ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟ ಹರೀಶ್ ರಾಜ್-ಶ್ರುತಿ..!
ದೀಪಾವಳಿ ಹಬ್ಬದಂದು ನಟಿ ಮಯೂರಿ ಸಹ ಸಿಹಿ ಸುದ್ದಿ ನೀಡಿದ್ದರು. ಈಗ ನಟ ಹರೀಶ್ ರಾಜ್ ಸಹ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಿರುತೆರೆ ಮೂಲಕ ಬೆಳ್ಳಿತೆರೆಗೆ ಬಂದ ಹರೀಶ್ ರಾಜ್ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಹರೀಶ್ ರಾಜ್ ಇನ್ಸ್ಟಾಗ್ರಾಂ ಖಾತೆ)
ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಕೆಲಸ ಮಾಡಿರುವ ನಟ ಹರೀಶ್ ರಾಜ್. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಪ್ರೇಕ್ಷಕರನ್ನು ರಂಜಿಸುವ ಹರೀಶ್ ರಾಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
2/ 11
ಹರೀಶ್ ರಾಜ್ ಹಾಗೂ ಶ್ರುತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
3/ 11
ಇತ್ತೀಚೆಗಷ್ಟೆ ಶ್ರುತಿ ಅವರಿಗೆ ಸೀಮಂತ ಮಾಡಿದ್ದು, ಅದರ ಚಿತ್ರಗಳನ್ನು ಹರೀಶ್ ರಾಜ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
4/ 11
ಜೊತೆಗೆ, ತಮ್ಮ ಕುಟುಂಬ ದೊಡ್ಡದಾಗುತ್ತಿದೆ ಎಂದು ಎರಡನೇ ಮಗುವಿಗೆ ಶ್ರುತಿ ಗರ್ಭಿಣಿಯಾಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ ಈ ನಟ.
5/ 11
ಹರೀಶ್ ರಾಜ್ ಹಾಗೂ ಶ್ರುತಿ ಅವರಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.
6/ 11
2014ರಲ್ಲಿ ಶ್ರುತಿ ಹಾಗೂ ಹರೀಶ್ ರಾಜ್ ಅವರ ವಿವಾಹವಾಗಿತ್ತು.
7/ 11
ನಟ ಹರೀಶ್ ರಾಜ್ ಅವರು ಈ ಹಿಂದೆ ವಂಚನೆ ಆರೋಪದಿಂದಾಗಿ ಸುದ್ದಿಯಲ್ಲಿದ್ದರು.
8/ 11
ಹರೀಶ್ ರಾಜ್ ಅವರು ಬಿಗ್ಬಾಸ್ ಕಾರ್ಯಕ್ರಮದಲ್ಲೂ ಸ್ಪರ್ಧಿಯಾಗಿದ್ದರು.
9/ 11
ಸದ್ಯ ಖಾಸಗಿ ವಾಹಿನಿಯೊಂದರಲ್ಲಿ ಕಾಮಿಡಿ ಕಾರ್ಯಕ್ರಮದ ನಿರೂಪಕರಾಗಿದ್ದಾರೆ.
10/ 11
2009ರಲ್ಲಿ ಕಲಾಕಾರ್ ಹಾಗೂ 2011ರಲ್ಲಿ ಗನ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.