'ಆಪರೇಷನ್ ಅಲುಮೇಲಮ್ಮ' ಹಾಗೂ 'ಕವಲುದಾರಿ' ಚಿತ್ರಗಳ ಖ್ಯಾತಿಯ ನಟ ರಿಷಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ ಮುಂದಿನ ತಿಂಗಳು ನವೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ರಿಷಿ ತಮ್ಮ ಬಹುಕಾಲದ ಗೆಳತಿ ಸ್ವಾತಿ ಜೊತೆ ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಚೆನ್ನೈಯಲ್ಲಿ ನಡೆಯಲಿರುವ ವಿವಾಹ ಕಾರ್ಯಕ್ರಮದ ಮೂಲಕ ಯುವ ಜೋಡಿ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಮದುವೆ ಸಮಾರಂಭದಲ್ಲಿ ಕುಟುಂಬದವರಿಗೆ ಮತ್ತು ಆಪ್ತರಿಗೆ ಆಹ್ವಾನ ನೀಡಲಾಗಿದ್ದು, ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಲು ಸ್ಯಾಂಡಲ್ವುಡ್ ನಟ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ಬರಹಗಾರ್ತಿಯಾಗಿರುವ ಸ್ವಾತಿ ಹಾಗೂ ರಿಷಿ ಬಹಳ ವರ್ಷಗಳ ಗೆಳೆಯರಾಗಿದ್ದರು. ಈ ಗೆಳೆತನ ಮುಂದೆ ಪ್ರೀತಿಗೆ ತಿರುಗಿ ಇದೀಗ ಮದುವೆ ಸಂಭ್ರಮಕ್ಕೆ ಬಂದು ನಿಂತಿದೆ. ಸದ್ಯ 'ರಾಮನ ಅವತಾರ', 'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರಗಳಲ್ಲಿ ನಿರತರಾಗಿರುವ ರಿಷಿ ಸ್ಯಾಂಡಲ್ವುಡ್ನಲ್ಲಿ ಭರವಸೆ ಮೂಡಿಸಿರುವ ಯುವ ನಟರಲ್ಲಿ ಒಬ್ಬರು. ಸ್ವಾತಿ ಸ್ವಾತಿ ರಿಷಿ- ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ- ರಿಷಿ ರಿಷಿ- ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ಸ್ವಾತಿ ರಿಷಿ- ಸ್ವಾತಿ ಸ್ವಾತಿ ಸ್ವಾತಿ ರಿಷಿ ರಿಷಿ - ಸ್ವಾತಿ ರಿಷಿ- ಸ್ವಾತಿ ( ALL PC : Swathi Insta)