ನೀರ್ದೋಸೆ' ಚಿತ್ರದ ಬಳಿಕ ನಿರ್ದೇಶಕ ವಿಜಯ ಪ್ರಸಾದ್ 'ತೋತಾಪುರಿ' ಸಿನಿಮಾದಲ್ಲಿ ಮತ್ತೊಮ್ಮೆ ನವರಸನಾಯಕನಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದಲ್ಲಿ ಧನಂಜಯ್, ಅಧಿತಿ ಪ್ರಭುದೇವ, ಸುಮನ್ ರಂಗನಾಥ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಈ ಸಿನಿಮಾ ಇನ್ನೇನು ತೆರೆಗಪ್ಪಳಿಸಲಿದೆ. ಈ ಕುರಿತಾಗಿಯೇ ಸಿಹಿ ಸುದ್ದಿ ಕೊಟ್ಟಿದ್ದಾರೆ ನವರಸ ನಾಯಕ ಜಗ್ಗೇಶ್. (ಚಿತ್ರಗಳು ಕೃಪೆ: ಜಗ್ಗೇಶ್ ಇನ್ಸ್ಟಾಗ್ರಾಂ ಖಾತೆ)
ನೀರ್ದೋಸೆ' ಚಿತ್ರದ ಬಳಿಕ ನಿರ್ದೇಶಕ ವಿಜಯ ಪ್ರಸಾದ್ 'ತೋತಾಪುರಿ' ಸಿನಿಮಾದಲ್ಲಿ ಮತ್ತೊಮ್ಮೆ ನವರಸನಾಯಕನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
3/ 11
ಸುಮನ್ ರಂಗನಾಥ್ಗೂ ಹಾಗೂ 'ಧೈರ್ಯಂ' ಚಿತ್ರದ ಮೂಲಕ ಸ್ಯಾಂಡಲ್ವುಡ್ ಡೆಬ್ಯೂ ಮಾಡಿರುವ ಅದಿತಿ ಪ್ರಭುದೇವ ಕೂಡ 'ತೋತಾಪುರಿ'ಯಲ್ಲಿ ನಾಯಕಿಯಾಗಿದ್ದಾರೆ.
4/ 11
ವಿಶೇಷ ಅಂದರೆ ಡಾಲಿ ಧನಂಜಯ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
5/ 11
ವಿಜಯ ಪ್ರಸಾದ್ ನಿರ್ದೇಶಿಸಿದ್ದ 'ಸಿದ್ಲಿಂಗು' ಹಾಗೂ 'ನೀರ್ದೋಸೆ' ಚಿತ್ರಗಳನ್ನು ನೋಡಿ ಇಷ್ಟಪಟ್ಟಿದ್ದ ಧನಂಜಯ, ನವರಸ ನಾಯಕ ಜಗ್ಗೇಶ್ ಅವರ ಜತೆ ನಟಿಸುವ ಅವಕಾಶ ಸಿಕ್ಕಿದ್ದೇ ಸಂಭ್ರಮಿಸಿದ್ದರು.
6/ 11
ಚಿತ್ರದ ಚಿತ್ರೀಕರಣದ ಸ್ಟಿಲ್ಸ್ ನೋಡಿದರೆ 'ತೋತಾಪುರಿ' ಅಂತರ್ ಧರ್ಮೀಯ ಪ್ರೇಮ ಕತೆ ಇರಬಹುದಾ ಎಂಬ ಅನುಮಾನ ಮೂಡಿಸುತ್ತೆ.
7/ 11
ಯಾಕೆಂದರೆ, ನಾಯಕ ಜಗ್ಗೇಶ್ ಹಣೆಗೆ ಕುಂಕುಮ ಇಟ್ಟುಕೊಂಡಿದ್ದರೆ, ನಾಯಕಿ ಅದಿತಿ ಬುರ್ಖಾ ಧರಿಸಿ ಮುಸ್ಲಿಂ ಹುಡುಗಿಯಾಗಿ ಹಾಗೂ ಸುಮನ್ ರಂಗನಾಥ್ ಕ್ರೈಸ್ತ ಸಿಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
8/ 11
ಲಾಕ್ಡೌನ್ ತೆರವುಗೊಂಡ ನಂತರ ಅಂದರೆ ಈಗ ಈ ಸಿನಿಮಾದ ಡಬ್ಬಿಂಗ್ ಮತ್ತೆ ಆರಂಭವಾಗಿದೆ.
9/ 11
ಈ ವಿಷಯವನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
10/ 11
ಅತಿಶೀಘ್ರದಲ್ಲಿ ನಿಮ್ಮ ಮುಂದೆ ಬರಲು ಸಿದ್ಧತೆ ನಡೆದಿದೆ. ನೀರ್ದೋಸೆ ನಿರ್ದೇಶಕ ವಿಜಯ್ ಜೊತೆ ಎರಡನೆ ಚಿತ್ರಪಯಣ ನಗುವಿನ ರಸದೌತಣ ಎಂದು ಜಗ್ಗೇಶ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.