ನಟ ಪ್ರಥಮ್ ತಮ್ಮ ಬಿರುದಿನಂತೆ ಒಳ್ಳೆ ಹುಡುಗ ಎಂಬುದನ್ನು ಅನೇಕ ಬಾರಿ ನಿರೂಪಿಸಿದ್ದಾರೆ. ಅದರಲ್ಲೂ ಲಾಕ್ಡೌನ್ ಸಮಯದಲ್ಲಿ ತಮ್ಮ ತಂಡ ಕಟ್ಟಿಕೊಂಡು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದವರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ದರು.
2/ 9
ಇದೀಗ ಮತ್ತೊಮ್ಮೆ ಒಳ್ಳೆ ಹುಡುಗನ ರೇಷನ್ ಕಿಟ್ ಮೂಲಕ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಬಡವರಿಗೆ ನೆರವಾಗಲು ಕಾರಣ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಭೂಮಿ ಪೂಜೆ ನೆರವೇರಿರುವುದು.
3/ 9
ಹೌದು, ಮಂಡ್ಯ ಸಮೀಪದ ಪುಟ್ಟ ಹಳ್ಳಿಯ ತೀರ ಬಡಜನರಿಗೆ ಅತುತ್ತಮ ಗುಣಮಟ್ಟದ ಕನಿಷ್ಟ 19 ವಸ್ತುಗಳಿರುವ ರೇಷನ್ ಕಿಟ್ (Box) ಪ್ರಥಮ್ ತಲುಪಿಸಿದ್ದಾರೆ. ಹಾಗೆಯೇ ಮಧ್ಯಮ ವರ್ಗದವರಿಗೆ 6 ವಸ್ತುಗಳಿರುವ ಮತ್ತೊಂದು ಕಿಟ್ಗಳನ್ನು ವಿತರಿಸಿದ್ದಾರೆ.
4/ 9
ಈ ಮೂಲಕ ಯಾವ ಜಾತಿಯವರಾಗಲೀ ಬಡವರಿಗೆ ತಲುಪಿಸುವ ಕೆಲಸವನ್ನು ಶ್ರೀರಾಮನ ಹೆಸರಲ್ಲಿ ಒಳ್ಳೆ ಹುಡುಗ ಪ್ರಥಮ್ ಮಾಡಿ ಮುಗಿಸಿದ್ದಾರೆ.
5/ 9
ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿರುವ ಪ್ರಥಮ್, 2020 ಇಡೀ ವರ್ಷವೇ ಕೆಟ್ಟದ್ದು.ಅಂತದ್ರಲ್ಲಿ ಒಳ್ಳೇದು ಅಂತ ಏನಾದ್ರೂ ಇದ್ರೆ ಅದು ಇವತ್ತು ಮಾತ್ರ. ಅಯೋಧ್ಯೆ ರಾಮಮಂದಿರ ಪೂಜೆ ! ಇಂತ ಒಳ್ಳೇ ದಿನ ಒಂದು ಒಳ್ಳೇ ಕೆಲ್ಸ ಮಾಡೋಣ ಅಂತ ನಿರ್ಧರಿಸಿದೆ ಎಂದು ಹೇಳಿದ್ದಾರೆ.
6/ 9
ಅಲ್ಲದೆ ನನ್ನ ಕೈಲಿ ಎಷ್ಟು ಸಾಧ್ಯವೇ ಅಷ್ಟು ಮಾಡಿದ್ದೀನಿ. ಈ ಕೆಲಸ ನಿಮ್ಗೆ ಸಮಾಧಾನವಾದರೆ ನೀವು ಸಹ ನಿಮ್ಮ ಸುತ್ತಮುತ್ತಲಿನ ಜನರಿಗೆ ಕೈಲಾದ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಪ್ರಥಮ್ ಮನವಿ ಮಾಡಿದ್ದಾರೆ.
7/ 9
ಅಲ್ಲದೆ ನನ್ನ ಕೈಲಿ ಎಷ್ಟು ಸಾಧ್ಯವೇ ಅಷ್ಟು ಮಾಡಿದ್ದೀನಿ. ಈ ಕೆಲಸ ನಿಮ್ಗೆ ಸಮಾಧಾನವಾದರೆ ನೀವು ಸಹ ನಿಮ್ಮ ಸುತ್ತಮುತ್ತಲಿನ ಜನರಿಗೆ ಕೈಲಾದ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಪ್ರಥಮ್ ಮನವಿ ಮಾಡಿದ್ದಾರೆ.