ನಟ ಸುಶಾಂತ್ ಮಾನಸಿಕ ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸುಶಾಂತ್ ತಮ್ಮ ಆತ್ಮಹತ್ಯೆಗೂ ಕೆಲ ದಿನಗಳ ಮುನ್ನ ಈ ನೋಟ್ ಬರೆದಿದ್ದರಂತೆ. ಸುಶಾಂತ್ ತಮ್ಮ ಭವಿಷ್ಯ ಹೇಗಿರಬೇಕು, ಏನೆಲ್ಲ ಮಾಡಬೇಕು ಎಂದು ಪಟ್ಟಿ ಮಾಡಿಕೊಂಡಿದ್ದರು. ಚಾಪಿಂಯನ್ ಜೊತೆ ಟೆನ್ನಿಸ್, ಚೆಸ್ ಆಡಬೇಕು, ಹಕ್ಕಿಯಂತೆ ಹಾರಬೇಕು ಎಂದುಕೊಂಡಿದ್ದರಂತೆ. ವಿಯನ್ನಾದಲ್ಲಿನ ಸ್ಟೀಫನ್ಸ್ ಕ್ಯಾತೆಡ್ರೆಲ್ಗೆ ಭೇಟಿ ನೀಡಬೇಕು, ಸೇನೆಗೆ ಸೇರುವ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡಬೇಕು ಎಂದೆಲ್ಲ ಕನಸು ಕಂಡಿದ್ದರು. ಅಂಟಾರ್ಟಿಕಾಗೆ ಪ್ರಯಾಣಿಸುವುದು, ಕ್ರಿಯಾ ಯೋಗ ಕಲಿಯುವುದು ಹಾಗೂ ಲೊಂಬಾರ್ಗಿನಿ ಕಾರನ್ನು ಕೊಳ್ಳುವುದು ಸುಶಾಂತ್ ಅವರ ಆಸೆಯಾಗಿತ್ತು. ತಾವು ಬರೆದಿರುವ ನೋಟ್ನಲ್ಲಿರುವ ವಿಷಯಗಳ ಆಧಾರದ ಮೇಲೆ ತಮ್ಮ ಜೀವನವನ್ನು ನಡೆಸಬೇಕೆಂದು ಕನಸು ಕಂಡಿದ್ದ ಸುಶಾಂತ್ ಕಡೆಗೆ ಜೀವನಕ್ಕೇ ವಿದಾಯ ಹೇಳಿದ್ದಾರೆ.