ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟ-ನಟಿಯರು ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚುಗೆಯ ಮಾತಾಡಿದ್ರು. ರಿಷಬ್ ನಟನೆಯನ್ನು ಕೊಂಡಾಡಿದ್ರು. ಕಾಂತಾದ ಸಿನಿಮಾದಲ್ಲಿ ಭೂತಕೋಲದ ಆರಾಧನೆ ನೋಡಿದ ಪ್ರೇಕ್ಷಕರು ನೇರವಾಗಿ ಭೂತಾರಾಧನೆ ನೋಡಲು ಇಚ್ಛಿಸುತ್ತಿದ್ದಾರೆ. ಭೂತಕೋಲವನ್ನು ಸೆಲೆಬ್ರಿಟಿಗಳು ಕೂಡ ನೋಡಲು ಉತ್ಸುಕರಾಗಿದ್ದಾರೆ. ಕೋಲವನ್ನು ನೋಡಲು ಧರ್ಮಸ್ಥಳಕ್ಕೆ ಬರೋದಾಗಿ ಕಾಲಿವುಡ್ ನಟ ವಿಶಾಲ್ ಹೇಳಿದ್ದಾರೆ. ಕಾಂತಾರ ಚಿತ್ರವನ್ನು ಮೆಚ್ಚಿದ ವಿಶಾಲ್, ನನಗೆ ಸಿನಿಮಾ ಬರುವುದಕ್ಕಿಂತ ಮೊದಲೇ ದೈವಾರಾಧನೆ ಬಗ್ಗೆ ಅರಿವಿತ್ತು ಎಂದು ಹೇಳಿದ್ದಾರೆ. ಕಾಂತಾರ ಸಿನಿಮಾ ದೈವಾರಾಧನೆಯನ್ನು ದೇಶ-ವಿದೇಶ ಮಟ್ಟದಲ್ಲಿ ಪರಿಚಯಿಸಿದ್ದು, ತನ್ನ ಸಂಸ್ಕೃತಿಯನ್ನು ಎತ್ತಿಹಿಡಿದಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ ಅನೇಕರು ಮೂಖ ವಿಸ್ಮಿತರಾಗಿದ್ದಾರೆ. ನಟ-ನಟಿಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವಿಶಾಲ್ ಹೇಳಿದ್ದಾರೆ. ತುಳುನಾಡಿನ ಸಂಸ್ಕೃತಿ ದೈವರಾಧನೆಯನ್ನು ಕಣ್ತುಂಬಿಕೊಳ್ಳಲು ವಿಶಾಲ್ ಬಯಸಿದ್ದು, ಧರ್ಮಸ್ಥಳಕ್ಕೆ ಬರುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಕಾಲಿವುಡ್ ನಟ ವಿಶಾಲ್ ಧರ್ಮಸ್ಥಳಕ್ಕೆ ಹಾಗೂ ಕುಕ್ಕೆ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೂ ಭೇಟಿ ಕೊಟ್ಟಿದ್ದರು.