ಸ್ಯಾಂಡಲ್‍ವುಡ್ ಮರೆಯಾದ ಮಾಣಿಕ್ಯ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತಿದೆ.
2/ 8
ಪುನೀತ್ ಅವರ ಸಮಾಧಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ದಿನವಿಡಿ ಅಪ್ಪು ಉತ್ಸವ ನಡೆಯಲಿದೆ.
3/ 8
ಅಪ್ಪು ಸಮಾಧಿಗೆ ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್‍ಕುಮಾರ್, ಯುವ ರಾಜ್‍ಕುಮಾರ್ ಹಾಗೂ ಪುನೀತ್ ದ್ವಿತೀಯ ಪುತ್ರಿ ವಂದಿತಾ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
4/ 8
ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿ, 'ಅಪ್ಪು ನಮಗಿನ್ನು ಮಗುನೇ. ಇವತ್ತು ಬಂದಿರೋ ಅಭಿಮಾನಿಗಳು ಅವನು ಇನ್ನು ಬದುಕಿದ್ದಾನೆ ಅನ್ನೋದನ್ನ ತೋರಿಸುತ್ತೆ. ಜನ ಇನ್ನು ಅಪ್ಪುನ ಜೀವಂತವಾಗಿಟ್ಟುಕೊಂಡಿದ್ದಾರೆ. ಇನ್ನು ಜನ ಬೆಳೆಸಿ ಆಟ ಆಡಿಸ್ತಿದ್ದಾರೆ'. ಎಂದು ಹೇಳಿದ್ದಾರೆ.
5/ 8
'ಜನರ ಪ್ರೀತಿ ವಿಶ್ವಾಸಕ್ಕೆ ಏನು ಹೇಳಲಾರೆ. ಸಾಷ್ಟಾಂಗ ನಮಸ್ಕಾರ ಹಾಕೋದೊಂದು ಬಿಟ್ರೆ ಇನ್ನೇನು ಹೇಳಲಾರೆ. ಅಪ್ಪು ಆದರ್ಶಗಳನ್ನ ಜೊತೆಯಲ್ಲಿ ಮುನ್ನಡೆಸಿಕೊಂಡು ಸಾಗೋಣ' ಎಂದು ರಾಘವೇಂದ್ರ ರಾಜ್‍ಕುಮಾರ್ ಅವರು ಹೇಳಿದ್ದಾರೆ.
6/ 8
ಕಂಠೀರವ ಸ್ಟುಡಿಯೋದಲ್ಲಿ 17-03-2023ನೇ ಶುಕ್ರವಾರ ಬೆಳಗ್ಗೆ 10 ರಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದೆ. ಹಾಗೂ ಸಂಜೆ 6 ಕ್ಕೆ ಅಪ್ಪು ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.
7/ 8
ಅಲ್ಲದೇ ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ, ಇವತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ವಿವಿಧೆಡೆ ಅಪ್ಪು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
8/ 8
ಸಾವನ್ನಪ್ಪಿದ್ರೂ ಅಭಿಮಾನಿಗಳ ಹೃದಯಲ್ಲಿ ಪುನೀತ್ ಜೀವಂತವಾಗಿದ್ದಾರೆ. ರಾಜ್ಯದ ಎಲ್ಲೆಡೆ ಅಪ್ಪು ಸ್ಮರಣೆ ನಡೆದಿದೆ. ಎಲ್ಲರೂ ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಎನ್ನುತ್ತಿದ್ದಾರೆ.