Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

ಸೌತ್ ಸಿನಿಮಾ ಇಂಡಸ್ಟ್ರಿಯ ಪ್ರಸಿದ್ಧ ನಟಿ ಊರ್ವಶಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ಅಭಿಮಾನಿಯಿಸಿದ್ದಾರೆ. 90ರ ದಶಕದಲ್ಲಿ ಸ್ಟಾರ್ ನಟಿಯಾಗಿ ಊರ್ವಶಿ ಮಿಂಚಿದ್ರು. ನಟಿ ಊರ್ವಶಿಯ ಕ್ಯಾರಾವ್ಯಾನ್ ಸ್ಟೋರಿ ಇದೀಗ ಬಯಲಾಗಿದೆ.

First published:

  • 110

    MORE
    GALLERIES

  • 210

    Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

    ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್​ನಲ್ಲಿ ಅನೇಕ ನಟ-ನಟಿಯರು ಕ್ಯಾರಾವ್ಯಾನ್ ಬಳಸುತ್ತಿದ್ದಾರೆ. ದೂರ ಪ್ರದೇಶಗಳಿಗೆ ಶೂಟಿಂಗ್​ಗೆ ತೆರಳಲು ನಟ-ನಟಿಯರು ಹೆಚ್ಚಾಗಿ ಕ್ಯಾರಾವ್ಯಾನ್ ಬಳಸುತ್ತಾರೆ. ಫ್ಯಾಮಿಲಿ ಜೊತೆ ಹೋಗಲು ಸ್ಟಾರ್​ಗಳಿಗೆ ಕ್ಯಾರಾವ್ಯಾನ್ ಕಂಫರ್ಟ್ ಫೀಲ್ ನೀಡುತ್ತದೆ.

    MORE
    GALLERIES

  • 310

    Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

    ಸ್ಟಾರ್ ನಟ-ನಟಿಯರು ವೈಯಕ್ತಿಕ ಅನುಕೂಲಕ್ಕಾಗಿ ಕ್ಯಾರಾವ್ಯಾನ್ ಬಳಸುತ್ತಾರೆ. ಆದರೆ ಮಲಯಾಳಂನಲ್ಲಿ ಕ್ಯಾರಾವ್ಯಾನ್ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದವರು ನಟಿ ಊರ್ವಶಿ. ಅದೂ 1990ರ ದಶಕದಲ್ಲಿ ಮಾಲಿವುಡ್​ನಲ್ಲಿ ಕ್ಯಾರಾವ್ಯಾನ್ ಪರಿಚಯವಾಗಿದೆ.

    MORE
    GALLERIES

  • 410

    Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

    ಊರ್ವಶಿ ಹೆಚ್ಚಾಗಿ ದೂರದ ಊರುಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಆ ಸಮಯದಲ್ಲಿ ತಮಿಳು ಚಿತ್ರರಂಗದ ಗೆಳೆಯರೊಬ್ಬರು ನಟಿಗೆ ಕ್ಯಾರಾವ್ಯಾನ್ ಪರಿಕಲ್ಪನೆಯನ್ನು ಪರಿಚಯಿಸಿದ್ದರಂತೆ. ಸಿನಿಮಾ ಹಾಗೂ ಫ್ಯಾಮಿಲಿ ಜೊತೆ ಓಡಾಡಲು ಕ್ಯಾರಾವ್ಯಾನ್ ಖರೀದಿಸಲು ನಟಿ ಮುಂದಾಗಿದ್ದಾರೆ.

    MORE
    GALLERIES

  • 510

    Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

    ಆ ಕಾಲದಲ್ಲಿ ಉನ್ನತ ರಾಜಕಾರಣಿಗಳು ಮತ್ತು ಇತರರಿಗೆ ಮಾತ್ರ ಈ ಸೌಲಭ್ಯವಿತ್ತು. ಅಂದು ಇದನ್ನು ತಯಾರಿಸಲು ಕೊಯಮತ್ತೂರಿಗೆ ಹೋಗ್ಬೇಕಿತ್ತು ಎಂದು ನಟಿ ಊರ್ವಶಿ ಹೇಳಿದ್ದಾರೆ.

    MORE
    GALLERIES

  • 610

    Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತಾಡಿದ ಊರ್ವಶಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕ್ಯಾರಾವ್ಯಾನ್ ಖರೀದಿಸುವ ಉದ್ದೇಶದಿಂದ ಟೆಂಪೋ ಟ್ರಾವೆಲರ್ ಖರೀದಿಸಿ ಕೊಯಮತ್ತೂರಿಗೆ ಕೊಟ್ಟು ಕ್ಯಾರವಾನ್ ಮಾಡೆಲ್ ಮಾಡಿಸಿದ್ದಾಗಿ ಹೇಳಿದ್ದಾರೆ.

