ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 125ನೇ ಸಿನಿಮಾ ವೇದ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್ ಕೇಳಿ ಬರ್ತಿದೆ. ಈ ನಡುವೆ ಶಿವಣ್ಣ ಟಾಲಿವುಡ್ ಸಿನಿಮಾದಲ್ಲಿ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಹೊರಬಿದ್ದಿದೆ.
ಕಾಲಿವುಡ್ಗೆ ಎಂಟ್ರಿ ಕೊಟ್ಟಿರುವ ಶಿವಣ್ಣ ಈಗ ಟಾಲಿವುಡ್ ನಲ್ಲೂ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ವೇದ ಸಿನಿ ಪ್ರಮೋಷನ್ ವೇಳೆ ತಾವು ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಶಿವಣ್ಣ ಹೇಳಿದ್ದಾರೆ.
2/ 8
ಸಂದರ್ಶದಲ್ಲಿ ಟಾಲಿವುಡ್ ಪ್ರವೇಶದ ಬಗ್ಗೆ ಮಾತಾಡಿದ ಅವರು, ನನಗೆ ಒದಗಿ ಬರುತ್ತಿರುವ ಅವಕಾಶಗಳ ಸದುಪಯೋಗ ಪಡೆದು ಕೊಳ್ಳುತ್ತಿದ್ದೇನೆ ಎಂದು ಹೇಳಿದ್ರು.
3/ 8
ರಜಿನಿಕಾಂತ್ ಅವರ ಜೈಲರ್ ಸಿನಿಮಾದಲ್ಲಿ ವಿಶೇಷ ಪಾತ್ರವನ್ನು ನಿಭಾಯಿಸುವ ಮೂಲಕ ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡುತ್ತಿದ್ದೇನೆ.
4/ 8
ಅಷ್ಟೇ ಅಲ್ಲ, ಧನುಷ್ ನಟನೆಯ ʼಕ್ಯಾಪ್ಟನ್ ಮಿಲ್ಲರ್ʼ ಚಿತ್ರದಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದೇನೆ. ಧನುಷ್ ಅವರನ್ನು ಆರಂಭದಿಂದಲೂ ಬಲ್ಲೆ. ಧನುಷ್ ನನ್ನ ಇಷ್ಟದ ನಟ ಎಂದ್ರು.
5/ 8
ಧನುಷ್ ಜೊತೆಗೆ ನಟಿಸುತ್ತಿರುವುದು ಖುಷಿ ತಂದಿದೆ. ನಾನು ಧನುಷ್ ಸಿನಿಮಾದಲ್ಲಿ ನಟಿಸುತ್ತೇನೆ ಎಂದ ಕೂಡಲೇ ಅವರು ನಮ್ಮ ವಜ್ರಕಾಯ ಸಿನಿಮಾಗೆ ಹಾಡು ಹಾಡಿದ್ದಕ್ಕೆ ಪ್ರತಿಯಾಗಿ ನಾನು ನಟಿಸಲು ಒಪ್ಪಿಕೊಂಡೆ ಎಂದ್ರು.
6/ 8
ಧನುಷ್ ಆ ರೀತಿ ಯಾವತ್ತಿಗೂ ನನ್ನನ್ನು ಕೇಳಿಲ್ಲ. ಸಿನಿಮಾದಲ್ಲಿನ ನಾಯಕನ ಅಣ್ಣನ ಪಾತ್ರವನ್ನು ನಾನೇ ಮಾಡಿದರೆ ಚೆನ್ನಾಗಿರುತ್ತದೆ ಎಂದ್ರು ಹೀಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದು ಶಿವಣ್ಣ ಹೇಳಿದ್ದಾರೆ.
7/ 8
ತಮಿಳಿನ ಜೊತೆಗೆ ತೆಲುಗಿನಲ್ಲೂ ನಟಿಸುತ್ತಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ. ಆ ಚಿತ್ರದಲ್ಲಿ ನಾನೇ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಕಾಣಸಿಕೊಳ್ಳುತ್ತಿದ್ದೇನೆ.
8/ 8
ಚಿತ್ರದಲ್ಲಿ ಟಾಲಿವುಡ್ನ ಯುವ ನಟರೊಬ್ಬರು ನನ್ನ ತಮ್ಮನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ತಮ್ಮ ಮುಂದಿನ ಚಿತ್ರಗಳ ಬಗ್ಗೆ ಶಿವಣ್ಣ ಹೇಳಿದ್ದಾರೆ.