PHOTOS: ಇದೇ ಶುಕ್ರವಾರ 'ಪ್ರೀಮಿಯರ್ ಪದ್ಮಿನಿ' ಏರಿ ಚಿತ್ರ ಮಂದಿರಕ್ಕೆ ಬರಲಿದ್ದಾರೆ ಜಗ್ಗೇಶ್
'ಪ್ರೀಮಿಯರ್ ಪದ್ಮಿನಿ' ಸಿನಿಮಾ ಪೋಸ್ಟರ್, ಟ್ರೈಲರ್ ಹಾಗೂ ಹಾಡುಗಳಿಂದಲೇ ಸದ್ದು ಮಾಡಿದ್ದ ಸಿನಿಮಾ. ಶ್ರುತಿ ನಾಯ್ಡು ಜೆ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ನಾಯಕರಾಗಿ ನಟಿಸಿದ್ದು, ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಮೇಶ್ ಇಂದಿರಾ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಹಾಗೂ ರಾಜೇಂದ್ರ ಅರಸ್ ಅವರ ಸಂಕಲನವಿದೆ. ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನದ ಚಿತ್ರಕ್ಕೆ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಬಹಳ ವರ್ಷಗಳ ನಂತರ ನಟಿ ಮಧುಬಾಲ ಮತ್ತೆ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಉಳಿದಂತೆ ಸುಧಾರಾಣಿ, ಪ್ರಮೋದ್, ಹಿತ ಚಂದ್ರಶೇಖರ್, ವಿವೇಕ್ ಸಿಂಹ, ರಮೇಶ್ ಇಂದಿರಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.