ಕನ್ನಡ ಚಿತ್ರರಂಗದ ಅಭಿನಯ ಚತುರ ಸತೀಶ್ ನೀನಾಸಂ ಅವರಿಗೆ ನಿನ್ನೆ ರಾತ್ರಿಯಿಂದಲೇ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿತ್ತು.
2/ 7
ಇದನ್ನು ನೋಡಿದ ನಟನಿಗೂ ಒಂದು ಡೌಟ್. ಅದೇನೆಂದರೆ ಇಂದು ಜೂನ್ ಇಪ್ಪತ್ತಾ? ಏಕೆಂದರೆ ನೀನಾಸಂ ಸತೀಶ್ ಅವರು ಹುಟ್ಟಿದ್ದು ಜೂನ್ 20 ರಂದು. ಆದರೆ ಯಾರೋ ಮಾಡಿದ ಎಡವಟ್ಟಿನಿಂದಾಗಿ ಇಂದು ಶುಭಾಶಯಗಳು ಹರಿದು ಬಂದಿತ್ತು.
3/ 7
ಈ ಬಗ್ಗೆ ಖುದ್ದು ಸತೀಶ್ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಜೂನ್ 20 ನನ್ನ ಹುಟ್ಟುಹಬ್ಬ, ಇಂದಲ್ಲ. ಬುಕ್ಮೈ ಶೋನಲ್ಲಿ ತಪ್ಪಾಗಿ ತೋರಿಸುತ್ತಿದೆ, ಕ್ಷಮೆ ಇರಲಿ ಮುಂಚಿತವಾಗಿ ಶುಭಾಶಯ ಕೋರಿದ ತಮಗೆಲ್ಲ ಧನ್ಯವಾದಗಳು ಎಂದು ತಿಳಿಸಿದ್ದಾರೆ.
4/ 7
ಈ ಟ್ವೀಟ್ ಕಾಣಿಸುತ್ತಿದ್ದಂತೆ ನಿರ್ದೇಶಕ/ನಿರ್ಮಾಪಕ ಬಿ ಸುರೇಶ್ ಅವರು ಅಭಿನಯ ಚತುರನ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಕಲಾವಿದ ಅಂದ್ಮ್ಯಾಲೆ ಪ್ರತಿದಿನ ಉಟ್ದಬ್ಬ ಮಾಡ್ಕಂಬೇಕು ಕಣಪ್ಪೋ...! ಪ್ರತೀ ಪಾತ್ರುಕ್ ಬಣ್ಣ ಆಕ್ಕಣದೆ ಉಟ್ದಬ್ಬ...! ಇವತ್ಗೊಂದು ಕೇಕು, ಇಪ್ಪತ್ತಕ್ಕೊಂದ್ ಕೇಕು...! ಹಬ್ಬ ಮಾಡ್ತಾ ಇರ್ಬೇಕು...! ಎಂದಿದ್ದಾರೆ.
5/ 7
ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ನೀನಾಸಂ ಸತೀಶ್ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದರ ನಡುವ 19 ದಿನಗಳ ಬರ್ತ್ಡೇ ಸರ್ಪ್ರೈಸ್ ಕೂಡ ಸಿಕ್ಕಂತಾಗಿದೆ.
6/ 7
ಇನ್ನು ಸತೀಶ್ ಅಭಿನಯದ ಬಹುನಿರೀಕ್ಷಿತ ಗೋದ್ರಾ ಸಿನಿಮಾ ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಇದಲ್ಲದೆ ಒಂದು ತಮಿಳು ಚಿತ್ರ, ಪರಿಮಳ ಲಾಡ್ಜ್, ಮೈ ನೇಮ್ ಇಸ್ ಸಿದ್ದೇಗೌಡ ಸಿನಿಮಾಗಳು ಅಭಿನಯ ಚತುರನ ಕೈಯಲ್ಲಿದೆ.
7/ 7
ಒಟ್ಟಿನಲ್ಲಿ ಲಾಕ್ಡೌನ್ ಮುಗಿಯುತ್ತಿದ್ದಂತೆ ನೀನಾಸಂ ಸತೀಶ್ ಫುಲ್ ಬ್ಯುಸಿಯಾಗಲಿರುವುದಂತು ಸತ್ಯ. ಅದರೊಂದಿಗೆ ಅವರೇ ಮೈ ನೇಮ್ ಇಸ್ ಸಿದ್ದೇಗೌಡ ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.