ನೆರೆಪೀಡಿತರ ನೆರವಿಗೆ ನಿಂತ 'ಅಭಿನಯ ಚತುರ': ನೀನಾಸಂ ಸತೀಶ್ ಕಾರ್ಯಕ್ಕೆ ಅಭಿಮಾನಿಗಳಿಂದ ಬಹುಪರಾಕ್

ಸ್ಯಾಂಡಲ್​ವುಡ್​​ನ ಅಭಿನಯ ಚತುರ ನೀನಾಸಂ ಸತೀಶ್ ನೆರೆಪೀಡಿತ ಸಂತ್ರಸ್ತರ ಕಣ್ಣೀರೊರೆಸಲು ಮುಂದಾಗಿದ್ದಾರೆ. ಪ್ರವಾಹಕ್ಕೊಳಗಾಗಿದ್ದ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿದ 'ಲೂಸಿಯಾ' ನಟ, ನಿರಾಶ್ರಿತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಜಳಪ್ರಳಯದಿಂದ ಸಂಕಷ್ಟಕ್ಕೀಡಾಗಿದ ಗದಗ ಜಿಲ್ಲೆಯ ಹೊಳೆಹೊನ್ನೂರು ಗ್ರಾಮಕ್ಕೆ ಭೇಟಿ ಅಗತ್ಯ ವಸ್ತುಗಳನ್ನು ವಿತರಿಸಿದರು. ಖುದ್ದು ಮನೆ ಮನೆಗಳಿಗೆ ತೆರಳಿದ 'ಅಯೋಗ್ಯ' ನಟ ಅಗತ್ಯ ಸಾಮಾಗ್ರಿ ಹಾಗೂ ಬಟ್ಟೆಗಳನ್ನು ನೀಡಿದರು. ಈ ಹಿಂದೆ ಕೂಡ ಸಾಮಾಜಿಕ ಕಳಕಳಿ ತೋರಿದ್ದ ಸತೀಶ್, ತಾವು ನಿರ್ಮಿಸಿದ್ದ 'ರಾಕೆಟ್' ಚಿತ್ರದಿಂದ ಬಂದ ಲಾಭದ 10% ಅನ್ನು ರೈತ ಕುಟುಂಬಗಳಿಗೆ ನೀಡಿ ಮಾನವೀಯತೆ ಮರೆದಿದ್ದರು. ಇದೀಗ ಬಡ ಕುಟುಂಬಗಳಿಗೆ ಸಾಂತ್ವನ ಹೇಳಿ ದೈರ್ಯ ತುಂಬಿರುವ 'ಕ್ವಾಟ್ಲೆ ಸತೀಶ'ನ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಅಭಿನಯ ಚತುರನ ಕಾರ್ಯಕ್ಕೆ ಬಹುಪರಾಕ್ ಅಂದಿದ್ದಾರೆ.

First published: