ಪ್ರೇಯಸಿ ಮೇಲೆ ಗುಂಡಿನ ದಾಳಿ ನಡೆಸಿ ಖ್ಯಾತ ನಟ ಆತ್ಮಹತ್ಯೆ..!
Hagen Mills: ಹ್ಯಾಗನ್ ಮಿಲ್ಸ್ ಹಾಲಿವುಡ್ನ ಬಾಸ್ಕೆಟ್ಸ್ ಸಿರೀಸ್ ಮೂಲಕ ಬಣ್ಣದ ಲೋಕದಲ್ಲಿ ಖ್ಯಾತಿಗಳಿಸಿದ್ದರು. ಇದಲ್ಲದೆ ಪಂಕ್ಚರ್ ವೌಂಡ್ಸ್, ಬೋನಿ ಅ್ಯಂಡ್ ಕ್ಲೈಡ್, ಅಬಿಸ್ ಬಿಯಿಂಗ್ ಸೇರಿದಂತೆ ಹಲವು ಹಾಲಿವುಡ್ ಸಿನಿಮಾಗಳಲ್ಲಿ ಹ್ಯಾಗನ್ ಅಭಿನಯಿಸಿದ್ದರು.
ಪ್ರೇಯಸಿ ಮೇಲೆ ಗುಂಡು ಹಾರಿಸಿದ ಬಳಿಕ ಸ್ವಂತ ಗುಂಡು ಹೊಡೆದುಕೊಂಡು ಹಾಲಿವುಡ್ ನಟ ಹ್ಯಾಗನ್ ಮಿಲ್ಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಾಳಿಯಿಂದ ಗಾಯಗೊಂಡಿರುವ ಪ್ರಿಯತಮೆ ಎರಿಕಾ ಪ್ರೈಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2/ 7
ಅಮೆರಿಕದ ಕೆಂಟುಕಿಯಲ್ಲಿರುವ ಹ್ಯಾಗನ್ ಮನೆಯಲ್ಲಿ ಈ ಘಟನೆ ನಡೆದಿದ್ದು, ಪ್ರೇಯಸಿ ಜೊತೆಗಿನ ಭಿನ್ನಾಭಿಪ್ರಾಯದಿಂದ ನಟ ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
3/ 7
ಅಮೆರಿಕದ ಕೆಂಟುಕಿಯಲ್ಲಿರುವ ಹ್ಯಾಗನ್ ಮನೆಯಲ್ಲಿ ಈ ಘಟನೆ ನಡೆದಿದ್ದು, ಪ್ರೇಯಸಿ ಜೊತೆಗಿನ ಭಿನ್ನಾಭಿಪ್ರಾಯದಿಂದ ನಟ ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
4/ 7
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಿಕಾ ಪ್ರೈಸ್ರನ್ನು ಆಸ್ಪತ್ರೆಗೆ ತಲುಪಿಸಿ ಪ್ರಾಣ ಉಳಿಸುವಲ್ಲಿ ಯಶಸ್ವಿಯಾದರು. ಆದರೆ ಪ್ರೇಯಸಿ ಮೇಲೆ ದಾಳಿ ಬಳಿಕ ಹ್ಯಾಗನ್ ಸ್ವತಃ ಗುಂಡು ಹೊಡೆದುಕೊಂಡಿದ್ದರು. ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
5/ 7
ಘಟನೆಗೆ ಸಂಬಂಧಿಸಿದಂತೆ ಮೇಫೀಲ್ಡ್ ಪೊಲೀಸರು ಎರಿಕಾ ಅವರಿಂದ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ದಾಳಿಗೆ ಕಾರಣವೇನು? ಎಂಬ ತನಿಖೆಯನ್ನು ಮುಂದುವರೆಸಿದ್ದಾರೆ.
6/ 7
1990ರ ಆಗಸ್ಟ್ 9ರಂದು ಜನಿಸಿದ್ದ ಹ್ಯಾಗನ್ ಮಿಲ್ಸ್ (29ವರ್ಷ) ಹಾಲಿವುಡ್ನ ಬಾಸ್ಕೆಟ್ಸ್ ಸಿರೀಸ್ ಮೂಲಕ ಬಣ್ಣದ ಲೋಕದಲ್ಲಿ ಖ್ಯಾತಿಗಳಿಸಿದ್ದರು.
7/ 7
ಇದಲ್ಲದೆ ಪಂಕ್ಚರ್ ವೌಂಡ್ಸ್, ಬೋನಿ ಅ್ಯಂಡ್ ಕ್ಲೈಡ್, ಅಬಿಸ್ ಬಿಯಿಂಗ್ ಸೇರಿದಂತೆ ಹಲವು ಹಾಲಿವುಡ್ ಸಿನಿಮಾಗಳಲ್ಲಿ ಹ್ಯಾಗನ್ ಅಭಿನಯಿಸಿದ್ದರು.