Golden Gang: ಈ ವಾರ ಗೋಲ್ಡನ್ ಗ್ಯಾಂಗ್ನಲ್ಲಿ ನೀನಾಸಂ ಸತೀಶ್ ಅಂಡ್ ಟೀಮ್
ಜೀ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ (Golden Star) ಗಣೇಶ್ (Ganesh) ನಡೆಸಿಕೊಡುವ ಸೂಪರ್ ಹಿಟ್ ಕಾರ್ಯಕ್ರಮವೇ ಗೋಲ್ಡನ್ ಗ್ಯಾಂಗ್ (Golden Gang), ಪ್ರತಿ ವೀಕೆಂಡ್ನಲ್ಲಿ (Weekend) ಗೋಲ್ಡನ್ ಗ್ಯಾಂಗ್ಗೆ ಸ್ಯಾಂಡಲ್ವುಡ್ ಯಾವ ಗ್ಯಾಂಗ್ ಬರುತ್ತೆ ಅಂತ ಜನರು ಕಾದು ಕುಳಿತಿರುತ್ತಾರೆ. ಈ ವಾರ ಜನರನ್ನು ರಂಜಿಸಲು ಗೋಲ್ಡನ್ ಗ್ಯಾಂಗ್ಗೆ ನೀನಾಸಂ ಸತೀಶ್ ಅಂಡ್ ಟೀಮ್ ಬರ್ತಿದೆ.
ಪ್ರತಿ ವೀಕೆಂಡ್ನಲ್ಲಿ ಜನರನ್ನೂ ರಂಜಿಸುತ್ತಿರೋ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಈಗಾಗಲೇ ಪ್ರೇಕ್ಷಕರ ಮನಗೆದಿದ್ದೆ. ಗೋಲ್ಡನ್ ಗ್ಯಾಂಗ್ಗೆ ಬಂದ ನೀನಾಸಂ ಸತೀಶ್ ಅಂಡ್ ಟೀಮ್ ಸಖತ್ ಎಂಜಾಯ್ ಮಾಡಿದ್ದಾರೆ
2/ 8
ಈ ಬಾರಿ ನಟ ಸತೀಶ್ ನೀನಾಸಂ ಅವರು ಗೋಲ್ಡನ್ ಗ್ಯಾಂಗ್ ಸೆಟ್ಗೆ ತಮ್ಮ ಸಿನಿಮಾ ಫ್ರೆಂಡ್ಸ್ ಕರೆತಂದಿದ್ದಾರೆ. ಲೂಸಿಯಾ ಹಾಗೂ ಅಯೋಗ್ಯ ಚಿತ್ರ ತಂಡದ ಜೊತೆ ನೀನಾಸಂ ಸತೀಶ್ ಹೇಗೆ ತಮ್ಮ ಫ್ರೆಂಡ್ ಶಿಪ್ ಕಾಪಾಡಿದ್ದಾರೆ ನೋಡಿ
3/ 8
ಸತೀಶ್ಗೆ ಆತ್ಮೀಯರಾಗಿರೋ ಗಾಯಕ ನವೀನ್ ಸಜ್ಜು ತಮ್ಮ ಹಾಗೂ ಸತೀಶ್ ನಡುವಿನ ಕುಚುಕು ಗೆಳೆತನದ ಬಗ್ಗೆ ಗೋಲ್ಡನ್ ಗ್ಯಾಂಗ್ನಲ್ಲಿ ಹಂಚಿಕೊಂಡಿದ್ದಾರೆ.
4/ 8
ನಟಿ ಸಿಂಧು ಲೋಕನಾಥ್ ಅವರು ನೀನಾಸಂ ಜೊತೆ ಲವ್ ಇನ್ ಮಂಡ್ಯ ಚಿತ್ರದಲ್ಲಿ ಅಭಿನಯಿಸಿದ್ರು. ಜೊತೆ ಯಶ್ ಚಿತ್ರ ಡ್ರಾಮಾದಲ್ಲೂ ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಇಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ರು
5/ 8
ಗೋಲ್ಡನ್ ಗ್ಯಾಂಗ್ಗೆ ಬರೋ ಗ್ಯಾಂಗ್ಗೆ ಪ್ರಶ್ನೆಗಳ ಸುರಿಮಳೆ ಸುರಿಸೋ ನಿರೂಪಕ ಗಣೇಶ್ ಸಹ ನೀನಾಸಂ ಸತೀಶ್ ಹಾಗೂ ಅವ್ರ ಟೀಮ್ ಜೊತೆ ಎಂಜಾಯ್ ಮಾಡಿದ್ರು.
6/ 8
ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್, ನಟ ಶಿವರಾಜ್ ಕೆ.ಆರ್ ಪೇಟೆ ಹಾಗೂ ಹಾಸ್ಯನಟ ಗಿರಿ ಸಹ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ
7/ 8
ಗಾಯಕ ನವೀನ್ ಸಜ್ಜು ಸಹ ನೀನಾಸಂ ಸತೀಶ್ ಜೊತೆ ಒಳ್ಳೆಯ ಫ್ರೆಂಡ್ ಶಿಪ್ ಹೊಂದಿದ್ದಾರೆ. ಗೊಲ್ಡನ್ ಗ್ಯಾಂಗ್ಗೆ ಬಂದ ನವೀನ್ ಸಾಂಗ್ ಹಾಡಿ ಎಲ್ಲರನ್ನ ರಂಜಿಸಿದ್ರು.
8/ 8
ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಹಾಗೂ ನಟ ಪೂರ್ಣಚಂದ್ರ ತೇಜಸ್ವಿ ಸಹ ಕಾರ್ಯಕ್ರಮಕ್ಕೆ ಬಂದಿದ್ರು. ಲೂಸಿಯಾ ಚಿತ್ರ ನೀನಾಸಂ ಸತೀಶ್ ಅಭಿನಯದ ಮೊದಲ ಚಿತ್ರವಾಗಿದೆ