ಇದೀಗ ಕಾಂತಾರ ಸೂಪರ್ ಹಿಟ್ ಆಗುತ್ತಿದ್ದಂತೆ, ಕಾಂತಾರ 2 ಸಿನಿಮಾ ಬಗ್ಗೆ ನಿರ್ಮಾಪಕ ವಿಜಯ್ ಕಿರಂಗದೂರು ಸುಳಿವು ನೀಡಿದ್ರು. ಇದೀಗ ಸ್ವತಃ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರೇ ಕಾಂತಾರ 2 ಸಿನಿಮಾ ಬಗ್ಗೆ ಅನೌನ್ಸ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ರಿಸೆಪ್ಷನ್ಗೆ ಆಗಮಿಸಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ನವಜೋಡಿ ಶುಭಕೋರಿದ್ರು, ಬಳಿಕ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಬಗ್ಗೆ ಮಾತಾಡಿದ್ದಾರೆ.
2/ 8
ಕಾಂತಾರ 2 ಸಿನಿಮಾ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ನಟ ರಿಷಬ್ ಶೆಟ್ಟಿ ಮಾಧ್ಯಮಗಳ ಕೈಗೆ ಸಿಕ್ಕಿರಲಿಲ್ಲ. ಸಿಂಹ-ಪ್ರಿಯಾ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದಿದ್ದ ರಿಷಬ್ ಶೆಟ್ಟಿಗೆ ಮಾಧ್ಯಮದವರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
3/ 8
ಕಾಂತಾರ 2 ಸಿನಿಮಾ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ ಕಾಂತಾರ 2 ಅಥವಾ ಹೊಸ ಪ್ರಾಜೆಕ್ಟ್ ಬಗ್ಗೆ ಶೀಘ್ರವೇ ಘೋಷಣೆ ಮಾಡೋದಾಗಿ ಹೇಳಿದ್ದಾರೆ.
4/ 8
ಅಷ್ಟೇ ಅಲ್ಲದೇ ಯಾವುದೇ ಸಿನಿಮಾ ಪ್ರೊಡಕ್ಷನ್ ಕೆಲಸ ಕೂಡ ನಾವು ಇನ್ನೂ ಶುರು ಮಾಡಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
5/ 8
ಕಾಂತಾರ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ರಿಷಬ್ ಶೆಟ್ಟಿ ಕಾಲ ಕಳೆಯುತ್ತಿದ್ದು, ಶೀಘ್ರವೇ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ.
6/ 8
ಇತ್ತೀಚಿಗಷ್ಟೇ ರಿಷಬ್ ಶೆಟ್ಟಿ ಅವರು ದೈವದ ಹರಕೆ ತೀರಿಸಿದ್ದಾರೆ. ಆ ಹರಕೆ ತೀರಿಸೋ ಸಮಯದಲ್ಲಿ ಇಡೀ ಕಾಂತಾರ ಟೀಮ್ ಹಾಜರಿತ್ತು.
7/ 8
ಈ ಹಿಂದೆ ನಿರ್ಮಾಪಕ ವಿಜಯ್ ಕಿರಗಂದೂರು ಸಹ ಕಾಂತಾರ 2 ಪ್ರಾಜೆಕ್ಟ್ ಬಗ್ಗೆಯೂ ಚಿಂತನೆ ನಡೆಸಿರೋದಾಗಿ ಹೇಳಿದ್ದರು.
8/ 8
ಇಂಡಿಯಾ ಟುಡೆ ಜೊತೆಗೆ ಸಂದರ್ಶನದಲ್ಲಿ ಮಾತಾಡಿದ ವಿಜಯ್ ಕಿರಗಂದೂರು, ಕಾಂತಾರ ಸೀಕ್ವೆಲ್ ಮಾಡುವ ಬಗ್ಗೆ ಪ್ಲಾನ್ ಮಾಡಿರೋದಾಗಿ ಹೇಳಿದ್ದಾರೆ. ನಾವು ಬೇರೆ ಪ್ಲಾನ್ ಮಾಡಿದ್ದೇವೆ. ರಿಷಬ್ ಶೆಟ್ಟಿ ಬ್ರೇಕ್ ತೆಗೆದುಕೊಂಡಿದ್ದಾರೆ. ರಿಷಬ್ ವಿರಾಮದ ನಂತ್ರ ಮತ್ತೆ ತೀರ್ಮಾನ ತೆಗೆದುಕೊಳ್ತೀವಿ ಎಂದು ಹೇಳಿದ್ದರು.