ಇತ್ತೀಚೆಗೆ ಬಿಡಿಗಡೆಯಾಗಿದ್ದ ಧರಣಿ ಮಂಡಲ ಚಿತ್ರ ಎಲ್ಲರನ್ನೂ ಸೆಳೆದಿತ್ತು. ಅದರಲ್ಲಿ ನಟಿಸಿರುವ ನಾಯಕರು ಮತ್ತೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಟ ಯಶ್ ಶೆಟ್ಟಿ ಮತ್ತು ನಟ ಸಿದ್ದು ಮೂಲಿಮನಿ ಧರಣಿಮಂಡಲ ಚಿತ್ರದ ನಂತರ ಮತ್ತೊಂದು ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಯಶ್ ಶೆಟ್ಟಿ ಮತ್ತು ಸಿದ್ದು ಮೂಲಿಮನಿ ಅವರ ಹೊಸ ಪ್ರಾಜೆಕ್ಟ್ಗೆ ಮುಹೂರ್ತ ನೆರವೇರಿಸಲಾಗಿದೆ. ಪೂಜೆ ಸಮಯದಲ್ಲಿ ಚಿತ್ರತಂಡ ಖುಷಿಯಾಗಿತ್ತು. ಸಿದ್ದು ಮೂಲಿಮನೆ ಕಿರುತೆರೆ, ಸಿನಿಮಾ ಎರಡರಲ್ಲೂ ಬ್ಯುಸಿ ಆಗಿದ್ದಾರೆ. ಇನ್ನು ಯಶ್ ಶೆಟ್ಟಿ ಅನೇಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ ಇನ್ನು ಧರಣಿಮಂಡಲ ಮಧ್ಯದೊಳಗೆ ಸಿನಿಮಾಗೆ ಸಹ ನಿರ್ದೇಶಕನಾಗಿದ್ದ ಸಂತೋಷ್ ಈಗ ತಾವೇ ನಿರ್ದೇಶಕನಾಗಿ ತಮ್ಮ ಮೊದಲ ಸಿನಿಮಾ ಶುರುಮಾಡಿದ್ದಾರೆ. ಹೊಸ ಸಿನಿಮಾಕ್ಕೆ 'KA' ಎಂದು ಅರ್ಧ ಟೈಟಲ್ ರಿವೀಲ್ ಮಾಡಿದ್ದಾರೆ. ಇದು ಎಲ್ಲರನ್ನೂ ಕತೂಹಲ ಮೂಡಿಸಿದೆ. ಇನ್ನೂ ಅರ್ಧ ಟೈಟಲ್ ಏನಿರಬಹುದು ಎಂದು ಕೇಳ್ತಾ ಇದ್ದಾರೆ. ಹೊಸ ಸಿನಿಮಾದ ಛಾಯಾಗ್ರಹಣವನ್ನು ಕೀರ್ತನ್ ಪೂಜಾರಿ ಮಾಡುತ್ತಿದ್ದಾರೆ. ರೋಣದ ಬಕ್ಕೇಷ್ ಹಾಗೂ ಕಾರ್ತಿಕ್ ಚಿನ್ನೋಜಿ ರಾವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಗೀತ ರಚನೆಯನ್ನು ಗೌಸ್ ಪೀರ್ ಮಾಡ್ತಿದ್ದಾರೆ, ಉಜ್ವಲ್ ಚಂದ್ರ ಸಂಕಲನ ಮಾಡಿದ್ರೆ, ಸಾಹಸ ನಿರ್ದೇಶನವನ್ನು ಚಂದ್ರು ಬಂಡೆ ಮಾಡಿದ್ದಾರೆ.