ಕೊರೋನಾ ಮಹಾಮಾರಿಯನ್ನು ತಡೆಯಲು ಸರ್ಕಾರ ಲಾಕ್ಡೌನ್ ಘೋಷಿಸಿದೆ. ಏಕಾಏಕಿ ಕರ್ಫ್ಯೂನಿಂದಾಗಿ ಬಡ ಮತ್ತು ನಿರ್ಗತಿಕರು ಸಂಕಷ್ಟಕ್ಕೀಡಾಗಿದ್ದಅರೆ. ಕೆಲವು ಸಿನಿಮಾ ನಟರು ತಮ್ಮಿಂದಾದ ಸಹಾಯ ಮಾಡಿದ್ದಾರೆ.
2/ 12
ಹಾಗೆಯೇ ಒಂದಷ್ಟು ಸಾಮಾಜಿಕ ಕಾರ್ಯಕರ್ತರು, ನಟರುಗಳ ಅಭಿಮಾನಿಗಳು ಅನ್ನದಾನ, ದಿನಸಿ ಪದಾರ್ಥಗಳ ಮೂಲಕ ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ದಾರೆ.
3/ 12
ಇದರ ನಡುವೆ ನಟ, ನಿರ್ದೇಶಕ, ಬಿಗ್ ಬಾಸ್ ವಿನ್ನರ್ ಪ್ರಥಮ್ ಕೂಡ ತಮ್ಮದೇ ರೀತಿಯಲ್ಲಿ ಸಹಾಯಹಸ್ತ ಚಾಚಿದ್ದಾರೆ. ತನ್ನಿಂದ ಏನೆಲ್ಲಾ ಸಾಧ್ಯವೋ ಅಷ್ಟೂ ಕೆಲಸ ಮಾಡಿ ಸಂಕಷ್ಟದ ಸಮಯದಲ್ಲಿ ಯುವ ನಟ ಸ್ಪಂದಿಸಿದ್ದಾರೆ.
4/ 12
ಅದರಲ್ಲೂ ಸಿನಿಮಾ ಪೋಸ್ಟರ್ ವಿನ್ಯಾಸ ಕಲಾವಿದರ ಕುಟುಂಬಗಳನ್ನು ಭೇಟಿ ಮಾಡಿ ಈ ಕ್ಷಣಕ್ಕೆ ಬೇಕಿರುವ ಅಗತ್ಯ ವಸ್ತುಗಳನ್ನೆಲ್ಲಾ ನೀಡಿ ಸಹಕರಿಸಿದ್ದಾರೆ ಒಳ್ಳೆ ಹುಡುಗ ಪ್ರಥಮ್.
5/ 12
ಅಷ್ಟೇ ಅಲ್ಲದೆ ತನ್ನ ಬಳಿ ಹಣವಿಲ್ಲವೆಂದು ಸುಮ್ಮನೆ ಕೈ ಕಟ್ಟಿ ಕೂರಲಿಲ್ಲ ನಟ ಭಯಂಕರ. ಇದಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಯಾರೆಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರೋ ಅವರಿಂದಲೇ ಪಡೆದು ಹಂಚುವ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ.
6/ 12
ಹಾಗೆಯೇ ಯುವ ರಾಜಕಾರಣಿ ಪ್ರಿಯಾ ಕೃಷ್ಣರೊಂದಿಗೆ ಪ್ರಥಮ್ಗೆ ಉತ್ತಮ ವಿಶ್ವಾಸ ಮತ್ತು ಆಪ್ತತೆ ಹೊಂದಿದ್ದಾರೆ. ಮೊನ್ನೆಯಷ್ಟೇ ಅವರ ಹುಟ್ಟುಹಬ್ಬವೂ ಜರುಗಿತ್ತು. ಇದೇ ಹೊತ್ತಿಗೆ ಅವರಿಗೆ ಶುಭಾಶಯ ತಿಳಿಸಿ ಒಂದಿಷ್ಟು ಜನರಿಗೆ ಸಹಾಯವಾಗಬೇಕು ಅಂತ ವಿನಂತಿಸಿದ್ದರು.
7/ 12
ಪ್ರಥಮ್ ಮನವಿಗೆ ತಕ್ಷಣವೇ ಸ್ಪಂದಿಸಿದ ಪ್ರಿಯಾ ಕೃಷ್ಣ ಅತ್ಯುತ್ತಮ ನೂರು ಪಡಿತರ ಕಿಟ್ ನೀಡಿದ್ದಾರೆ. ಪ್ರಥಮ್ ಹೇಳಿದ ಕಾರಣಕ್ಕೆ ತೀರ ಅಗತ್ಯವಿರುವವರಿಗೆ 25 ಸಾವಿರ ಮೌಲ್ಯದ ಚೆಕ್ ಕೊಟ್ಟಿದ್ದಾರೆ ಯುವ ನಾಯಕ. ಆದರೆ ಇದು ಅವರ ಕ್ಷೇತ್ರಕ್ಕಲ್ಲ ಎಂಬುದು ಇಲ್ಲಿ ವಿಶೇಷ.
8/ 12
ಒಟ್ಟಿನಲ್ಲಿ ನೇಮು ಮತ್ತು ಫೇಮು ಅನ್ನು ಸಿನಿಮಾಗಷ್ಟೇ ಸೀಮಿತವನ್ನಾಗಿಸಿರುವ ಕೆಲ ನಟ-ನಟಿರುಗಳ ಮಧ್ಯೆ ಅದನ್ನೇ ಬಂಡವಾಳವನ್ನಾಗಿಸಿ ಕಷ್ಟಕಾಲಕ್ಕೆ ಒಬ್ಬರಿಗೊಬ್ಬರು ಹೇಗೆ ನೆರವಾಗಬಹುದು ಎಂಬುದನ್ನು ಒಳ್ಳೆ ಹುಡುಗ ಪ್ರಥಮ್ ತೋರಿಸಿಕೊಟ್ಟಿದ್ದಾರೆ.