರುತ್ತಾರೆ.
7/ 8
ಅದೆಷ್ಟೇ ಬ್ಯುಸಿ ಇದ್ದರೂ ಸಹ ಅವರು ತಮ್ಮ ಫ್ಯಾನ್ಸ್ ಹಾಗೂ ಫ್ಯಾಮಿಲಿಗೆ ಸಮಯ ಮೀಸಲಿಡುತ್ತಾರಂತೆ. ಅವರಿಗೆ ಕುಟುಂಬ ಮತ್ತು ಅಭಿಮಾನಿಗಳು ಬಹಳ ಮುಖ್ಯ ಎನ್ನುತ್ತಾರೆ ನಟಿ.
8/ 8
ಇನ್ನು ಸ್ಯಾಂಡಲ್ವುಡ್ನಲ್ಲಿ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದು, ದೊಡ್ಡ ಬ್ರೇಕ್ ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.