    MORE
    GALLERIES

  • 710

    Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

    ಈ ಕ್ಯಾರಾವ್ಯಾನ್ ಕೆಲಸಕ್ಕಾಗಿ ಮಾತ್ರವಲ್ಲದೆ ಕುಟುಂಬ ಪ್ರವಾಸಕ್ಕೂ ಅನುಕೂಲಕರವಾಗಿತ್ತು ಎಂದು ನಟಿ ಊರ್ವಶಿ ಹೇಳಿದ್ದಾರೆ. 90ರ ದಶಕದಲ್ಲಿ ಇಂದಿನಂತೆ ಐಷಾರಾಮಿ ವಾಹನ ಇರಲಿಲ್ಲ. ರೈಲಿನಲ್ಲಿ ಹೆಚ್ಚಾಗಿ ಓಡಾಡಬೇಕಿತ್ತು. ಹೀಗಾಗಿ ಕ್ಯಾರಾವ್ಯಾನ್ ಖರೀದಿಸಿದೆ ಎಂದ್ರು.

    MORE
    GALLERIES

  • 810

    Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

    ಮಕ್ಕಳನ್ನು ಕರೆದೊಯ್ಯುವ ಪ್ರವಾಸಗಳಲ್ಲಿ ಕ್ಯಾರಾವ್ಯಾನ್ ಹೆಚ್ಚು ಅನುಕೂಲಕರವಾಗಿದೆ. ಚಾಲಕನ ಸೀಟ್ ಹೊರತುಪಡಿಸಿ ಟೆಂಪೋ ಟ್ರಾವೆಲರ್ ಎಲ್ಲಾ ಭಾಗಗಳನ್ನು ಕ್ಯಾರಾವ್ಯಾನ್ ಸೌಲಭ್ಯಕ್ಕೆ ತಕ್ಕಂತೆ ಬದಲಾಯಿಸಲಾಗಿತ್ತು. ಶೌಚಾಲಯವು ಅಲ್ಲೇ ಇತ್ತು ಬಳಿಕ ಕೆಲ ಅನಾನುಕೂಲತೆಯಿಂದಾಗಿ ಅದನ್ನು ತೆಗೆದುಹಾಕಲಾಯಿತು.

    MORE
    GALLERIES

  • 910

    Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

    ಆಗ ಈ ವಾಹನ ನಿಲುಗಡೆಗೆ ಸಮಸ್ಯೆ ಕೂಡ ಆಗಿತ್ತು. ಈ ಕಾರು ಚೆನ್ನೈನ ಮನೆಯ ಕಾಂಪೌಂಡ್ನಲ್ಲಿ ನಿಲ್ಲಿಸಲು ತುಂಬಾ ದೊಡ್ಡದಾಗಿತ್ತು. ಫ್ಲಾಟ್​ಗೆ ಹೋಗುವಾಗ ಎರಡು ಕಾರ್ ಪಾರ್ಕಿಂಗ್ ಸ್ಥಳದ ಹೊರಗೆ ಕ್ಯಾರಾವ್ಯಾನ್ ನಿಲ್ಲಿಸೋದೆ ಕಷ್ಟಕರವಾಗಿತ್ತು ಎಂದು ನಟಿ ಹೇಳಿದ್ರು.

    MORE
    GALLERIES

  • 1010

    Urvashi: ಟೆಂಪೋ ಖರೀದಿಸಿ ಕ್ಯಾರಾವ್ಯಾನ್ ಮಾಡಿದ ನಟಿ ಊರ್ವಶಿ, ಹೇಗಿತ್ತು ಈ ವ್ಯಾನ್?

    ತಮಿಳು ಚಿತ್ರರಂಗದ ಚಾಲಕರೊಬ್ಬರು ಕ್ಯಾರಾವ್ಯಾನ್ ಕೊಂಡುಕೊಳ್ಳುವುದಾಗಿ ಕೇಳಿದ್ರು. ಊರ್ವಶಿ ಖುಷಿಯಿಂದ ಈ ಕ್ಯಾರಾವ್ಯಾನ್ ನೀಡಿದ್ದಾರೆ. ಕುಟುಂಬ ಸಮೇತ ದೂರ ಪ್ರವಾಸಕ್ಕೆ ಹೋಗುವಾಗ ವಾಹನ ಬಳಸಬೇಕೆಂಬುದು ಅವರ ಆಸೆಯಾಗಿತ್ತು.

    MORE
    GALLERIES