ಮೈಸೂರಿನಲ್ಲಿರುವ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಸ್ಮಾರಕ ಜನವರಿ 29 ರಂದು ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ಅಧಿಕೃತ ಮಾಹಿತಿ ನೀಡಿದ್ದಾರೆ.
2/ 8
ನಮಸ್ಕಾರ ಎಲ್ಲರಿಗೂ. ಇವತ್ತು ತಮ್ಮೆಲ್ಲರ ಜೊತೆ ಸಂತೋಷದ ಸುದ್ದಿ ಒಂದನ್ನು ಹಂಚಿಕೊಳ್ಳುತ್ತಿದ್ದೇನೆ. ಇದೇ ತಿಂಗಳು 29ನೇ ತಾರೀಕು ಭಾನುವಾರ ಸಾಹಸಿಂಹ ವಿಷ್ಣುವರ್ಧನ್ ಅವರ ಮೈಸೂರಿನಲ್ಲಿ ಪೂರ್ಣಗೊಂಡಿರುವ ಸ್ಮಾರಕದ ಉದ್ಘಾಟನೆ ನಡೆಯಲಿದೆ ಎಂದಿದ್ದಾರೆ.
3/ 8
ಈಗಾಗಲೇ ಸಿಎಂ ಅವರು ತಾವು ಈ ಸಮಾರಂಭಕ್ಕೆ ಬರುವುದಾಗಿ ಒಪ್ಪಿಕೊಂಡಿದ್ದಾರೆ. ತಾವೆಲ್ಲ ಅಭಿಮಾನಿಗಳು ಇಷ್ಟು ವರ್ಷ ಕಾದಿದ್ದೀರಿ ಎಂದಿದ್ದಾರೆ.
4/ 8
ಇವತ್ತು ಈ ಒಂದು ಸಂತೋಷದ ಸುದ್ದಿ ತಾವೆಲ್ಲರೂ ಕೇಳುತ್ತಿದ್ದೀರಿ. ನೀವೆಲ್ಲರೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ.
5/ 8
ನೀವು ಭಾಗವಹಿಸಿ ನಿಮ್ಮ ನಮನ, ಶ್ರದ್ಧಾಂಜಲಿಯನ್ನು ಸಲ್ಲಿಸಿ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ ಎಂದು ಅನಿರುದ್ಧ ಅವರು ಹೇಳಿದ್ದಾರೆ.
6/ 8
ನಟ ಅನಿರುದ್ಧ ಅವರು ವಿಡಿಯೋ ಮಾಡಿ ಅಭಿಮಾನಿಗಳಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದು ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.
7/ 8
ಕನ್ನಡಿಗರ ಆರಾಧ್ಯ ದೈವ ಸಾಹಸ ಸಿಂಹ ವಿಷ್ಣುವರ್ಧನ್ ಅವರು 2009 ಡಿಸೆಂಬರ್ 30ರಂದು ಮೃತಪಟ್ಟಿದ್ದಾರೆ. ನಟ ಅಗಲಿ 14 ವರ್ಷಗಳ ನಂತರ ಸ್ಮಾರಕ ಉದ್ಘಾಟನೆ ಆಗುತ್ತಿದೆ.
8/ 8
ಮೈಸೂರಿನಲ್ಲಿ ಸ್ಮಾರ ಉದ್ಘಾಟನೆಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಸಾಧ್ಯತೆ ಇದೆ. ವಿಶೇಷವಾಗಿ ಕಾರ್ಯಕ್ರಮ ಭಾನುವಾರ ನಡೆಯುವುದರಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.