ಸೋಮವಾರ ನಡೆದ ದಾದಾಸಾಹೇಬ್ ಫಾಲ್ಕೆ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2023 ರಲ್ಲಿ ಕಾಂತಾರ ನಟ ರಿಷಬ್ ಶೆಟ್ಟಿ ಅತ್ಯಂತ ಭರವಸೆಯ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ.
2/ 8
ಫೆ.20ರಂದು ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರಿಷಬ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
3/ 8
ರೆಡ್ ಕಾರ್ಪೆಟ್ ಮೇಲೆ ವಿನಮ್ರವಾಗಿ ಪ್ರಶಸ್ತಿಯೊಂದಿಗೆ ಪೋಸ್ ನೀಡುತ್ತಿರುವಾಗ, ಕಪ್ಪು ಅಂಗಿ ಮತ್ತು ಬಿಳಿ ಪಂಚೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ನಮ್ಮ ಸಂಸ್ಕೃತಿಯನ್ನು ಎಲ್ಲ ಕಡೆಗಳಲ್ಲಿ ಪಸರಿಸುತ್ತಿದ್ದಾರೆ ಎಂದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
4/ 8
ಕಾಂತಾರ ನಟ ರಿಷಬ್ ಶೆಟ್ಟಿ ತಮ್ಮ ಗೆಲುವನ್ನು ಕನ್ನಡದ ನಟ ಪುನೀತ್ ರಾಜ್‍ಕುಮಾರ್ ಮತ್ತು ನಿರ್ದೇಶಕ ಎಸ್‍ಕೆ ಭಗವಾನ್ ಅವರಿಗೆ ಅರ್ಪಿಸಿದ್ದಾರೆ.
5/ 8
ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದ ಹೊಂಬಾಳೆ ಫಿಲಂಸ್ ಮತ್ತು ವಿಜಯ್ ಕಿರಂಗಂದೂರು ಅವರಿಗೆ ನಾನು ಆಭಾರಿಯಾಗಿದ್ದೇನೆ. ಒಟ್ಟಿಗೆ ಸೇರಿಕೊಂಡು ಹೆಚ್ಚು ಉತ್ತಮ ಚಿತ್ರಗಳನ್ನು ಮಾಡಬೇಕು ಎಂದು ರಿಷಬ್ ಅವರು ಹೇಳಿದ್ದಾರೆ.
6/ 8
ಕಾಂತಾರದ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಅಲ್ಲದೇ ನನ್ನ ಜೀವನದ ಪಿಲ್ಲರ್ ನನ್ನ ಪತ್ನಿ ಪ್ರಗತಿ ಶೆಟ್ಟಿಗೆ ನಾನು ಸದಾ ಅಭಾರಿಯಾಗಿರುತ್ತೇನೆ. ನನ್ನ ಎಲ್ಲಾ ಕನಸುಗಳ ಜೊತೆ ಅವರು ಇರುತ್ತಾರೆ ಎಂದಿದ್ದಾರೆ.
7/ 8
ಯಾರು ನನ್ನ ಸಿನಿಮಾ ನೋಡಿ ಬೆಂಬಲಿಸಿದ್ದೀರೋ ಅವರೆಲ್ಲರಿಗೂ ನಾನು ತುಂಬು ಹೃದಯದಿಂದ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
8/ 8
ರಿಷಬ್ ಶೆಟ್ಟಿ ಅವರು ಪಂಚೆ ಉಟ್ಟು ಪ್ರಶಸ್ತಿ ಸ್ವೀಕರಿಸಿದ್ದು ಜನರಿಗೆ ತುಂಬಾ ಇಷ್ಟ ಆಗಿದೆ. ಆ ಫೋಟೋಗಳು ಎಲ್ಲೆಡೆ ವೈರಲ್ ಆಗ್ತಾ ಇವೆ.